ಅಬ್ಬಾ ಏನ್ ಬಿಸಿಲೈತ್ರಿ ಧಾರವಾಡದಾಗ

Dharwad
ಧಾರವಾಡ, ಏ. 27 : ಅಬ್ಬ ಏನ್ ಬಿಸಿಲು, ಅದೇನ್ ಬಿಸಿಲು...! ಇದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರ ಉದ್ಗಾರ. ಅವಳಿ ನಗರ ಹಿಂದೆಂದೂ ಕಾಣದ ಬಿಸಿಲ ಧಗೆಯನ್ನು ಎದುರಿಸುತ್ತಿದ್ದು, ಜನತೆ ಬಿಸಿಲಿನಿಂದ ತತ್ತರಿಸಿ ಹೋಗಿದ್ದಾರೆ. ಹುಬ್ಬಳ್ಳಿ-ಧಾರವಾಡದ ಉಷ್ಟಾಂಶ 40 ಡಿಗ್ರಿಗೆ ಮುಟ್ಟಿದ್ದು, ಜನರನ್ನು ಕಂಗೆಡಿಸಿದೆ.

ಮಲೆನಾಡ ಸೆರಗಿನ ಪ್ರದೇಶವಾಗಿರುವ ಧಾರವಾಡದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಉಷ್ಣಾಂಶ ಬಳ್ಳಾರಿ, ರಾಯಚೂರಿನಂತೆ 40 ಡಿಗ್ರಿ ದಾಟಿ ಹೋಗುತ್ತಿದೆ. ಈ ಬಾರಿಯಂತೂ ತಾಪಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶುಕ್ರವಾರದಿಂದ ಹುಬ್ಬಳ್ಳಿ-ಧಾರವಾಡದಲ್ಲಿ ತಾಪಮಾನ 40 ಡಿಗ್ರಿಗಿಂತ ಹೆಚ್ಚಾಗಿದ್ದು, ಜನರು ಪರದಾಡುತ್ತಿದ್ದಾರೆ. [ಬೆಂಗಳೂರಿನ ಬಿಸಿಲಿಗೆ ಜನರು ಸುಸ್ತು]

ಎಷ್ಟಿದೆ ತಾಪಮಾನ : ಧಾರವಾಡದಲ್ಲಿ ಗರಿಷ್ಠ ಎಂದರೆ 36 ಡಿಗ್ರಿ ತಾಪಮಾನ ದಾಖಲಾಗುತ್ತಿತ್ತು. ಆದರೆ, ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ 39, 40, 41, 42 ಡಿಗ್ರಿಗಳಷ್ಟು ತಾಪಮಾನ ದಾಖಲಾಗಿದೆ. ಧಾರವಾಡದ ಸುತ್ತಲೂ ಹಸಿರು ಕಂಗೊಳಿಸುವುದರಿಂದ ರಾತ್ರಿ ವೇಳೆಗೆ ತಾಪಮಾನ ಸ್ವಲ್ಪ ಕಡಿಮೆಯಾಗುತ್ತದೆ. ಆದ್ದರಿಂದ ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ 42 ಡಿಗ್ರಿ ತಾಪಮಾನವಿದ್ದರೆ, ಧಾರವಾಡದಲ್ಲಿ 40 ಡಿಗ್ರಿ ತಾಪಮಾನ ದಾಖಲಾಗಿತ್ತು. ಶನಿವಾರ ಹುಬ್ಬಳ್ಳಿಯಲ್ಲಿ 42 ಡಿಗ್ರಿ ಇದ್ದರೆ, ಧಾರವಾಡದಲ್ಲಿ 40 ಡಿಗ್ರಿ ಇತ್ತು. ಭಾನುವಾರ ಬೆಳಗ್ಗೆ ಧಾರವಾಡದಲ್ಲಿ ಗರಿಷ್ಠ 37 ಡಿಗ್ರಿ ತಾಪಮಾನವಿದ್ದರೆ, ಹುಬ್ಬಳ್ಳಿಯಲ್ಲಿಯೂ 36 ಡಿಗ್ರಿ ತಾಪಮಾನವಿದೆ.

ನಗರ ವಿಸ್ತರಿಸುತ್ತಿದೆ : ಹುಬ್ಬಳ್ಳಿ-ಧಾರವಾಡ ನಗರ ದಿನಕಳೆದಂತೆ ಬೆಳೆಯುತ್ತಿದೆ. ಆದ್ದರಿಂದ ಕಾಡನ್ನು ನಾಶ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ತಾಪಮಾನ ಏರಿಕೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಡಿನ ನಾಶ ಹೀಗೆ ಮುಂದುವರೆದರೆ, ರಾಯಚೂರು, ಬಳ್ಳಾರಿಯಂತೆ ಹುಬ್ಬಳ್ಳಿ-ಧಾರವಾಡ ಬಿರುಬಿಸಿಲು ಅನುಭವಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+