ಹುಬ್ಬಳ್ಳಿ: ಮೈಸೂರು ಸ್ಯಾಂಡಲ್ ಸೋಪ್ ಕದ್ದೊಯ್ದ ಕಳ್ಳರು!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 15: ಎಟಿಎಂ ಕಳ್ಳತನ, ಅಡಿಕೆ ಲಾರಿ ಕಳ್ಳತನ, ಡಿಸೇಲ್ ಕಳ್ಳತನ ಎಲ್ಲವನ್ನು ಕೇಳಿದ್ದೇವೆ. ಅದೇ ಸಾಲಿಗೆ ಈಗ ಮತ್ತೊಂದು ಹೊಸ ಸೇರ್ಪಡೆ.

ಹುಬ್ಬಳ್ಳಿಯ ಉಣಕಲ್ ಕ್ರಾಸ್ ನಲ್ಲಿ ನಿಲ್ಲಿಸಿದ ಲಾರಿಯೊಂದರಿಂದ 1.50 ಲಕ್ಷ ರೂ. ಮೌಲ್ಯದ ಮೈಸೂರು ಸ್ಯಾಂಡಲ್ ಸೋಪ್ ಕಳ್ಳತನ ಮಾಡಲಾಗಿದೆ.[ಶತಕ ಬಾರಿಸಿದ ಕರ್ನಾಟಕದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್]

hubballi

ಚಾಲಕ ಮಂಜುನಾಥ ದೊಡ್ಡಮನಿ ಎಂಬುವವರು ಇಲ್ಲಿನ ಟಿಂಬರ್ ಯಾರ್ಡ್ ರಸ್ತೆಯಲ್ಲಿ ಲಾರಿ ನಿಲ್ಲಿಸಿ ಲಾರಿಯ ಒಳಗಡೆ ಮಲಗಿದ್ದರು. ಅವರು ಮಲಗಿದ ಸಮಯದಲ್ಲಿ ಲಾರಿಯ ಹೊದಿಕೆಯನ್ನು ಕತ್ತರಿಸಿದ ಕಳ್ಳರು ಮೈಸೂರು ಸ್ಯಾಂಡಲ್ ಸೋಪ್ ಗಳಿದ್ದ 70 ಬಾಕ್ಸ್ ಗಳನ್ನು ಕದ್ದು ಪರಾರಿಯಾಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ವೈಫೈ: ಧಾರವಾಡಕ್ಕೂ ಶೀಘ್ರ]

ಮಟ್ಕಾ ಬುಕ್ಕಿ ಬಂಧನ : ನಗರದ ಎಸ್.ಎಂ.ಕೃಷ್ಣಾ ನಗರದಲ್ಲಿ ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಸಮೀರ ಖಾಲೀದ ಮಕಾನದಾರ ಎಂಬ ಬುಕ್ಕಿಯನ್ನು ಕಸಬಾಪೇಟ ಪೊಲೀಸರು ಬಂಧಿಸಿದ್ದಾರೆ.

ರಾಜೀವಗಾಂಧಿ ಶಾಲೆಯ ಬಳಿ ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಸಮೀರನಿಂದ ಪೊಲೀಸರು 450 ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Total 70 soap boxes has stolen.
Please Wait while comments are loading...