ನರೇಂದ್ರ ಮೋದಿ ಆಗಮನ, ಹುಬ್ಬಳ್ಳಿ ತುಂಬ ವಿಶೇಷ ಗಮನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಮೇ 28: ಪ್ರಧಾನಿ ನರೇಂದ್ರ ಮೋದಿ ನಾಳೆ ರವಿವಾರ ಮೇ 29 ರಂದು ಬೆಳಗ್ಗೆ 11 ಗಂಟೆಗೆ ನಗರದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯಲಿದ್ದಾರೆ.

ಎಮ್ ಡಿ ಎ ಸರಕಾರ 2 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಆಯೋಜಿಸಿರುವ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಲಿರುವ ಮೋದಿ, ಹುಬ್ಬಳ್ಳಿಯಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಲಿದ್ದಾರೆ.[ರಾಜನ್ ನೇಮಕ ಮಾಧ್ಯಮಗಳಿಗೆ ಸಂಬಂಧಿಸಿಲ್ಲ: ಮೋದಿ]

hubballi

ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸಲು ದಾವಣಗೆರೆಯಲ್ಲಿ ಮೇ 29ರ ಸಂಜೆ 4 ಗಂಟೆಗೆ ಮೆರವಣಿಗೆ ಮತ್ತು ಸಮಾವೇಶ ಆಯೋಜನೆ ಮಾಡಲಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದಾವಣಗೆರೆ ಸದ್ಯ ಕೇಸರಿಮಯವಾಗಿ ಬದಲಾಗಿದೆ.

ವಿಶೇಷ ಕಾರು : ದಾವಣಗೆರೆಯ ಹೆಲಿಪ್ಯಾಡ್ ನಿಂದ ಸಭೆ ನಡೆಯುವ ಸ್ಥಳದವರೆಗೂ ಮತ್ತು ಪ್ರಧಾನಿ ಸಂಚರಿಸಲು ದೆಹಲಿಯಿಂದ ವಿಶೇಷ ಬುಲೆಟ್ ಪ್ರೂಫ್ ಕಾರು ಬಂದಿದೆ. ಈ ಕಾರನ್ನು ದೆಹಲಿಯಿಂದ ವಿಶೇಷ ಭದ್ರತೆಯಲ್ಲಿ ತರಲಾಗಿದೆ. ಈಗಾಗಲೇ ಕಾರು ದಾವಣಗೆರೆ ತಲುಪಿದೆ.[ಇರಾನ್ ಜತೆ ಕರಾರು, ಈಗ ಪಾಕ್ ಮಾಡಲಿ ತಕರಾರು?]

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭಾರೀ ಭದ್ರತೆ : ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದ ವಿಮಾನ ನಿಲ್ದಾಣಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ ಎಂದು ಹು-ಧಾ ಪೊಲೀಷ್ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ. ಪ್ರಧಾನಿ ಹುಬ್ಬಳ್ಳಿಗೆ ಬಂದಿಳಿಯುವ ಕಾರಣಕ್ಕೆ ಎರಡು ಸೇನಾ ಹೆಲಿಕಾಪ್ಟರ್ ಗಳು ಆಗಮಿಸಿದ್ದು ನಗರದ ಮೇಲೆ ಗಸ್ತು ತಿರುಗುತ್ತಿವೆ.[ಮೇ 29ರಂದು ದಾವಣಗೆರೆಯಲ್ಲಿ ಮೋದಿ ಸಮಾವೇಶ]

ಮೂವರು ಡಿಸಿಪಿ, ನಾಲ್ವರು ಎಸಿಪಿ, ಹದಿನೈದು ಸಿಪಿಐ, 23 ಪಿಎಸ್ಐ, 41 ಎಎಸ್ಐ, 73 ಮುಖ್ಯಪೇದೆ, 433 ಪೊಲೀಸ್ ಪೇದೆ, 24 ಮಹಿಳಾ ಪೇದೆ, 1, ಚನ್ನಮ್ಮ ವಾಹನ, 1 ಶಿವಾಜಿ ವಾಹನ, 7 ಸಿಎಆರ್, 10 ಕೆಎಸ್ಆರ್ ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: In view of the Prime Minister Narendra Modi's public rally on Sunday, elaborate security arrangements are being made besides taking up cleanliness drives across the city. Modi will address the rally at the government boys high school ground at Davanagere, Narendra Modui will arrive Hubballi Airport on 29 May 11 am.
Please Wait while comments are loading...