Santosh Lad: ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು?
ಧಾರವಾಡ, ಏಪ್ರಿಲ್ 08: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶ್ರೀ ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಕಣಕ್ಕೆ ಇಳಿಯಲಿ. ನಾವು ಅವರ ಅಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಅವರು ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ನಾವು ಆಶೀರ್ವಾದ ಕೋರುತ್ತೇವೆ. ದಿಂಗಾಲೇಶ್ವರ ಸ್ವಾಮೀಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ ಎಂದು ತಿಳಿಸಿದರು.

ಇದೇ ಮೊದಲ ಸಲ ಇಂತಹ ಪ್ರಯೋಗ
ದಿಂಗಾಲೇಶ್ವರ ಶ್ರಿಗಳಿಗೆ ಧಾರವಾಡ ಜಿಲ್ಲೆಯಲ್ಲೇ ಲಕ್ಷಾಂತರ ಭಕ್ತರಿದ್ದಾರೆ. ಚೆನ್ನಾಗಿ ಮಾತನಾಡುವ ಶಕ್ತಿ ಅವರಿಗಿದೆ.
ಇದು ಮೊದಲ ಪ್ರಯೋಗ. ಇದು ಯಾವ ರೀತಿ ಫಲಿತಾಂಶ ಕೊಡುತ್ತದೆಯೋ ಹೇಳಲಾಗದು. ಇದು ಮೊದಲ ಸಲ ಈ ರೀತಿಯ ಪ್ರಯೋಗ ಆಗುತ್ತಿಗೆ ಎಂದು ಅವರು ಹೇಳಿದರು.
ಲಾಭ-ನಷ್ಟ ಲೆಕ್ಕಾಚಾರ ಮಾಡಲು ಆಗದು
ಓರ್ವ ಪ್ರಭಾವಿ ಸ್ವಾಮೀಜಿ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದು ಇದೇ ಮೊದಲ ಬಾರಿಗೆ. ದಿಂಗಾಲೇಶ್ವರ ಸ್ವಾಮೀಗಳದ್ದು ಸೆಕ್ಯೂಲರ್ ಮಠ. ಎಲ್ಲ ಸಮಾಜದವರು ಅವರ ಬೆಂಬಲಿಗರಿದ್ದಾರೆ. ಅವರು ಯುನಿವರ್ಸಲ್ ಸ್ವಾಮೀಜಿ ಲಿಂಗಾಯತ, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮಾಜದವರು ಅವರ ಅನುಯಾಯಿ ಇದಾರೆ. ಯಾರಿಗೆ ಲಾಭ-ನಷ್ಟ ಲೆಕ್ಕಾಚಾರ ಮಾಡಲು ಆಗದು. ಆದರೆ ಬಿಜೆಪಿಗೆ ಇದು ಹಿನ್ನಡೆ ಆಗಿಯೇ ಆಗುತ್ತದೆ. ಯಾಕೆಂದರೆ ಜನ ಅವರಿಗೆ ಬೇಸತ್ತು ಹೋಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ಸಚಿವರ ವಾಗ್ದಾಳಿ
ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಮೊದಲು ಎಲ್‌ಕೆ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರನ್ನು ಮರೆತಿದ್ದಾರೆ. ಬಿಜೆಪಿಯವರು ಯಾರದ್ದು ನಡೆಯುತ್ತೋ ಅವರ ಪಿಕ್ಚರ ಹಿಡಿದುಕೊಂಡು ಹೋಗಿ ಬಿಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಸದ್ಯ ಮತದಾರರು ಸದರಿ ಲೋಕಸಭಾ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸುತ್ತಾರೆ. ದಿಂಗಾಲೇಶ್ವರ ಸ್ವಾಮೀಜಿಗಳ ಚುನಾವಣೆ ಸ್ಪರ್ಧೆಯ ಪರಿಣಾಮ ಫಲಿತಾಂಶದ ದಿನವೇ ಗೊತ್ತಾಗುತ್ತದೆ. ಇಂತಹ ಪ್ರಯೋಗದ ಬಗ್ಗೆ ನಮಗೆ ಅನುಭವವೂ ಇಲ್ಲ. ಲಿಂಗಾಯತರೆಲ್ಲ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಲಾಗದು ಎಂದು ಮಾರ್ಮಿಕವಾಗಿ ಹೇಳಿದರು.
ಶ್ರೀಗಳನ್ನು ಅಂದು ಭೇಟಿ ಆಗಲಿಲ್ಲ
ಶಿರಹಟ್ಟಿ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ವಿಚಾರ, ನಾವು ಪ್ರಚಾರ ಶುರು ಮಾಡಿದಾಗ ಅವರು ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರು ಚರ್ಚೆಗಳನ್ನು ನಡೆಸಿದ್ದರು. ಆಗಿನ್ನು ಶ್ರೀಗಳು ರಾಜಕೀಯ ಪ್ರವೇಶ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.
ಇದೇ ವೇಳೆಗೆ ಕಾಂಗ್ರೆಸ್‌ನಿಂದ ನಾವು ವಿನೋದ್ ಅಸೂಟಿ ಅವರ ಪರ ಪ್ರಚಾರ ಶುರುಮಾಡಿಕೊಂಡಿದ್ದೇವೆ. ಆಗ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಆ ವಿಷಯದಲ್ಲಿ ನಾವು ಅಸಹಾಯಕರಾಗಿ ಬಿಟ್ಟಿದ್ದೇವು. ಆದರೆ ನಾವು ಸ್ವಾಮೀಜಿಗಳ ಭಾವನೆ ಅರ್ಥ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.












Click it and Unblock the Notifications