ಹುಬ್ಬಳ್ಳಿ: ಜನರನ್ನು ಆಕರ್ಷಿಸದ ಪ್ರಧಾನಿ ಮೋದಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮೇ. 29: : ನಗರದ ವಿಮಾನ ನಿಲ್ದಾಣದ ಮೂಲಕ ದಾವಣಗೆರೆಗೆ ಪ್ರಧಾನಿ ಮೋದಿ ತೆರಳಲಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಿಗೆ ಗೊತ್ತಿದ್ದರೂ ಒಬ್ಬರೂ ವಿಮಾನ ನಿಲ್ದಾಣದಲ್ಲಿ ಕಂಡು ಬರಲಿಲ್ಲ.

ಸಾಮಾನ್ಯವಾಗಿ ರಾಷ್ಟ್ರನಾಯಕರು, ಸಿನಿಮಾ ನಟರು ಮುಂತಾದವರು ವಿಮಾನ ನಿಲ್ದಾಣಕ್ಕೆ ಬಂದಾಗ ಜನತೆ ಅವರನ್ನು ನೋಡಲು ಬರುವುದು ಸಾಮಾನ್ಯ ಸಂಗತಿ. ಆದರೆ ಮೋದಿ ಮೇನಿಯಾ ಎಂದು ಎಲ್ಲೆಡೆ ಘಂಟಾಘೋಷವಾಗಿ ಪಕ್ಷ ಹೇಳಿಕೊಳ್ಳುತ್ತದೆ. ಆದರೆ, ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸದಿರುವುದು ಮೋದಿ ಮೇನಿಯಾ ಹುಬ್ಬಳ್ಳಿಯಲ್ಲಿ ಇಲ್ಲವೆಂದು ತೋರಿಸಿ ಕೊಟ್ಟಂತಾಯಿತು.

ಈ ಹಿಂದೆ ಶೆರೇವಾಡದ ಯೋಧ ಹನುಮಂತಪ್ಪ ಹುತಾತ್ಮನಾದಾಗ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ 11 ರ ಹೊತ್ತಿಗೂ ಸಾವಿರಾರು ಜನರು ಬಂದಿದ್ದರು. [ವಿಕಾಸ ಪರ್ವಕ್ಕೆ ಹೊರಟ ಮೋದಿಗೆ ಪ್ರತಿಭಟನೆ ಬಿಸಿ]

Hubballi : No Modi Mania near Airport

ಭಾರತೀಯ ವಾಯು ಸೇನೆಯ ಬಿಬಿಜೆ ಏರ್ ಕ್ರಾಪ್ಟ್ ಮೂಲಕ ಮಧ್ಯಾಹ್ನ 3.20 ಕ್ಕೆ ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿಯವರನ್ನು ಹು- ಧಾ ಮೇಯರ್ ಮಂಜುಳಾ ಅಕ್ಕೂರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ. ಮಣಿವಣ್ಣನ್ , ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ,ಹು-ಧಾ ಪೋಲಿಸ್ ಆಯುಕ್ತ ಪಾಂಡುರಂಗ ರಾಣೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರು ,ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಹು-ಧಾ ಉಪ ಮೇಯರ್ ಲಕ್ಷ್ಮೀ ಉಪ್ಪಾರ, ಧಾರವಾಡ ಉಪ ವಿಭಾಗಾಧಿಕಾರಿ ಚಂದ್ರಶೇಖರ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ನಂತರ ಪ್ರಧಾನಿ ಮೋದಿ ಅವರು ಎಂಐ-ಬಿ /17 ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಿದರು.[ಮೋದಿ ಆಗಮನ, ಹುಬ್ಬಳ್ಳಿ ತುಂಬ ವಿಶೇಷ ಗಮನ]

ಬಾರದ ಬಿಜೆಪಿ ಧುರೀಣರು: ನಗರದ ಹಲವಾರು ಬಿಜೆಪಿ ಧುರೀಣರು ವಿಮಾನ ನಿಲ್ದಾಣಕ್ಕೆ ಆಗಮಿಸಿರಲಿಲ್ಲ. ಬಹಳಷ್ಟು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ದಾವಣಗೆರೆ ಸಮಾವೇಶಕ್ಕೆ ತೆರಳಿದ್ದರಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕಾರ್ಯಕರ್ತರು, ಬಿಜೆಪಿ ಬಾವುಟ, ಕೇಸರಿ ಬಾವುಟ ಏನೂ ಕಾಣಲಿಲ್ಲ. ಎಲ್ಲಿ ನೋಡಿದಲ್ಲಿ ಪೊಲೀಸರೇ ಕಾಣುತ್ತಿದ್ದರು.

ದಾವಣಗೆರೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ರವಿವಾರ ಮಧ್ಯಾಹ್ನ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ವಿಶೇಷ ಹೆಲಿಕಾಪ್ಟರ್ ನಲ್ಲಿ ತೆರಳಿದರು.

ಹುಬ್ಬಳ್ಳಿ: ಜನರನ್ನು ಆಕರ್ಷಿಸದ ಪ್ರಧಾನಿ ಮೋದಿ

ಹುಬ್ಬಳ್ಳಿ: ಜನರನ್ನು ಆಕರ್ಷಿಸದ ಪ್ರಧಾನಿ ಮೋದಿ

-
-
-
-
-

ಸಂಜೆ 6-30 ಕ್ಕೆ ದಾವಣಗೆರೆಯಿಂದ ಮರಳಿ ಬಂದು ವಿಶೇಷ ವಿಮಾನದಲ್ಲಿ ನವದೆಹಲಿಗೆ ಮರಳಲಿದ್ದಾರೆ. ಎರಡು ಸೇನಾ ಹೆಲಿಕಾಪ್ಟರ್ ಗಳು ಮತ್ತೊಂದು ಪ್ರಧಾನಿ ಮೋದಿಯವರ ವಿಶೇಷ ಹೆಲಿಕಾಪ್ಟರ್ ಸೇರಿ ಒಟ್ಟು ಮೂರು ಹೆಲಿಕಾಪ್ಟರ್ ಗಳು ದಾವಣಗೆರೆಗೆ ತೆರಳಿದವು.

ಮಾಧ್ಯಮದವರಿಗೆ ನಿರ್ಬಂಧ: ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸುವ ಸುದ್ದಿ ಗೊತ್ತಿದ್ದ ನಗರದ ಪತ್ರಕರ್ತರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಮಾಧ್ಯಮದವರನ್ನು ವಿಮಾನ ನಿಲ್ದಾಣದ ಗೇಟ್ ಹೊರಗಡೆ ನಿಲ್ಲಿಸಲಾಗಿತ್ತು.

ಕೆಲವೊಂದು ಪತ್ರಿಕಾ ಛಾಯಾಗ್ರಾಹಕರನ್ನು ಮಾತ್ರ ಒಳಗೆ ಬಿಟ್ಟಿದ್ದು ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಮೊಬೈಲ್ ಜಾಮರ್ ಅಳವಡಿಸಿದ್ದುದರಿಂದ ಯಾರೂ ಯಾರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. 500 ಮೀಟರ್ ವ್ಯಾಪ್ತಿಯಲ್ಲಿನ ಮೊಬೈಲ್ ಗಳ ನೆಟ್ ವರ್ಕ್ ಬಂದ್ ಆಗುವುದರಿಂದ ಪತ್ರಕರ್ತರಿಗೂ ಕೆಲವು ಸಮಸ್ಯೆಗಳಾದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi : No Modi Mania near Airport. PM Narendra Modi was due to attend Vikas Parv Rally in Davanagere so he had no schedule to come out of the airport may be the reason. Modi fans and BJP local leaders were not seen near Airport today(May 29)
Please Wait while comments are loading...