1 ಬಾಟಲಿ ನೀರು ಖರೀದಿಸಿದ್ರೆ ಒಂದು ಲೀ. ಪೆಟ್ರೋಲ್ ಫ್ರೀ!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜನವರಿ, 19: ಒಂದು ಲೀಟರ್ ನೀರು ಖರೀದಿಸಿದರೆ ಒಂದು ಲೀಟರ್ ಪೆಟ್ರೋಲ್ ಉಚಿತ. ಹೌದಾ. ಹಾಗಾದರೆ ನಾವು ಈಗಲೇ ಹೋಗಿ ತೆಗೆದುಕೊಳ್ಳುತ್ತೇವೆ ಎನ್ನುವಂತಿಲ್ಲ. ಏಕೆಂದರೆ ಈ ಆಫರ್ ಕೇವಲ 100 ಮಂದಿಗೆ ಮಾತ್ರ.

ಸೋಮವಾರ ಹುಬ್ಬಳ್ಳಿಯಲ್ಲಿ ಈ ತರಹದ ಸುದ್ದಿ ನಗರದೆಲ್ಲೆಡೆ ಹಬ್ಬಿ ದುರ್ಗದಬೈಲ್ ಗೆ ಜನತೆ ಧಾವಿಸಲಾರಂಭಿಸಿದ್ದರು. ಆದರೆ ಅಲ್ಲಿ ಆಗಿದ್ದು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಆಗುತ್ತಿದ್ದ ಪ್ರತಿಭಟನೆಯ ಹೊಸ ಸ್ವರೂಪ ಎಂದು ತಿಳಿದ ನಾಗರಿಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮನೆ ಕಡೆಗೆ ನಡೆದರು.[ಕೇಂದ್ರ ಮನಸ್ಸು ಮಾಡಿದರೆ 30 ರು. ಗೆ ಪೆಟ್ರೋಲ್!]

Hubballi

ನಗರದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಇಳಿಸದಿರುವುದನ್ನು ಖಂಡಿಸಿ ನೀರಿಗೆ ಪೆಟ್ರೋಲ್ ಫ್ರೀ ಎಂಬ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಪರದಾಡಿದರು.[ಕೆಲ ದಿನ ಕಾಯಿರಿ: ಬ್ಯಾರಲ್ ತೈಲಕ್ಕೆ 20 ಡಾಲರ್ ಕೊಟ್ರೆ ಸಾಕು!]

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಇಳಿದಿದೆ. ಒಂದು ಬಾಟಲಿ ಮಿನರಲ್ ನೀರಿಗಿಂತಲೂ ಕಡಿಮೆ ಬೆಲೆಯಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದುವರೆಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗರಾಜ ಗೌರಿ, ಶಾಕೀರ ಸನದಿ, ಇಕ್ಬಾಲ್ ನವಲೂರ, ಅಶ್ಪಾಕ್ ಕುಮಟಾಕರ, ಶಾರೂಕ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress members take protest against of hike petrol, diesel rate in Hubballi on Monday, January 18th
Please Wait while comments are loading...