ಆಗಸ್ಟ್ 1ರಿಂದ ಧಾರವಾಡ ಐಐಟಿ ತರಗತಿಗಳು ಆರಂಭ

Posted By:
Subscribe to Oneindia Kannada

ಧಾರವಾಡ, ಜುಲೈ 22 : ಧಾರವಾಡದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ತರಗತಿಗಳು ಆಗಸ್ಟ್ 1ರಿಂದ ಆರಂಭವಾಗಲಿವೆ. ಜುಲೈ 31ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೆಡೇಕರ್ ಅವರು ಐಐಟಿ ಉದ್ಘಾಟನೆ ಮಾಡಲಿದ್ದಾರೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಧಾರವಾಡದ ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದಲ್ಲಿ ಐಐಟಿಗೆ ಜುಲೈ 31ರಂದು ಪ್ರಕಾಶ್ ಜಾವೆಡೇಕರ್ ಅವರು ಚಾಲನೆ ನೀಡಲಿದ್ದು, ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ' ಎಂದು ಹೇಳಿದರು.[ಧಾರವಾಡ ಐಐಟಿ ಕ್ಯಾಂಪಸ್ ಗೆ 470 ಎಕರೆ ಜಾಗ]

Dharwad IIT will inaugurate on July 31 2016

ತಾತ್ಕಾಲಿಕ ಕ್ಯಾಂಪಸ್ : ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಕಟ್ಟಡದಲ್ಲಿ ಐಐಟಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಾಣವಾಗಿದೆ. ಈ ವರ್ಷ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.[ಐಐಟಿ ಕೋರ್ಸ್ ಶುಲ್ಕ 2 ಲಕ್ಷ ರು ತನಕ ಏರಿಕೆ!]

ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ ತರಗತಿಗಳು ಆಗಸ್ಟ್ 1ರಿಂದ ಈ ವರ್ಷ ಆರಂಭವಾಗಲಿವೆ. ಐವರು ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿದ್ದು, ಧಾರವಾಡದ ಐವರು ವಿದ್ಯಾರ್ಥಿಗಳು ತವರಿನಲ್ಲಿಯೇ ವ್ಯಾಸಂಗ ಮಾಡುವ ಅವಕಾಶ ಪಡೆದಿದ್ದಾರೆ.

ಧಾರವಾಡದ ಐಐಟಿಯ ಶಾಶ್ವತ ಕ್ಯಾಂಪಸ್‌ಗೆ ಕೆಲಗೇರಿ ಗ್ರಾಮದಲ್ಲಿ 470 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆ ಈಗಾಗಲೇ ಒಪ್ಪಿಗೆ ನೀಡಿದೆ. ಈ ಭೂಮಿಯ ಮೌಲ್ಯ ಸುಮಾರು 120 ರಿಂದ 150 ಕೋಟಿಗಳಾಗಿವೆ. ಸದರಿ ಮೊತ್ತವನ್ನು ಹಣಕಾಸು ಇಲಾಖೆ ಕೆಐಎಡಿಬಿಗೆ ನೀಡಲಿದೆ.

ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿತ್ತು. ಮೈಸೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಜಿಲ್ಲೆಗಳ ಹೆಸರನ್ನು ಐಐಟಿಗಾಗಿ ಕರ್ನಾಟಕ ಸರ್ಕಾರ ಸೂಚಿಸಿತ್ತು. ಅಂತಿಮವಾಗಿ ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Academic activities of the Indian Institute of Technology Dharwad will commence on the Water and Land Management Institute (WALMI) from August 1, 2016. Union Human Resource Development Minister Prakash Javadekar will inaugurate IIT on July 31.
Please Wait while comments are loading...