ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿಗೆ ದಾಖಲೆ ಗೆಲುವು

Written By:
Subscribe to Oneindia Kannada

ಹುಬ್ಬಳ್ಳಿ, ಜೂನ್, 13: ರಾಜ್ಯದ ಜೆಡಿಎಸ್ ಕಾರ್ಯಕರ್ತರಿಗೆ ಇದು ಸಂತಸದ ಸುದ್ದಿ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ನ ಬಸವರಾಜ್ ಹೊರಟ್ಟಿ ಜಯಭೇರಿ ಬಾರಿಸಿದ್ದಾರೆ.

ಎರಡನೇ ಸುತ್ತಿನ ಮತ ಎಣಿಕೆಯಲ್ಲೇ ವಿಜಯಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. 1980ರಿಂದಲೂ ಸೋಲರಿಯದ ಸರದಾರನಂತಿದ್ದ ಹೊರಟ್ಟಿ ಸತತ 7ನೇ ಬಾರಿಗೆ ಪರಿಷತ್​ಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. 7 ಸಾವಿರಕ್ಕೂ ಅಧಿಕ ಮತಗಳ ಅಂತರದ ಜಯ ಹೊರಟ್ಟಿಯವರಿಗೆ ಸಿಕ್ಕಿದೆ. [ಪರಿಷತ್ ಇತರ ಸ್ಥಾನಗಳ ಕತೆ ಏನು?]

hubballi

ಬಸವರಾಜ್ ಹೊರಟ್ಟಿ ಎರಡನೇ ಸುತ್ತಿನ ಮತ ಎಣಿಕೆಯಲ್ಲೇ ವಿಜಯ ಸಂಪಾದನೆ ಮಾಡಿಕೊಂಡಿದ್ದಾರೆ. ಎರಡನೇ ಸುತ್ತಿನ ಅಂತ್ಯಕ್ಕೆ 7228 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಹೊರಟ್ಟಿ ವಿಜಯ ಸಂಪಾದನೆ ಮಾಡಿದರು. ಗೆಲ್ಲಲು ಬೇಕಿದ್ದ 7094 ಮತಗಳನ್ನು ಮೀರಿ ನಿಂತರು.[ವಿಧಾನಪರಿಷತ್ ಸದಸ್ಯರು ಹೇಗೆ ಆಯ್ಕೆಯಾಗುತ್ತಾರೆ?]

ಪಶ್ಚಿಮ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಏಳನೇ ಬಾರಿಗೆ ಗೆದ್ದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಬಿಜೆಪಿಯ ಮಾ. ನಾಗರಾಜ ಅವರನ್ನು 3411 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹೊರಟ್ಟಿಯವರು ಪಡೆದ ಮತಗಳು 7480. ಮಾ.ನಾಗರಾಜ್ ಅವರು 4371 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಟಿ.ಈಶ್ವರ ಕೇವಲ 1352 ಮತಗಳನ್ನು ಪಡೆದು ಹೀನಾಯವಾಗಿ ಸೋಲುಂಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಎಂ.ಕುಬೇರಪ್ಪ ಕೇವಲ 883 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ ಮತಗಳಲ್ಲಿ 784 ಮತಗಳು ತಿರಸ್ಕೃತಗೊಂಡಿದ್ದಾರೆ. 43 ಮತಗಳು ನೋಟಾ ಮತಗಳಿವೆ.

hubballi

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಜೂ.9ರಂದು ನಡೆದಿತ್ತು. 2010ರವರೆಗಿನ ಚುನಾವಣೆಗಳವರೆಗೆ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಲೇ ಬಂದಿದ್ದ ಹೊರಟ್ಟಿಗೆ 2010ರಲ್ಲಿ ಬಿಜೆಪಿ ಕೊಂಚ ಪ್ರಮಾಣದ ಸ್ಪರ್ಧೆ ನೀಡಿತ್ತು.

ಈ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಟಿ.ಈಶ್ವರ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರೆ, ಬಿಜೆಪಿಯ ಮಾ. ನಾಗರಾಜ, ಬಿಜೆಪಿ ಬಂಡಾಯ ಅಭ್ಯರ್ಥಿ ಕುಬೇರಪ್ಪ ಹೊರಟ್ಟಿಗೆ ಸವಾಲು ಒಡ್ಡಲು ಸಾಧ್ಯವಾಗಲಿಲ್ಲ. ಹೊರಟ್ಟಿ ಬೆಂಬಲಿಗರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

hubballi

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: FinallyBasavaraj Horatti wins over West Teachers constituency . He was leading with 2,228 first preference votes at the end of second round of counting.
Please Wait while comments are loading...