Basangouda Yatnal: ಉಚಿತ ಭಾಗ್ಯ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ
ಧಾರವಾಡ, ಏಪ್ರಿಲ್ 28: ಕರ್ನಾಟಕ ರಾಜ್ಯ ಸರ್ಕಾರವು ತನ್ನ ಐದು ಯೋಜನೆಗಳಿಂದ ಸಾಲದ ಸುಳಿಗೆ ಸಿಲುಕಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ನಡೆಸಿದರು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲುಕೊಪ್ಪ ಗ್ರಾಮದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಪ್ರಹ್ಲಾದ್ ಜೋಶಿ ಅವರ ಪರ ಚುನಾವಣಾ ಪ್ರಚಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರದ ಐದು ಯೋಜನೆಗಳಿಂದ ರಾಜ್ಯ ಸರ್ಕಾರವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿ ಇಲ್ಲಿವರೆಗೂ ಅಭಿವೃದ್ಧಿಯಾಗಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಭಾರತ ಇಂದು ಆರ್ಥಿಕತೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ಯಂತ ಪ್ರಬಲ ರಾಷ್ಟ್ರವಾಗಿ ಭಾರತ ದೇಶ ಹೊರಹೂಮ್ಮಿದೆ ಎಂದರು.
ಕಾಂಗ್ರೆಸ್‌ನಿಂದ ದೇಶ ಅಧೋಗತಿಯತ್ತ: ಯತ್ನಾಳ್
ರೈತರ ಖಾತೆಗೆ ನೇರವಾಗಿ ಆರು ಸಾವಿರ ರೂಪಾಯಿಗಳು ರೈತರಿಗೆ ನೀಡಿದೆ. ಅಂದು ದೇಶದಲ್ಲಿ ಶ್ರೀಮತಿ ಇಂದಿರಾಗಾಂಧಿ ಪ್ರಧಾನಮಂತ್ರಿ ಇದ್ದಾಗ 50 ರೂಪಾಯಿ ಮಾಸಿಕ ಪಿಂಚಣಿ ಇತ್ತು. ಅದು ದೆಹಲಿಯಿಂದ ನೇರವಾಗಿ ಫಲಾನುಭವಿಗೆ ಮುಟ್ಟಬೇಕಾದರೆ ಫಲಾನುಭವಿಗೆ ಸಿಗುವ ಮೊತ್ತ 40 ರೂಪಾಯಿ ಆಗಿತ್ತು.
50 ವರ್ಷ ದೇಶ ಆಳಿದರು ದೇಶವನ್ನು ಅಧೋಗತಿಯತ್ತ ಸಾಗಿದ ಕೀರ್ತಿ ಇದ್ದರೆ ಅದು ಕಾಂಗ್ರೆಸ್ ಸರ್ಕಾರದ ಕೀರ್ತಿ ಎಂದು ಕಿಡಿ ಕಾರಿದರು. ನಾನು 1999 ರಲ್ಲಿ ಕೇಂದ್ರ ಸಚಿವ ನಿದ್ದಾಗ ಅಡುಗೆ ಅನಿಲ ಸಿಲೆಂಡರ್ ಸಿಗುವುದು ಬಹಳ ಕಷ್ಟವಾಗಿತ್ತು. ಇಂದು ಪ್ರತಿ ಕುಟುಂಬಗಳಿಗೆ ಉಜ್ವಲ ಯೋಜನೆ ಮುಖಾಂತರ ಪ್ರತಿ ಬಡ ಕುಟುಂಬಕ್ಕೂ ಗ್ಯಾಸ್ ಸಿಲೆಂಡರ್ ನೀಡಲಾಗಿದೆ.

ಪ್ರಧಾನಿ ಮೋದಿ ಗೆಲ್ಲಿಸಲು ಶ್ರಮಿಸಲು ಕರೆ
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಮಾತನ್ನು ಹೇಳಿದ್ದಾರೆ. ನನ್ನ ದೇಶವನ್ನು ಯಾರ ಮುಂದೆ ತಲೆ ಬಾಗಿಸುವಂತ ಕೆಲಸ ಮಾಡುವುದಿಲ್ಲ ನಿಮಗೆ ಅಗೌರವ ಸಿಗುವಂತಹ ಕೆಲಸವನ್ನು ಮಾಡುವುದಿಲ್ಲ ಎಂದಿದ್ದಾರೆ. ಅದಕ್ಕೋಸ್ಕರ ದೇಶದ ಅಭಿವೃದ್ಧಿಗಾಗಿ ಮೂರನೇ ಅವಧಿಗೆ ಅವರನ್ನು ಪ್ರಧಾನಮಂತ್ರಿ ಮಾಡಲು ಎಲ್ಲರೂ ಒಂದಾಗಿ ಶ್ರಮವಹಿಸೋಣ ಎಂದು ಯತ್ನಾಳ್ ಕರೆ ನೀಡಿದರು.
ನೋಟ್ ಬ್ಯಾನ್ ನಿಂದ ಒಳಿತಾಗಿದೆ
ಕಲಘಟಗಿ ತಾಲೂಕಿನ ಮತದಾರರ ಪಾತ್ರ ಬಹಳ ಮುಖ್ಯವಾಗಿದೆ. ಸಂವಿಧಾನದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸವಿಧಾನದಲ್ಲಿ ಪ್ರತಿ 10 ವರ್ಷಕ್ಕೆ ನೋಟ್ ಬ್ಯಾನ್ ಮಾಡುವುದಾಗಿ ಬರೆದಿದ್ದಾರೆ.
ಈ ಹಿಂದೆ ದೇಶದಲ್ಲಿ ಬಿಜೆಪಿಯಿಂದ ನೋಟ್ ಬ್ಯಾನ್ ಮಾಡಲಾಯಿತು. ಇದರಿಂದ ಭಾರತಕ್ಕೆ ತೊಂದರೆಯಾಗಿಲ್ಲ ಸಾಕಷ್ಟು ಕೋಟಾ ನೋಟ್‌ಗಳು ಹೊರಕ್ಕೆ ಬಂದಿದ್ದು, ಇದರಿಂದ ಪಾಕಿಸ್ತಾನ ಇಂದು ದಿವಾಳಿ ಆಯಿತು. ಭಾರತದಲ್ಲಿ ಗರಿಬಿ ಕಲ್ಯಾಣ ಯೋಜನೆಯಿಂದ ನಿರಂತರವಾಗಿ ಬಡ ಜನರಿಗೆ 5 ಕೆಜಿ ಅಕ್ಕಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸಲಾಗಿದೆ.
ಇದು ಭಾರತದ ತಾಕತ್ತು
ಉಜ್ವಲ್ ಯೋಜನೆ ಜಾರಿಯಲ್ಲಿದೆ. ರಾಜ್ಯದಲ್ಲಿ ರಸ್ತೆಗಳು ಸುಧಾರಣೆ ಆಗಿವೆ. ಹೆದ್ದಾರಿಗಳು ಮೇಲ್ದರ್ಜೆಗೆ ಏರಿದ್ದು, ಅನೇಕ ಕೆಲಸಗಳನ್ನು ಕರ್ನಾಟಕದಲ್ಲಿ ಮಾಡಲಾಗಿದೆ. ಅಬುದಾಬಿ ಎಲ್ಲಿ 1.50.0000 ಸಾವಿರ ಕೋಟಿಯಲ್ಲಿ ಲಕ್ಷ್ಮೀನಾರಾಯಣ ದೇಗುಲ ಸ್ಥಾಪನೆ ಮಾಡಿದ್ದಾರೆ. ಅಲ್ಲಿನ ರಾಜರನ್ನು ಕರೆಸಿ, ಉದ್ಘಾಟನೆ ನೆರವೇರಿಸಿದ್ದಾರೆ. ಇದು ಭಾರತದ ತಾಕುತ್ತು ಎಂದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಚಬ್ಬಿ, ಎಂಎಲ್‌ಸಿ ಎಸ್ ವಿ. ಸಂಕನೂರ್. ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ. ತಾಲೂಕ ಅಧ್ಯಕ್ಷರಾದ ಬಸವರಾಜ್ ಶರೇವಾಡ. ಈರಣ್ಣ ಜಡ್ಡಿ. ಐಸಿ. ಗೋಕುಲ್. ಅಶೋಕ್ ಗುಮ್ಮಗೋಳ. ಈರಯ್ಯ ಸಿದ್ದಾಪುರ ಮಠ. ಲಕ್ಷ್ಮಣ ಪವರ್. ಸುರೇಶ್ ಶೀಲವಂತ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications