ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ.ಎಂ.ಎಂ.ಕಲಬುರ್ಗಿ ಸಂಕ್ಷಿಪ್ತ ಪರಿಚಯ

|
Google Oneindia Kannada News

ಧಾರವಾಡ, ಆ.30 : ಗುಂಡಿನ ದಾಳಿಯಲ್ಲಿ ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಸಾವನ್ನಪ್ಪಿದ್ದಾರೆ. ಧಾರವಾಡದಲ್ಲಿನ ಅವರ ಮನೆಗೆ ನುಗ್ಗಿದ ಅಪರಿಚಿತರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಹಣೆ ಮತ್ತು ಎದೆಗೆ ಗುಂಡು ತಗುಲಿದ ಕಲಬುರ್ಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಎಂ.ಎಂ.ಕಲಬುರ್ಗಿ ಅವರ ಪೂರ್ಣ ಹೆಸರು ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ. 1938ರ ನವೆಂಬರ್ 28ರಂದು ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಗುಬ್ಬೇವಾಡದಲ್ಲಿ ಕಲಬುರ್ಗಿ ಅವರು ಜನಿಸಿದರು. ತಂದೆ ಮಡಿವಾಳಪ್ಪ, ತಾಯಿ ಗುರವ್ವ. [ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ]

mm kalburgi

1962ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೋಧಕರಾಗಿ ಸೇವೆ ಆರಂಭಿಸಿದ ಅವರು. 1966ರಲ್ಲಿ ಕರ್ನಾಟಕ ವಿವಿ ಅಧ್ಯಾಪಕರಾದರು. ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

'ಬಸವಣ್ಣನವರ ಕುರಿತ ಶಾಸನಗಳು' ಎಂ.ಎಂ.ಕಲಬುರಗಿ ಅವರ ಮೊದಲ ಕೃತಿ. 41 ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿರುವ ಅವರು, 100 ಕೃತಿಗಳನ್ನು ರಚನೆ ಮಾಡಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲವನ್ನು ಪ್ರಕಟಿಸಿದ್ದಾರೆ.

ಕನ್ನಡ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ವ್ಯಾಕರಣ, ಹಸ್ತಪ್ರತಿ, ಗ್ರಂಥ ಸಂಪಾದನಾ ಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಹಲವಾರು ಸಂಶೋಧನೆಗಳನ್ನು ಮಾಡಿದ್ದರು. ಗದಗದಲ್ಲಿ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು.

ಪ್ರಶಸ್ತಿಗಳು : ಕಲಬುರ್ಗಿ ಅವರ ಸಾಹಿತ್ಯ ಸೇವೆಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪಶಸ್ತಿಗಳು ಬಂದಿದ್ದವು.

ವಿವಾದದ ಹೇಳಿಕೆ : 'ದೇವತೆಗಳು ಮೂರ್ತ ಸ್ವರೂಪವಾದ್ದರಿಂದ ದೇವತೆಗಳ ವಿಗ್ರಹ, ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ತಪ್ಪೇನು ಇಲ್ಲ, ವಿಗ್ರಹಗಳಿಗೆ ಕಾಡುವ ಕಾಪಾಡುವ ಶಕ್ತಿ ಇಲ್ಲ, ಇದರಿಂದ ಪೂಜೆ ನಿಲ್ಲಿಸಿದ್ರೆ ಅಪಾಯವಿಲ್ಲ' ಎಂದು ಎಂ.ಎಂ. ಕಲಬುರ್ಗಿ ಅವರು ನೀಡಿದ್ದ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

English summary
Noted Kannada litterateur M M Kalburgi shot dead in his house Dharwad on Sunday, August 30th. Here is brief profile of MM Kalburgi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X