'ತಿಮ್ಮಪ್ಪನಿಗೆ ಕಿರೀಟ ಕೊಟ್ಟರೂ ರೆಡ್ಡಿಗೆ ತಪ್ಪದ ಜೈಲು'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಮೇ, 18: ನಗರದ ದೇಶಪಾಂಡೆ ನಗರದ ಜಿಮ್ಖಾನ್ ಮೈದಾನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವದ ಕುರಿತು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಕಿಡಿಕಾರಿದ್ದಾರೆ.

ತಿರುಪತಿ ಶ್ರೀನಿವಾಸನಿಗೆ 45 ಕೋಟಿ ಬೆಲೆ ಬಾಳುವ ವಜ್ರಖಚಿತ ಕಿರೀಟ ಕೊಟ್ಟರೂ ಜನಾರ್ದನ ರೆಡ್ಡಿ ಜೈಲು ಸೇರಬೇಕಾಯಿತು. ಇನ್ನು ಇಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಿ ಏನನ್ನು ಸಾಧಿಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.[ಹುಬ್ಬಳ್ಳಿ : ಜಿಮಖಾನಾ ಮೈದಾನ ಹೋರಾಟಕ್ಕೆ ಕುಲಕರ್ಣಿ ಬೆಂಬಲ]

congress

ವಾಯು ವಿಹಾರಕ್ಕೆ ಮುಕ್ತವಾಗಿದ್ದ ಮೈದಾನವನ್ನು ಅಧಿಕಾರ ದುರುಪಯೋಗ ಮಾಡಿಕೊಂಡು ರಿಕ್ರಿಯೇಷನ್ ಕ್ಲಬ್ ಸ್ವಾರ್ಥ ಬಳಕೆಗೆ ಮಾಡಿಕೊಂಡಿದೆ. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಲ್ಹಾದ ಜೋಷಿ, ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್, ಜೋಷಿ ಸಹೋದರ ಗೋವಿಂದ ಜೋಷಿ, ಕೇಂದ್ರ ಸಚಿವ ಅನಂತಕುಮಾರ ಸಹೋದರ ನಂದಕುಮಾರ, ಮಾಜಿ ಮೇಯರ್ ವೀರಣ್ಣ ಸವಡಿ, ಹೊಟೇಲ್ ಉದ್ಯಮಿ ಗಣೇಶ ಶೆಟ್ಟಿ ಈ ಪ್ರಕ್ರಣದ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದಾರೆ.[ಹುಬ್ಬಳ್ಳಿಯಲ್ಲಿ ಮನಸೆಳೆದ ಶ್ರೀನಿವಾಸ ಕಲ್ಯಾಣೋತ್ಸವ]

ಮೈದಾನವನ್ನು ರೆಸ್ಟೋರೆಂಟ್ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಕೂಗು ಸಹ ಕೇಳಿ ಬಂದಿದೆ. ಅಕ್ರಮ ನಡೆಯಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಕೌಲಗಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: After Srinivasa Kalyanotsava on 17 May, 2016 Hubballi-Dharwad Congress spokesperson Vedavyas Kaulagi claimed that BJP trying to misuse Jimkhana ground.
Please Wait while comments are loading...