ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 06: ಅರೇ, ಇದೇನು ಹುಬ್ಬಳ್ಳಿ ಮಹಾನಗರ ಮೇಯರ್ ಮಂಜುಳಾ ರವಿ ಅಕ್ಕೂರು ಬಸ್ ಏರ್ತಾ ಇದ್ದಾರೆ ಅಂದುಕೊಂಡ್ರಾ? ಓಹೋ ಯಾವುದೋ ಪರಿಶೀಲನೆಗೆ ಹೊರಟಿದ್ದಾರೆ ಅಂದುಕೊಂಡ್ರಾ? ಹಾಗೇನು ಇಲ್ಲ,, ಇದು ಹುಬ್ಬಳ್ಳಿ ಮಹಾನಗರ ಪಾಲಿಕೆಯ ವಾಹನದ ವ್ಯವಸ್ಥೆಯ ಆವಾಂತರಕ್ಕೆ ಒಂದು ಉದಾಹರಣೆ ಅಷ್ಟೆ.

ವಾಹನ ಕೈ ಕೊಟ್ಟ ಕಾರಣ ಸ್ವತಃ ಮೇಯರ್ ಅವರೇ ಬಸ್ ಮೂಲಕ ಮನೆ ಸೇರಬೇಕಾಗಿ ಬಂದದ್ದು ಹುಬ್ಬಳ್ಳಿ ಪಾಲಿಕೆಯ ಕತೆ ಹೇಳುತ್ತದೆ. ಗುದ್ಲೆಪ್ಪ ಹಳ್ಳಿಕೇರಿ ಮತ್ತು ಎಸ್ ಆರ್ ಬೊಮ್ಮಾಯಿ ಜನ್ಮದಿನದ ಕಾರ್ಯಕ್ರಮಕ್ಕೆಂದು ತೆರಳಿದ್ದ ಮೇಯರ್ ಮನಗೆ ದ್ವಿಚಕ್ರ ವಾಹನದಲ್ಲಿ ತೆರಳಿದರು.[ಹುಬ್ಬಳ್ಳಿಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ]

hubballi

ಮೇಯರ್ ತೆರಳಿದ್ದ ವಾಹನದ ಕೂಲೆಂಟ್ ಪೈಪ್ ತುಂಡಾದ ಪರಿಣಾಮ ಆಯಿಲ್ ಸೋರಲು ಆರಂಭವಾಗಿದೆ. ಇನ್ನು ಈ ವಾಹನದಲ್ಲಿ ಸಂಚಾರ ಸಾಧ್ಯವಿಲ್ಲ ಎಂದು ದೃಢಪಡಿಸಿಕೊಂಡ ಮೇಯರ್ ಮತ್ತೊಂದು ವಾಹನ ಕಳಿಸಿಕೊಡುಂತೆ ತಿಳಿಸಿದ್ದಾರೆ. ಆದರೆ ಪಾಲಿಕೆಯ ಯಾವ ಅಧಿಕಾರಿಗಳು ಮೇಯರ್ ಮಾತನ್ನು ಕಿವಿಗೆ ಹಾಕಿಕೊಂಡಿಲ್ಲ.[ಹುಬ್ಬಳ್ಳಿಯಲ್ಲಿ ಬಿಎಸ್ಸೆನ್ನೆಲ್ ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಬಂದ್]

ಇದೇ ಮೊದಲಲ್ಲ: ಮೇಯರ್ ಹಿಂದೆ ಪರಿಶೀಲನೆಗೆ ತೆರಳಿದ್ದಾಗ ಸಹ ಇಂಥದ್ದೇ ಅವಘಡಗಳು ನಡೆದಿತ್ತು. ವಾಹನ ಕೈ ಕೊಡುತ್ತಿರುವ ಅಂಶವನ್ನು ಮೇಯರ್ ಪಾಲಿಕೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮೇಯರ್ ತಮಗಾದ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: This is the story reflecting Hubballi Mahanagara Palike Vehicle systems pathetic condition.
Please Wait while comments are loading...