ಕುಂದಗೋಳದಲ್ಲಿ ಭಾರೀ ಮಳೆ: ಮತದಾನಕ್ಕೂ ಮೊದಲೇ ಸೋರುತಿದೆ ಮತಗಟ್ಟೆ

ಧಾರವಾಡ, ಮೇ 09: ಪ್ರಜಾಪ್ರಭುತ್ವದ ಹಬ್ಬ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನವೇ ಮತಗಟ್ಟೆಯ ಸೂರೊಂದು ಸೊರುತ್ತಲಿದೆ. ನಾಳೆ ಮೇ.10 ರಂದು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಮತಗಟ್ಟೆ ಎರಡು ಬೂತ್ ನಿರ್ಮಾಣ ಮಾಡಲಾಗಿದೆ.

ಅದರಲ್ಲಿ ಬೂತ್ ಒಂದರ ಶಾಲೆಯ ಮಾಳಿಗೆ ಸೋಮವಾರ ಮಧ್ಯಾಹ್ನ ಸುರಿದ ಮಳೆಗೆ ಮತಗಟ್ಟೆ ಸೋರುತ್ತಿದೆ. ಕೊಠಡಿಯೊಳಗೆ ಸಂಪೂರ್ಣ ನೀರು ಮಯವಾಗಿದ್ದು, ಮೇಲ್ಛಾವಣಿಯಿಂದ ಹನಿ ಹನಿ ನೀರು ತೊಟ್ಟಿಕ್ಕುತ್ತಿದೆ. ಇನ್ನು ಕೊಠಡಿಯ ಗೋಡೆಗಳು ಕಿಟಕಿಗಳು ಹಸಿ ಹಸಿಯಾಗಿವೆ.

Heavy Rain at Hubballi- Dharwad

ಇತ್ತ ಒಂದೇಡೆ ಮೂಲೆಯಲ್ಲಿ ಮತಗಟ್ಟೆಗೆ ಆಗಮಿಸಿದ ಅಧಿಕಾರಿಗಳು ಮತಯಂತ್ರ ಜೋಡಿಸುವ ಹಾಗೂ ಸಾಮಗ್ರಿ ಹೊಂದಿಸಿಕೊಳ್ಳುವಲ್ಲಿ ನಿರತರಾಗಿದ್ದು, ನಾಳೆ ಜೋರಾದ ಮಳೆಯಾದಲ್ಲಿ ಮತದಾನದ ಬೂತ್ ಒಳಗೆ ನೀರು ಸೇರಲಿದೆ. ಸದ್ಯ ಮತದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಧಿಕಾರಿಗಳು ಸೊರುವ ಶಾಲೆ, ಗೋಡೆ ಮೇಲೆ ಸಿಮೇಂಟ್ ತೆಪೆ ಕಂಡು ಬಂದರೂ ಯಾಕೆ ? ನಿಷ್ಕಾಳಜಿ ತೋರಿದ್ದಾರೆ ಎಂಬುದರ ಬಗ್ಗೆ ಚುನಾವಣೆ ಅಧಿಕಾರಿ ತಹಶೀಲ್ದಾರ ಗಮನ ಹರಿಸಬೇಕಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ವರುಣನ ಅಬ್ಬರಕ್ಕೆ ಧರೆಗುರುಳಿದ ಮರ: ಸಂಚಾರ ವ್ಯತ್ಯಯ...!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳಿದ್ದು, ಸಂಚಾರ ವ್ಯತ್ಯಯವಾಗಿದೆ. ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ವರುಣನ ಅಬ್ಬರಕ್ಕೆ ಮರವೊಂದು ಧರೆಗೆ ಉರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಏಕಾಏಕಿ ಸುರಿದ ಭಾರೀ ಮಳೆಗೆ ರಸ್ತೆಗಳು ಜವಾವೃತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

Heavy Rain at Hubballi- Dharwad

ಅಕಾಲಿಕವಾಗಿ ಸುರಿದ ವರುಣನ ಅಬ್ಬರಕ್ಕೆ ಹುಬ್ಬಳ್ಳಿಯ ಜನರು ನಲುಗಿ ಹೋಗಿದ್ದಾರೆ. ಸತತವಾಗಿ ಎರಡು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದ ಕೆಲವೊಂದು ಭಾಗಗಳಲ್ಲಿ ಹಾನಿವುಂಟಾಗಿದೆ. ಅದೇ ರೀತಿ ಗಾಳಿ, ಗುಡುಗು ಮಳೆಯಿಂದ ನಗರದ ಸುಳ್ಳ ರಸ್ತೆ ಕೇಶ್ವಾಪೂರದಲ್ಲಿ ಬೃಹತ್ ಬೇವಿನ ಮರವೊಂದ ಧರೆಗುರುಳಿದೆ. ಇದರಿಂದಾಗಿ ಕೆಲ ಸಮಯ ಸಂಚಾರ ವ್ಯತ್ಯಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+