ಧಾರವಾಡ: ಪೊಲೀಸ್ ಹೆಸರಿನಲ್ಲಿ ವಿಡಿಯೋ ಕಾಲ್: ಹೆದರಿದ್ರೆ ಹಣ ಕೀಳುವ ಸೈಬರ್ ಗ್ಯಾಂಗ್

ಧಾರವಾಡ, ಅಕ್ಟೋಬರ್ 27: ಬೆಂಗಳೂರಿನ ವ್ಯಾಪ್ತಿಯಲ್ಲಿ ವಿಡಿಯೋ ಕರೆ ಮಾಡಿ CBI ಎಂದು ಬೆದರಿಸಿದ್ದ, ಡ್ರಗ್ಸ್ ಕೇಸ್ ಹೆಸರಿನಲ್ಲಿ ಮಗನನ್ನು ಬಂಧಿಸಿದ್ದೇವೆ ಹಣ ಕೊಡಿ ಎಂದಿದ್ದ ಸೈಬರ್ ವಂಚಕರ ಗ್ಯಾಂಗ್ ಇದೀಗ ಧಾರವಾಡದಲ್ಲೂ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ ಹೊಸ ರೀತಿಯ ಸೈಬರ್ ವಂಚಕರ ಜಾಲವೊಂದು ಸಕ್ರಿಯವಾಗಿದೆ. ಪೊಲೀಸ್ ಎಂದು ಯಾಮಾರಿದರೂ ನಿಮ್ಮ ಹಣ ಕೈ ಬಿಡುವುದು ಗ್ಯಾರೆಂಟಿ.

ಹೌದು, ತಂತ್ರಜ್ಞಾನ ಯುಗದಲ್ಲಿ ಸೈಬರ್ ವಂಚಕರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಎಷ್ಟೇ ಹುಷಾರಾಗಿದ್ದರೂ ಕೂಡ ವಂಚಕರ ವರಸೆ ದಿನದಿಂದ ದಿನಕ್ಕೆ ಇನ್ನಷ್ಟು ಅಪ್ಡೇಡ್ ಆಗುತ್ತಿದೆ. ವಾಟ್ಸಾಪ್ ವಿಡಿಯೋ ಕರೆ ಮಾಡಿ ಬೆದರಿಸಿ ಹೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಘಟನೆಗಳು ಧಾರವಾಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿವೆ. ವಿಡಿಯೋ ಕಾಲ್ ಮೂಲಕ ವಾರೆಂಟ್ ವಂಚನೆ ನಡೆಸಲಾಗುತ್ತಿದೆ. ನಾಗರಿಕರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

Dharwad People Threatened by Name of Police in Video Call Police Says it s Cyber Fraud Be aware

ಧಾರವಾಡದಲ್ಲಿ ಹೊರ ರೀತಿಯ ಸೈಬರ್ ಅಪರಾಧ ಚಟುವಟಿಕೆ ನಡೆಸುವ ಗ್ಯಾಂಗ್ ಸಕ್ರಿಯವಾಗಿದೆ. ಈವರೆಗೆ ನಿಮಗೆ ಕರೆ ಮಾಡಿ ಬ್ಯಾಂಕ್‌ನವರ ಹೆಸರಿನಲ್ಲಿ ಒಟಿಪಿ ಪಡೆದು ಹಣ ಎಗರಿಸುತ್ತಿದ್ದ ಕಳ್ಳರು ಇದೀಗ ಇದೀಗ ಪೊಲೀಸರು, ಸಿಬಿಐ ಹೆಸರಿನಲ್ಲಿ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ವಂಚನೆ ಮಾಡತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಮುಂಬೈ ಪೊಲೀಸರೆಂದು ಹೇಳಿ ವಂಚನೆ ಯತ್ನ

ಪೊಲೀಸ್ ಯುನಿಫಾರ್ಮ್, ಪೊಲೀಸ್ ಠಾಣೆಯ ಸೆಟ್ ಹಿನ್ನೆಲೆ ಇಟ್ಟುಕೊಂಡು ನಾಗರಿಕರಿಗೆ ವಾಟ್ಸಾಪ್ ಇನ್ನಿತರ ಮೂಲಕ ವಿಡಿಯೋ ಕರೆ ಮಾಡಿ ನೇರವಾಗಿ ವಂಚನೆ ಮಾಡಲಾಗುತ್ತಿದೆ.

Dharwad People Threatened by Name of Police in Video Call Police Says it s Cyber Fraud Be aware

ತಾವು ಮುಂಬೈ, ದೆಹಲಿ ಪೊಲೀಸರು ಎಂದು ಹೇಳಿ ನಿಮಗೆ ವಿಡಿಯೋ ಕಾಲ್ ಮಾಡುತ್ತಾರೆ. ಇಂತಹ ವಿಡಿಯೋ ಕರೆಗಳು ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೂ ಬರುತ್ತಿವೆ. ನೋಡಲು ಒರಿಜಿನಲ್ ಪೊಲೀಸರ ಎಂದುಕೊಳ್ಳುವಂತೆ ಡಿಪಿ ಇಟ್ಟುಕೊಂಡು ಕರೆ ಮಾಡುತ್ತಾರೆ. ಕರೆ ಮಾಡಿ ನಕಲಿ ಅರೆಸ್ಟ್ ವಾರೆಂಟ್ ತೋರಿಸಿ ಹಣ ಪೀಕುವ ಘಟನೆಗಳು ವರದಿ ಆಗಿವೆ.

ವಾರೆಂಟ್ ನಕಲಿ ಪ್ರತಿ ವಾಟ್ಸಾಪ್, ಡ್ರಗ್ಸ್ ಹೆಸರಿನಲ್ಲಿ ಬೆದರಿಕೆ

ವಾಟ್ಸಾಪ್ ಕರೆ ಅಷ್ಟೆ ಯಾಕೆ ನಿಮಗೆ ವಾಟ್ಸಾಪ್ ಮಾಡಿ ಬಂದನದ ವಾರೆಂಟ್ ನಕಲಿ ಪ್ರತಿ ಕಳುಹಿಸಿ ಹೆದರಿಸುತ್ತಾರೆ. ನಿಮ್ಮ ಹೆಸರಿನಲ್ಲಿ ಪಾರ್ಸಲ್ ಸಿಕ್ಕಿದೆ ಎಂಬ ಬೆದರಿಕೆ ಹಾಕುತ್ತಾರೆ. ಈ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಹೆದರಿಕೆ ಹಾಕುತ್ತಾರೆ. ನೀವು ಅಕ್ರಮ ಹಣ ವರ್ಗಾವಣೆಯಲ್ಲಿ ಸಿಲುಕಿದ್ದೀರಾ ಎಂದು ಒಂದೊಂದೇ ಕಾರಣಗಳನ್ನು ಕರೆಯಲ್ಲಿ ಹೇಳುತ್ತಾರೆ.

ಬೆದರಿಕೆ ಹಣ ವರ್ಗಾವಣೆಗೆ ಬೇಡುವ ವಂಚಕರು

ನಾವು ನಿಮ್ಮ ಮಾಹಿತಿಯನ್ನು ಹಣಕಾಸು ಇಲಾಖೆಯಿಂದ ತೆಗೆದುಕೊಂಡಿದ್ದೇವೆ. ವಾರೆಂಟ್ ನಲ್ಲಿ ತೋರಿಸುತ್ತಾರೆ. ಬಂಧಿಸಬಾರದು ಎಂದರೆ ಇಲ್ಲಿಯೇ ಸೆಟ್ಲ್ ಮಾಡಿಕೊಳ್ಳಿ ಎಂದು ಹೇಳಿ ಇಂತಿಷ್ಟು ಹಣ ಕೊಡುವಂತೆ ಬೇಡಿಕೆ ಇಡುತ್ತಾರೆ. ಕೂಡಲೇ ಈ ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುವಂತೆ ತಿಳಿಸಿದ್ದಾರೆ. ವಿಡಿಯೋ ಕಾಲ್ ಕಟ್ ಮಾಡದಂತೆ ಧಮ್ಕಿ ಹಾಕುತ್ತಾರೆ.

ಬೆದರಿಕೆಗೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಕೇಳುತ್ತಾರೆ. ಬೆದರಿಸಿ ನಿಮಗೆ ವಂಚನೆ ಮಾಡುತ್ತಾರೆ. ಇಂತಹ ವಿಡಿಯೋ ಕಾಲ್ ಬಂದರೆ, ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಜನ ಈಗಾಗಲೇ ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಜನರು ಇಂತಹ ವಿಷಯಗಳಲ್ಲಿ ಧೈರ್ಯದಿಂದ ಇರಬೇಕು. ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಹೆದರಬೇಡಿ. ಬೆದರಿಕೆಯ ವಿಡಿಯೋ, ಸಾಮಾನ್ಯ ಕರೆ ಬಂದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆ ತಿಳಿಸಬೇಕು.

CEN ಠಾಣೆಯಲ್ಲಿ ದಾಖಲಾಗುತ್ತಿವೆ ಇಂತಹ ಅನೇಕ ಪ್ರಕರಣ ಅಲ್ಲಿ ದೂರು ಕೊಡಿ ಎಂದು ಅವರು ಮಾಹಿತಿ ನಿಡಿದ್ದಾರೆ.

ಸಿಬಿಐ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಂಚನೆ

ಇಂತ ವಿಡಿಯೋ ಕರೆಗಳು ಬೆಂಗಳೂರಿನ ಜನರಿಗೂ ಬಂದಿವೆ. ನಾವು ದೆಹಲಿ ಸಿಬಿಐನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಮಗ/ಮಗಳನ್ನು ಬಂಧಿಸಿದ್ದೇವೆ. ಡ್ರಗ್ಸ್ ಕೇಸಿನಲ್ಲಿ ಬಂಧಿಸಲಾಗಿದೆ ಎಂದು ವಾರೆಂಟ್ ತೋರಿಸುತ್ತಾರೆ. ಬಂಧಿತರನ್ನು ಬಿಡುಗಡೆ ಮಾಡಲು ನಮಗೆ ಕೂಡಲೇ ಹಣ ಕಳುಹಿಸಿ, ಕರೆ ಕಟ್ ಮಾಡದಂತೆ ಸೂಚನೆ ನೀಡುತ್ತಾರೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ವಂಚನೆಗಳು ಬೇರೆ ಬೇರೆ ರೀತಿಯಲ್ಲಿ ತಲೆ ಎತ್ತುತ್ತಿವೆ. ಈ ಕುರಿತು ಪೋಷಕರು ಭಯಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+