ಧಾರವಾಡ: 25 ಗಣೇಶ ಕರಗಿಸಲು ತೆಗೆದುಕೊಂಡಿದ್ದು ಕೇವಲ 2 ಗಂಟೆ
ಧಾರವಾಡ, ಆಗಸ್ಟ್ 27: ಧಾರವಾಡ ಜಿಲ್ಲೆ ಕೆಲಗೇರಿಯ ಗಾಯತ್ರಿಪುರಂನಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ ಎಂಬುವವರು ಕೇವಲ ಎರಡು ಗಂಟೆಗಳಲ್ಲಿ 25 ಸಾರ್ವಜನಿಕ ಗಣೇಶಗಳನ್ನು ಕರಗಿಸಿದ್ದಾರೆ.
Recommended Video
ಮೂರು ಟ್ರ್ಯಾಕ್ಟರ್ ಟ್ರೈಲರ್ ಗಳನ್ನು ಬಳಸಿಕೊಂಡು, ಗಣೇಶ ಮೂರ್ತಿ ಕರಗಿಸಲು ಕೇವಲ 1 ಸಾವಿರ ಲೀಟರ್ ನೀರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಪೈಪ್ ಮೂಲಕ ತುಂತುರು ನೀರು ಬಿಡುವ ಮೂಲಕ ಮಣ್ಣಿನ ಗಣೇಶನನ್ನು ಕರಗಿಸಲಾಯಿತು.
ಗಣೇಶ ಮೂರ್ತಿ ಕರಗಿಸಿದ ನಂತರ ಆ ಮಣ್ಣಿನಲ್ಲಿ ತುಳಸಿ ಗಿಡ ನೆಟ್ಟು, ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸುವ ಮೂಲಕ ಕಲಾವಿದ ಮಂಜುನಾಥ್ ಹಿರೇಮಠ ಜನರ ಗಮನ ಸೆಳೆದಿದ್ದಾರೆ. ಜಲ ಮೂಲಗಳು ಮಲೀನವಾಗುವುದನ್ನು ತಡೆಯಲು ಕಲಾವಿದ ಮಂಜುನಾಥ್ ಹಿರೇಮಠ ಅವರು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಪ್ರಾತಿನಿಧಿಕ ಚಿತ್ರ
ಇದೇ ವೇಳೆ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ಜನಜಾಗೃತಿ ಅಧ್ಯಕ್ಷ ಬಸವರಾಜ ಕೊರವರ ಅವರು ನಿರ್ಮಿಸಿದ ಮಣ್ಣಿನ ಹೊಂಡದಲ್ಲಿ ಬುಧವಾರ ಸಂಜೆ 60 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಧಾರವಾಡದ ವನವಾಸಿ ರಾಮಮಂದಿರದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗ, ರೋಟರಿ ಕ್ಲಬ್, ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೆ ಇನ್ನೂ ಹಲವು ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂತಹ ಪರಿಸರ ಸ್ನೇಹಿ ಕೆಲಸಗಳು ಸಮಾಜದಲ್ಲಿ ಇನ್ನು ಹೆಚ್ಚು ಹೆಚ್ಚು ನಡೆಯಲಿ ಎನ್ನು ಪರಿಸರ ಪ್ರೇಮಿಗಳ ಆಶಯವಾಗಿದೆ.












Click it and Unblock the Notifications