ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿ ನಂತರ ಮುಂದೇನು? ಸಿಗಲಿದೆ ಮಾರ್ಗದರ್ಶನ

By Madhusoodhan
|
Google Oneindia Kannada News

ಹುಬ್ಬಳ್ಳಿ,ಜೂನ್ 11- 'ದಿ ಹಿಂದು' ದಿನಪತ್ರಿಕೆಯು ಪ್ರತಿ ವರ್ಷದಂತೆ ಈ ಬಾರಿಯೂ ಪಿಯುಸಿ ವಿದ್ಯಾರ್ಥಿಗಳ ನೆರವಿಗಾಗಿ 'ವೃತ್ತಿ ಮಾರ್ಗದರ್ಶನ' ಕಾರ್ಯಕ್ರಮವನ್ನು ಆಯೋಜಿಸಿದೆ.

'ದಿ ಹಿಂದು ಎಜುಕೇಷನ್ ಪ್ಲಸ್ ಕರಿಯರ್ ಕೌನ್ಸೆಲಿಂಗ್' ಕಾರ್ಯಕ್ರಮವು ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದ 'ಬಯೊಟೆಕ್ ಹಾಲ್'ನಲ್ಲಿ ಇದೇ ಭಾನುವಾರ ಜೂನ್ 12 ರಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ನಡೆಯಲಿದ್ದು, ವಿವಿಧ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಅವರಲ್ಲಿನ ವೃತ್ತಿಪರ ಹಾಗೂ ಇತರೆ ಕೋರ್ಸ್ ಗಳ ಬಗೆಗಿನ ಗೊಂದಲಗಳನ್ನು ಪರಿಹರಿಸಲಿದ್ದಾರೆ. [ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ]

students

ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಕಾರ್ಯಕ್ರಮವನ್ನು ಉದ್ಧಾಟಿಸಲಿದ್ದು, ಸಿಇಟಿ ಸಂಯೋಜಕ ಜಿ.ಎ. ತಿಗಡಿ, ಬೆಂಗಳೂರಿನ ಸಿಗ್ಮಾ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮೀನ್-ಎ-ಮುದಸ್ಸರ್, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ದತ್ತಾತ್ರೇಯ ಡಿ. ಬಂಟ್, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶ್ರೀಕಾಂತ ವಣಕುದುರೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. [ಹುಬ್ಬಳ್ಳಿ ಸಾಧಕಿಯರಿಗೊಂದು ಸಲಾಂ]

ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು, ಪಿಯುಸಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ 30 ನಿಮಿಷ ಮುಂಚಿತವಾಗಿ ಬಂದು ಸ್ಥಳದಲ್ಲಿಯೇ ನೋಂದಣಿ ಮಾಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ರಾಜೀವ್ ಜೋಷಿ (9448069879), ಮಂಜುನಾಥ್ ಕುಸುಬಿ (9342933206), ದಿ ಹಿಂದು ಕಚೇರಿ (0836- 2333703/4) ಸಂಪರ್ಕಿಸಬಹುದು.

English summary
The Hindu News paper will conduct a career guidance event for PUC students on June 12, at Hubballi. To guide the students in choosing the right career.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X