ಹುಬ್ಬಳ್ಳಿ ಗ್ರಾಮೀಣರ ಕನಿಷ್ಟ ನ್ಯಾಯದ ಅರಿವಿಗೆ ಕಾನೂನು ಸಾಕ್ಷರತಾ ರಥ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಏಪ್ರಿಲ್,೦೨: ಗ್ರಾಮೀಣ ಮಟ್ಟದಲ್ಲಿ ಎಲ್ಲರಿಗೂ ನ್ಯಾಯ ಹಾಗೂ ಕಾನೂನಿನ ಅರಿವನ್ನು ಮೂಡಿಸುವುದು ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯದ ಉದ್ದೇಶವಾಗಿದೆ ಎಂದು ಧಾರವಾಡ ಜಿಲ್ಲಾ ನ್ಯಾಯಾಧೀಶರಾದ ಪ್ರಕಾಶ ಎಲ್ ನಾಡಗೇರ ಹೇಳಿದರು.

ಹುಬ್ಬಳ್ಳಿ ನ್ಯಾಯಾಲಯ ಆವರಣದಲ್ಲಿ ಶನಿವಾರ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ಹುಬ್ವಳ್ಳಿ ವಕೀಲರ ಸಂಘ, ಅಭಿಯೋಜನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಕ್ಷಣ, ಕಾರ್ಮಿಕ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.[ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಚಿತ್ತ ಹರಿಸಿದ ನಿತಿನ್ ಗಡ್ಕರಿ]

Dharwad judge inaugurates the Law Literacy Chariot in Hubballi

ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಕಾಶ ಎಲ್ ನಾಡಗೇರ ಅವರು, 'ಇಂದಿನ ಆಧುನಿಕ ಯುಗದಲ್ಲಿ ಎಲ್ಲರಲ್ಲೂ ಕನಿಷ್ಟ ಕಾನೂನು ಅರಿವು ಇರಬೇಕಾಗಿದೆ. ರಾಜ-ಮಹಾರಾಜರೂ ತಮ್ಮದೇ ಆದ ಕಾನೂನು ಜ್ಞಾನದೊಂದಿಗೆ ರಾಜ್ಯವನ್ನು ಸುಸಜ್ಜಿತವಾಗಿ ನೋಡಿಕೊಳ್ಳುತ್ತಿದ್ದರು' ಎಂದರು.

ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ನರಗುಂದ ಮಾತನಾಡಿ, 'ಜನ ಸಾಮಾನ್ಯರಿಗೂ ನ್ಯಾಯ ದೊರಕಬೇಕು. ಆರಂಭವಾದ ಕಾನೂನು ಸಾಕ್ಷರತಾ ರಥವು ಗ್ರಾಮೀಣ ಮಟ್ಟಕ್ಕೆ ತಲುಪಿ ಕಾನೂನಿನ ಅರಿವನ್ನು ಜನ ಸಾಮಾನ್ಯರಿಗೆ ತಿಳಿಸುವುದರೊಂದಿಗೆ ಜನತಾ ನ್ಯಾಯಲಯವನ್ನು ನಡೆಸುತ್ತಿರುವುದು ಸಂತೋಷದ ವಿಷಯ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದರು.[ಹುಬ್ಬಳ್ಳಿಯಲ್ಲಿ ಯುವಕನಿಗೆ ಚಾಕು ಇರಿತ, ತಿಂಗಳಾಂತ್ಯಕ್ಕೆ 5ನೇ ಕೊಲೆ]

Hubballi

ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಗೋಪಾಲಕೃಷ್ಣ ಕೊಳ್ಳಿ, ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶೆ ವಿಪುಲಾ ಎಮ್. ಬಿ. ಪೂಜಾರಿ , 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕಿರಣ. ಎಚ್. ಗಂಗಣ್ಣವರ , ತಹಸೀಲ್ದಾರ ಎಚ್.ಡಿ. ನಾಗಾವಿ , ಸರಕಾರಿ ಅಭಿಯೋಜಕ ಪ್ರಕಾಶ ಎಸ್. ಸುಂಕದ, ಉತ್ತರವಲಯ ಎ.ಸಿ.ಪಿ. ಎಸ್. ಬಿ. ಛಬ್ಬಿ ವಾರ್ತಾ ಇಲಾಖೆಯ ಅಧೀಕ್ಷಕ ವಿನೋದಕುಮಾರ ಡಿ. ಭಾಗವಹಿಸಿದ್ದರು.[ಹುಬ್ಬಳ್ಳಿ: ರೈಲ್ವೆ ಅಧಿಕಾರಿ ಬಂಧನ ಖಂಡಿಸಿ ರೊಚ್ಚಿಗೆದ್ದ ಸಿಬ್ಬಂದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Law Literacy Chariot and Janatha court inaugurateed by Dharwad judge Prakash L Nadagera in Hubballi on Saturday, April 02nd
Please Wait while comments are loading...