ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ಸಾವಿರ ಮಠದ ಉತ್ತರಾಧಿಕಾರಿ ಯಾರು?

|
Google Oneindia Kannada News

ಹುಬ್ಬಳ್ಳಿ, ಅ.6 : ಮೂರು ಸಾವಿರ ಮಠದ ಮಠಾಧೀಶ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಪೀಠ ತ್ಯಜಿಸಲು ತೆಗೆದುಕೊಂಡಿರುವ ತೀರ್ಮಾನ ವಿವಾದ ಹುಟ್ಟುಹಾಕಿದೆ. ಶ್ರೀಗಳ ಮನವೊಲಿಸುವ ಕಾರ್ಯ ಒಂದೆಡೆ ನಡೆಯುತ್ತಿದ್ದರೆ, ಮಲ್ಲಿಕಾರ್ಜುನ ಸ್ವಾಮೀಜಿ ಉತ್ತರಾಧಿಕಾರಿಯಾಗಬೇಕೆಂದು ತಿಪಟೂರು ಷಡಕ್ಷರ ಮಠದ ರುದ್ರಮುನಿಸ್ವಾಮಿಗಳು ಹೇಳಿದ್ದಾರೆ. ಇಂದು ಸಂಜೆ ಎಲ್ಲಾ ವಿವಾದಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.

ಮೂರು ಸಾವಿರ ಮಠದ ಹಾಲಿ ಪೀಠಾಧ್ಯಕ್ಷರಾಗಿರುವ ಹಾನಗಲ್ ವಿರಕ್ತ ಮಠದ ಶ್ರೀ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡಲು ಮುಂದಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವುದಾಗಿ ಹೇಳಿದ್ದಾರೆ. ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಬೇಕೆಂದು 1998ರಲ್ಲಿ ಉಯಿಲು ಬರೆಯಲಾಗಿದೆ. ಆದರೆ, ರಾಜ ಯೋಗೀಂದ್ರ ಶ್ರೀಗಳು ಬಾಳೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಗಳನ್ನು ಉತ್ತರಾಧಿಕಾರಿನ್ನಾಗಿ ನೇಮಕ ಮಾಡಲು ತೀರ್ಮಾನಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

Rajayogindra Swami

ಕಾನೂನು ಪ್ರಕಾರ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದು ಭಕ್ತರು ಒತ್ತಾಯ ಮಾಡುತ್ತಿದ್ದಾರೆ. ಸೋಮವಾರ ಸಂಜೆ ಹಾನಗಲ್‍ನಲ್ಲಿ ಮಠದ ಉನ್ನತಾಧಿಕಾರಿ ಸಮಿತಿಯಲ್ಲಿರುವ ಸಿ.ಎಂ.ಉದಾಸಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ನಂತರ ಈ ಕುರಿತ ವಿವಾದ ಬಗೆಹರಿಯುವ ಸಾಧ್ಯತೆ ಇದೆ. ಹಾಲಿ ಇರುವ ರಾಜ ಯೋಗೀಂದ್ರ ಸ್ವಾಮೀಜಿಯವರನ್ನು ಮುಂದುವರೆಯುವಂತೆ ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ. [ಏನಿದು ವಿವಾದ ಇಲ್ಲಿದೆ ಮಾಹಿತಿ]

ಮಲ್ಲಿಕಾರ್ಜುನ ಸ್ವಾಮಿ ಅವರನ್ನು ನೇಮಿಸಿ : ಮೂರುಸಾವಿರ ಶಾಖಾ ಮಠದ ಮುಂದಿನ ಉತ್ತರಾಧಿಕಾರಿಯಾಗಿ ಮಲ್ಲಿಕಾರ್ಜುನ ಸ್ವಾಮೀಜಿಯವರನ್ನು ನೇಮಕ ಮಾಡಬೇಕು ಎಂದು ತಿಪಟೂರು ಷಡಕ್ಷರ ಮಠದ ರುದ್ರಮುನಿಸ್ವಾಮಿಗಳು ಸೋಮವಾರ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಮಾತನಾಡಿದ ಅವರು ಮಠದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನಸ್ವಾಮಿ ಅವರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಘಟಪ್ರಭಾದಲ್ಲಿರುವ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಕಡೆಗಣಿಸಿ ತೆರೆಮರೆಯಲ್ಲಿ ಮತ್ತೊಬ್ಬರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲು ಯತ್ನ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಭಕ್ತರು ಸೋಮವಾರವೂ ಮಠದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೌನವ್ರತ ಆಚರಣೆ ಮಾಡುತ್ತಿದ್ದು, ವಿವಾದದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
A dispute erupted over the choice of a successor to the Mooru Savira Mutt Hubli, Karnataka. Sri Gurusiddha Rajayogindra Swami had chosen Sri Dingaleshwar Swami to head the Mooru Savira Mutt after him. Several devotees opposed this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X