• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಮೇಶ್ ಜಾಧವ್ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳಬೇಕಿಲ್ಲ:ಪ್ರಹ್ಲಾದ ಜೋಶಿ

By ಧಾರವಾಡ ಪ್ರತಿನಿಧಿ
|

ಧಾರವಾಡ, ಮಾರ್ಚ್ 05: ಉಮೇಶ್ ಜಾಧವ್ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದಿದ್ದಾರೆ. ಈಗ ಅವರ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳಬೇಕಿಲ್ಲ. ಬಿಟ್ಟು ಹೋದ ಮೇಲೆ ಅವರ ಬಗ್ಗೆ ಕಾಂಗ್ರೆಸ್, ಕೈಗೆಟುಕದ ದ್ರಾಕ್ಷಿ ಹುಳಿ ಅನ್ನುವಂತೆ ವಿಚಾರ ಮಾಡುತ್ತಿದೆ ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಾಯುದಾಳಿ ಬಗ್ಗೆ ಸಾಕ್ಷಿ ಕೇಳುವುದಾದರೆ ಕಾಂಗ್ರೆಸ್‌ನವರು ಪಾಕಿಸ್ತಾನಕ್ಕೆ ಹೋಗಿ ನೋಡಿಕೊಂಡು ಬರಲಿ. ಇದರ ಮೇಲೆ ಗೊತ್ತಾಗುತ್ತದೆ ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ ಎಂದು ಹರಿಹಾಯ್ದರು.

ಡಾ.ಉಮೇಶ್ ಜಾಧವ್ ರಾಜೀನಾಮೆ : ಯಾರು, ಏನು ಹೇಳಿದರು?

ಬಿಜೆಪಿ ಕುಟುಂಬ ರಾಜಕಾರಣ ‌ಮಾಡುತ್ತಿಲ್ಲ. ಶೆಟ್ಟರ್ ಮತ್ತು ಯಡಿಯೂರಪ್ಪ ಮನೆಯವರು ದಶಕಗಳ ನಂತರ ತಾವು ತಾವಾಗಿಯೇ ರಾಜಕೀಯಕ್ಕೆ ಬಂದಿದ್ದಾರೆ. ಆದರೆ, ಜೆಡಿಎಸ್- ಕಾಂಗ್ರೆಸ್ ಹಾಗೆ ಮಾಡುತ್ತಿಲ್ಲ. ಹೀಗಾಗಿ ಅವರ ಕುಟುಂಬ ರಾಜಕಾರಣಕ್ಕೂ ನಮಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

English summary
MP Prahlad Joshi said that Karnataka Congress MLA Umesh Jadhav resigned to Congress. Now the Congress does not have to worry about them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X