ಮಹದಾಯಿ: ಶೀಘ್ರ ಪರಿಹಾರಕ್ಕೆ ಸಿದ್ದರಾಮ ಸ್ವಾಮೀಜಿ ಒತ್ತಾಯ
ಧಾರವಾಡ, ಆಗಸ್ಟ್. 27: ಮಹದಯಿ ಯೋಜನೆ ಬಗ್ಗೆ ಶೀಘ್ರವೇ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಯೋಜನೆ ಜಾರಿ ಸಂಬಂಧ ಯಾವುದೇ ರಾಜಕೀಯ ಕಾರಣಗಳಿಗೆ ಆಸ್ಪದ ನೀಡಬಾರದು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹದಾಯಿ ನೀರು ಹಂಚಿಕೆಗೆ ಸರಳ ಸೂತ್ರ ಸೂಚಿಸಬೇಕು ಎಂದು ಕೇಳಿಕೊಂಡಿದ್ದಾರೆ.[ಸಿಡಿದೆದ್ದ ಉತ್ತರ ಕರ್ನಾಟಕದ ಜನ]

ಧಾರವಾಡದಲ್ಲಿ ನಡೆದ ಮಠಾಧೀಶರು ಮತ್ತು ಉತ್ತರ ಕರ್ನಾಟಕದ ರೈತ ಮುಖಂಡರ ಸಭೆಯಲ್ಲಿ ಗುರುವಾರ ಮಾತನಾಡಿ, ಪ್ರಧಾನಿಯವರನ್ನು ಭೇಟಿ ಮಾಡಿದ ಸರ್ವಪಕ್ಷಗಳ ನಿಯೋಗದ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಎಲ್ಲವೂ ಹುಸಿಯಾಯಿತು. ಮೋದಿ ಮತ್ತು ಅವರ ಪಕ್ಷದಿಂದ ಇಂಥ ನಡೆಯನ್ನು ನಾವು ಇಟ್ಟುಕೊಂಡಿರಲಿಲ್ಲ ಎಂದು ಹೇಳಿದರು.[ಸರ್ವ ಪಕ್ಷಗಳ ಪ್ರಧಾನಿ ಭೇಟಿ ವಿಫಲವಾಗಿದ್ದೇಕೆ?]
200 ಟಿಎಂಸಿಗೂ ಅಧಿಕ ನೀರನ್ನು ಗೋವಾ ವ್ಯರ್ಥ ಮಾಡುತ್ತಿದ್ದು ಅರಬ್ಬಿಸಮುದ್ರ ಸೇರುತ್ತಿದೆ. ಗೋವಾ ಸರ್ಕಾರ ಈ ಬಗ್ಗೆ ಯೋಚಿಸಿ ರೈತರ ಹಿತದೃಷ್ಟಿಯಿಂದ ಉತ್ತಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಜನರು ಹಿಂಸಾಚಾರಕ್ಕೆ ಇಳಿದಿರುವುದನ್ನು ಖಂಡಿಸಿದ ಸ್ವಾಮೀಜಿ, ಹೋರಾಟ ಮಾಡುತ್ತ ಸಾರ್ವಜನಿಕ ಆಸ್ತಿ ಹಾಳು ಮಾಡುವುದು ಸರಿಯಲ್ಲ ಎಂದು ಹೇಳಿದರು. ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಶೋಕ್ ಪೂಜಾರಿ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು.












Click it and Unblock the Notifications