ಬೆಂಗಳೂರು ಬ್ಲಾಸ್ಟ್ ಮುಚ್ಚಿ ಹಾಕಲು ಕಾಂಗ್ರೆಸ್ ಯತ್ನ: ಪ್ರಹ್ಲಾದ್ ಜೋಶಿ
ಧಾರವಾಡ, ಏಪ್ರಿಲ್ 14: ಕರ್ನಾಟಕ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಬೇಸತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕಾಂಗ್ರೆಸ್ ನವರು ಬೆಂಗಳೂರು ಕೆಫೆ ಬ್ಲಾಸ್ಟ್ ವಿಚಾರವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವರು ಆದ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಆರೋಪಿಸಿದರು.
ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರಹ್ಲಾದ್ ಜೋಶಿಯವರು, ಬೆಂಗಳೂರು ಬ್ಲಾಸ್ಟ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಘಟನೆಯನ್ನು ಸಿಲೆಂಡರ್ ಸ್ಪೋಟ ಎಂದು ಹೇಳಿದ್ದರು. ಗೃಹ ಮಂತ್ರಿ ಸೇಡಿನಿಂದ ಹೀಗಾಗಿದೆ ಎಂದು ಅವರು ಆಪಾದಿಸಿದರು. ಸಿಲಿಂಡರ್ ಸ್ಪೋಟ ಎಂದು ಮುಚ್ಚಿಹಾಕುವ ಯತ್ನ ನಡೆಸಿದ್ದರು ಎಂದರು.

ಉಗ್ರರಿಗೆ ಕಾಂಗ್ರೆಸ್ ಅನುಕಂಪ: ಪ್ರಹ್ಲಾದ್ ಜೋಶಿ
ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ನಡತೆ ಸರಿ ಇಲ್ಲ. ತಮ್ಮ ಮತ ಬ್ಯಾಂಕ್ ಗಾಗಿ, ವೋಟ್ ಬ್ಯಾಂಕ್ ರಾಜಕರಾಣಕ್ಕಾಗಿ ಟೇರಿರಿಸ್ಟ್ ಗಳಿಗೆ ಕಾಂಗ್ರೆಸ್ ಪಕ್ಷ ಅನುಕಂಪ ತೋರಿಸುತ್ತಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಗ್ಯಾರೆಂಟಿ ಯೋಜನೆಗಳು ಲೋಕಸಭಾ ಚುಣಾವಣೆಯ ನಂತರ ಇರುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷದಲ್ಲಿ ಏನು ಮಾಡಿದೆ? ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಲಿಷ್ಠವಾದ ಮೇಲೆ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಮೈಸೂರನಲ್ಲೇ ಸಿದ್ದರಾಮಯ್ಯಗೆ ಭಯ ಕಾಡುತ್ತಿದೆ
ಸಿಎಂ ಸಿದ್ದರಾಮಯ್ಯ ಅವರನ್ನು ಇತ್ತಿಚೆಗೆ ಶ್ರೀನಿವಾಸ್ ಪ್ರಸಾದ ಅವರ ಭೇಟಿ ವಿಚಾರ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಸ್ವ ಕ್ಷೆತ್ರದಲ್ಲಿ ಭಯ ಶುರುವಾಗಿದೆ. ಹಿರಿಯ ದಲಿತ ನಾಯಕನನ್ನು ಹಿನಾಯವಾಗಿ ಕೆಟ್ಟದಾಗಿ ನಡೆಸಿಕ್ಕೊಂಡಿದ್ದಾರೆ. ಇವತ್ತು ಅವರ ಮನೆಗೆ ಹೋಗುತ್ತಾರೆ ಅಂದರೆ ಏನಿದರ ಅರ್ಥ.

ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರ ಮೈಸೂರಿನಲ್ಲಿ ಸೋಲಿನ ಭಯ ಶುರುವಾಗಿದೆ. ಹೀಗಾದರೆ ರಾಜ್ಯದಲ್ಲಿ ಕಾಂಗ್ರೆಸ್ ಕತೆ ಏನಾಗಲಿದೆ ಎಂಬದು ಗೊತ್ತಾಗುತ್ತದೆ ಎಂದು ಕುಟಕಿದರು.
ಪ್ರಧಾನಿಯವರ ಮೇಲೆ ಜನರ ವಿಶ್ವಾಸ
ಧಾರವಾಡ ಕ್ಷೇತ್ರದ ಕಣವಿ ಹೊನ್ನಾಪೂರ ಗ್ರಾಮ ಸೇರಿದಂತೆ ಮೂರು ನಾಲ್ಕು ಗ್ರಾಮಗಳಲ್ಲಿ ಅವರು ಅದ್ಧೂರಿ ಚುನಾವಣೆ ಪ್ರಚಾರ ನಡೆಸಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಪರ ಅಲೆ ಇದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಎರಡು ಭಾರಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇರುವ ಜನರ ವಿಶ್ವಾಸ ಹಾಗೇ ಇದೆ. ಇತ್ತ ಕಳೆದ 10 ವರ್ಷದಿಂದ ದೇಶ ಅಭಿವೃದ್ಧಿಯತ್ತ ಸಾಗಿದೆ. ಮತ್ತೊಂದು ಕಾಂಗ್ರೆಸ್ ಪಕ್ಷದಿಂದ ಜನರು ಬೇಸತ್ತಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications