ಜೈಲಿಗೆ ಹೋಗುವುದು ನನಗೆ ಅಲಂಕಾರವಿದ್ದಂತೆ: ಅಣ್ಣಾ ಹಜಾರೆ

Posted By: ಧಾರವಾಡ ಪ್ರತಿನಿಧಿ
Subscribe to Oneindia Kannada

ಧಾರವಾಡ, ಜನವರಿ 3 : ಜೈಲಿಗೆ ಹೋಗುವುದು ನನಗೆ ಅಲಂಕಾರವಿದ್ದಂತೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

ರೈತರ ಸಮಸ್ಯೆ ಕುರಿತು ದೆಹಲಿಯಲ್ಲಿ ಆಂದೋಲನ: ಅಣ್ಣಾ ಹಜಾರೆ

ಧಾರವಾಡ ಡಿಸಿ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪ್ ಗೆ ಬುಧವಾರ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಗಡಿಯಲ್ಲಿ ಎಷ್ಟು ಕಷ್ಟ ಇದೆ ಎಂದು ನನಗೆ ತಿಳಿದಿದೆ. ಹದಿನೈದು ವರ್ಷ ಸೇನೆಯಲ್ಲಿದ್ದೆ, ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದೆ ಎಂದರು.

I am pleasure to go jail: Anna Hazare

ನನ್ನ ಜತೆ ಇದ್ದವರು ಕೆಲ ಜನ ಹುತಾತ್ಮರಾದರು, ಆಗ ನಾನು ಉಳಿದಾಗ ಪುನರ್ಜನ್ಮ ಎಂದುಕೊಂಡೆ, ಅಂದು ನನ್ನ ಪುನರ್ ಜನ್ಮವನ್ನು ಸಮಾಜಕ್ಕೆ ಅರ್ಪಣೆ ಮಾಡುವ ಸಮಕಲ್ಪ ಮಾಡಿದೆ. ಅದಕ್ಕಾಗಿ ನಾನು ಮದುವೆಯನ್ನೂ ಆಗಲಿಲ್ಲ.

ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಅಣ್ಣಾ ಹಜಾರೆ ಬಹಿರಂಗ ಸಭೆ

ನನ್ನ ಸೋದರರ ಮಕ್ಕಳ ಹೆಸರೇ ನನಗೆ ಗೊತ್ತಿಲ್ಲ, ಯಾಕೆಂದರೆ ಮರಳೀ ಮನೆಗೆ ಹೋಗಿ ಬಹಳ ವರ್ಷಗಳೇ ಆಯಿತು ಎಂದು ತಾವು ನಡೆದು ಬಂದ ಜೀವನವನ್ನು ಮೆಲುಕು ಹಾಕಿದರು. ಪಾಕಿಸ್ತಾನ ವಿರುದ್ಧದ ಯುದ್ಧದ ಬಳಿಕ ನಮ್ಮ ದೇಶದ ಮನೆಯೊಳಗೆ ಉಳಿದಿರುವ ವೈರಿಗಳ ವಿರುದ್ಧ ನನ್ನ ಯುದ್ಧ ನಡೆದಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social activists Anna Hazare said he would be pleased to go behind the bar for the welfare of the country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ