• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ಗ್ರಾ.ಪಂ ಸಿಬ್ಬಂದಿ ಸಾವು: ಪರಿಹಾರಕ್ಕಾಗಿ 1.5 ವರ್ಷದಿಂದ ಪತ್ನಿ ಅಲೆದಾಟ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್‌ 17 : ಮಹಾಮಾರಿ ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ವಿದೇಶದಿಂದ ಬಂದ ಕೊರೊನಾ ಕಾಯಿಲೆಯಿಂದ ದೇಶದ ಲಕ್ಷಾಂತರ ಜನ ಬಲಿಯಾಗಿದ್ದಾರೆ. ಸದ್ಯ ಕೊರೊನಾ ಕಾಯಿಲೆ ಕ್ರಮೇಣ ಕಡಿಮೆಯಾಗಿದ್ದು, ಜನ ಎಂದಿನಂತೆ ಜೀವನ ನಡೆಸುತ್ತಿದ್ದಾರೆ.

ಕೊರೊನಾ ತೊಗಲಿದರು ಅದರ ಕರಿ ಛಾಯೆ ಇನ್ನೂ ಹಾಗೆ ಇದೆ. ಈ ಕಾಯಿಲೆಯ ಹೊಡೆತದಿಂದ ಎಷ್ಟೋ ಜ‌ನ ಉದ್ಯೋಗವನ್ನು ಕಳೆದುಕೊಂಡರೆ, ಇನ್ನು ಎಷ್ಟೋ ಜನ ತಂದೆ,ತಾಯಿ, ಸಹೋದರ ಸಹೋದರಿಯನ್ನು ಕಳೆದುಕೊಂಡಿದ್ದಾರೆ.

ಹುಬ್ಬಳ್ಳಿ: 75ರ ವಯಸ್ಸಿನಲ್ಲಿ ಪತ್ನಿಯ ಅಕ್ಕನನ್ನೇ ಎರಡನೇ ಮದುವೆಯಾದ ಮಾಜಿ ಮೇಯರ್‌ಹುಬ್ಬಳ್ಳಿ: 75ರ ವಯಸ್ಸಿನಲ್ಲಿ ಪತ್ನಿಯ ಅಕ್ಕನನ್ನೇ ಎರಡನೇ ಮದುವೆಯಾದ ಮಾಜಿ ಮೇಯರ್‌

ಕೊರೊನಾಕ್ಕೆ ಬಲಿಯಾದ ಜನರ ಕುಟುಂಬಗಳು ಈಗಲೂ ಪರದಾಡುತ್ತಿವೆ. ಸರ್ಕಾರದಿಂದ ಸಿಗುವ ಪರಿಹಾರವೂ ಬರದೇ ಕಂಗಾಲಾಗಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ರೋಗಿಗಳ ಜಿ.ಪಿ.ಎಸ್ ವೇಳೆ ತಗುಲಿದ ಸೋಂಕು

ರೋಗಿಗಳ ಜಿ.ಪಿ.ಎಸ್ ವೇಳೆ ತಗುಲಿದ ಸೋಂಕು

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮ ಪಂಚಾಯತಿಯಲ್ಲಿ ನಿರಂತರವಾಗಿ 10 ವರ್ಷಗಳ ಕಾಲ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸಿದ್ದ ಪ್ರಕಾಶ‌ ಯಲ್ಲಪ್ಪ ಹೂಗಾರ ಕೊರೊನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಗುಡಿಸಾಗರ ಗ್ರಾಮ ಪಂಚಾಯತಿಯ ಆದೇಶ ಮೇರೆಗೆ ಗುಡಿಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಡಿಸಾಗರ, ಸೊಟಕನಾಳ. ನಾಗನೂರ ಮತ್ತು ಕಡದಳ್ಳಿ ಗ್ರಾಮಗಳಲ್ಲಿ ಕೋವಿಡ್‌ 19 ಸಂದರ್ಭದಲ್ಲಿ ಸೋಂಕಿತರನ್ನು ಮನೆ ಮನೆಗೆ ಹೋಗಿ ರೋಗಿಗಳ ಜಿ.ಪಿ.ಎಸ್. ಮಾಡುವಾಗ ರೋಗಿಗಳ ಸಂಪರ್ಕದಿಂದ ಪ್ರಕಾಶ‌ ಯಲ್ಲಪ್ಪ ಅವರಿಗೆ ಕೋವಿಡ್‌ 19 ಸೋಂಕು ತಗುಲಿತ್ತು. ಅವರು ನವಲಗುಂದ ತಾಲೂಕು ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಫಲಕಾರಿಯಾಗದೆ ದಿನಾಂಕ 27/5/ 2021ರಲ್ಲಿ ಮೃತಪಟ್ಟರು.

ಒಂದೂವರೆ ವರ್ಷದಿಂದ ಪರಿಹಾರಕ್ಕಾಗಿ ಅಲೆದಾಟ

ಒಂದೂವರೆ ವರ್ಷದಿಂದ ಪರಿಹಾರಕ್ಕಾಗಿ ಅಲೆದಾಟ

ಪ್ರಕಾಶ‌ ಯಲ್ಲಪ್ಪ ಮೃತಪಟ್ಟ ನಂತರ ಅವರ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ಸರ್ಕಾರದಿಂದ ಬರುವ ಪರಿಹಾರ ಈವರೆಗೂ ಆ ಕುಟುಂಬಕ್ಕೆ ಬಂದಿಲ್ಲ. ಅದಕ್ಕಾಗಿ ಮೃತರ ಪತ್ನಿ ಶಿಲ್ಪಾ ಪ್ರಕಾಶ ಹೂಗಾರ ಅವರು ಕಳೆದ ಒಂದೂವರೆ ವರ್ಷದಿಂದ ಅಲೆದಾಡುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ಸಿಗುತ್ತಿಲ್ಲ. ನವಲಗುಂದ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಗೊಗರೆದರು ಕೂಡಾ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಿಲ್ಪಾ ನೋವು ತೋಡಿಕೊಂಡಿದ್ದಾರೆ.

ಪರಿಹಾರ ವಿಚಾರದಲ್ಲಿ ನಮ್ಮ ಪ್ರಯತ್ನ ಮುಗಿದಿದೆ ಎನ್ನುವ ಅಧಿಕಾರಿಗಳು

ಪರಿಹಾರ ವಿಚಾರದಲ್ಲಿ ನಮ್ಮ ಪ್ರಯತ್ನ ಮುಗಿದಿದೆ ಎನ್ನುವ ಅಧಿಕಾರಿಗಳು

ಪ್ರಕಾಶ್ ಹೂಗಾರ ಅವರು ಕೆಲಸ ಮಾಡಿರುವ ಬಗ್ಗೆ ಎಲ್ಲ ಪತ್ರಗಳು ಸರಿಯಾಗಿದ್ದರೂ, ನವಲಗುಂದ ತಾಲೂಕು ಪಂಚಾಯತಿ ಅಧಿಕಾರಿಗಳು ಪ್ರಕಾಶ್ ಹೂಗಾರ ಅವರು ಕೋವಿಡ್‌ ಸಮಯದಲ್ಲಿ ಕೆಲಸವನ್ನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಪರಿಹಾರ ವಿಚಾರದಲ್ಲಿ ನಮ್ಮ ಪ್ರಯತ್ನ ಮುಗಿದಿದೆ, ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಅವರನ್ನು ಭೇಟಿ ಮಾಡಿ ಎಂದು ನವಲಗುಂದ ತಾಲೂಕು ಪಂಚಾಯತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಅವರು, ಮೃತ ಪ್ರಕಾಶ್ ಹೂಗಾರ ಅವರ ಕಾಗದ ಪತ್ರಗಳನ್ನು ನೋಡದೆ ನಮಗೆ ಆಗಲ್ಲ ಎನ್ನುತ್ತಾರೆ.

ಪರಿಹಾರಕ್ಕಾಗಿ ಅಲೆದ ಮಹಿಳೆ ಅಳಲು

ಪರಿಹಾರಕ್ಕಾಗಿ ಅಲೆದ ಮಹಿಳೆ ಅಳಲು

ಇನ್ನು ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂದು ಸಿಇಓ ಸುರೇಶ ಹಿಟ್ನಾಳ ಸಿಡುಕಿ ಹೇಳುತ್ತಿದ್ದಾರೆ ಎಂದು ಮೃತರ ಪತ್ನಿ ಶಿಲ್ಪಾ ಪ್ರಕಾಶ್ ಹೂಗಾರ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. "ನಮ್ಮ ಪತಿಯೇ ನಮ್ಮ ಕುಟುಂಬದ ಜೀವನಾಧಾರವಾಗಿದ್ದರು. ಅವರ ಮೃತರಾದ ಮೇಲೆ ನಾನು ಒಬ್ಬಂಟಿಯಾಗಿದ್ದೇನೆ. ಚಿಕ್ಕ ಎರಡು ಮಕ್ಕಳಿದ್ದು, ನಾನು ಹೇಗೆ ಜೀವನ ನಡೆಸಲಿ ಎಂದು ಶಿಲ್ಪಾ ಹೂಗಾರ ಅವರು ತಮ್ಮ ಅಳಲು ತೋಡಿಕೊಂಡರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನೊಂದ ಕುಟುಂಬಕ್ಕೆ ನೆರವಾಗಬೇಕಿದೆ.

English summary
Grama panchayat staff died due to Corona his Wife wanders for relief fund from one and half year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X