ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ : ಶಾಸಕರ ವಿರುದ್ಧ ಸರ್ಕಾರಿ ಭೂ ಒತ್ತುವರಿ ಆರೋಪ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಫೆಬ್ರವರಿ 03 : ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. 'ನಾನು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳಿವೆ' ಎಂದು ಶಾಸಕರು ಆರೋಪವನ್ನು ತಳ್ಳಿ ಹಾಕಿದ್ದಾರೆ.

ಧಾರವಾಡದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜನಪರ ಹೋರಾಟ ವೇದಿಕೆಯ ಮುಖಂಡ ವಿಜಯಾನಂದ ದೊಡ್ಡವಾಡ ಅವರು ಶಾಸಕ ಅರವಿಂದ ಬೆಲ್ಲದ ಅವರ ವಿರುದ್ಧ ಭೂ ಒತ್ತುವರಿ ಆರೋಪ ಮಾಡಿದರು. 'ಶಾಸಕರು ತಮ್ಮ ಮನೆಯ ಹತ್ತಿರವಿರುವ ಸರ್ಕಾರಿ ಕುಡಿಯುವ ನೀರಿನ ಬಾವಿಯನ್ನು ಮುಚ್ಚಿಸಿ ಜಮೀನನ್ನು ಒತ್ತುವರಿ ಮಾಡಿದ್ದಾರೆ' ಎಂದು ಆರೋಪಿಸಿದರು.

 arvind bellad

'ಸರ್ಕಾರಿ ಜಮೀನು ಸರ್ವೇ ನಂ.31/111 ರಲ್ಲಿ ಈ ಹಿಂದೆ ಜಲಮಂಡಳಿಯ ನೀರು ಸರಬರಾಜು ಮಾಡುವ ಪಂಪ್ ಹೌಸ್ ಇತ್ತು. ಇಲ್ಲಿಂದಲೇ ನಗರದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು ತೆರವುಗೊಳಿಸಲಾಗಿದೆ' ಎಂದರು. [ಭೂ ಕಬಳಿಕೆ ಆರೋಪ, ದಿನೇಶ್ ಗುಂಡೂರಾವ್ ಸ್ಪಷ್ಟನೆಗಳು]

'ಪಂಪ್ ಹೌಸ್ ತೆರವು ಮಾಡಿದ್ದರಿಂದ ಜನರಿಗೆ ನೀರಿನ ಸಮಸ್ಯೆ ಉಂಟಾಗಿತ್ತು, ಈ ಬಗ್ಗೆ ಪಾಲಿಕೆಯ ಮೇಯರ್ ಮತ್ತು ಜಲಮಂಡಳಿಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ವಿಜಯಾನಂದ ದೊಡ್ಡವಾಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಇಲ್ಲಿ ನಿವೇಶನ ಕೊಂಡರೆ ಹಣವೂ ಸುರಕ್ಷಿತ, ಲಾಭವೂ ನಿಶ್ಚಿತ]

'ಹಳೇ ಡಿಸಿ ಕಚೇರಿಯ ಸವದತ್ತಿ ರಸ್ತೆಯಲ್ಲಿನ ತಮ್ಮ ಮನೆಯ ಪಕ್ಕದ ಜಾಗದಲ್ಲಿದ್ದ ಕುಡಿಯುವ ನೀರಿನ ಬಾವಿಯನ್ನು ಅತಿಕ್ರಮಣ ಮಾಡಿಕೊಂಡು ಶಾಸಕ ಬೆಲ್ಲದ ಅವರು ಬಾವಿಯನ್ನು ಮುಚ್ಚಿಸಿ, ಸರ್ಕಾರಿ ಜಮೀನಿಗೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ' ಎಂದು ವಿಜಯಾನಂದ ಅವರು ಆರೋಪ ಮಾಡಿದ್ದಾರೆ.

ಆರೋಪ ತಳ್ಳಿ ಹಾಕಿದ ಶಾಸಕರು : ವಿಜಯಾನಂದ ದೊಡ್ಡವಾಡ ಅವರ ಆರೋಪವನ್ನು ಶಾಸಕ ಅರವಿಂದ ಬೆಲ್ಲದ ಅವರು ತಳ್ಳಿಹಾಕಿದ್ದಾರೆ. 'ಮನೆಯ ಹತ್ತಿರವಿರುವ ಬಾವಿಯಿದ್ದ ಜಮೀನು ತಮ್ಮ ಅಜ್ಜ ಗುರಪ್ಪ ಬೆಲ್ಲದ ಅವರ ಹೆಸರಿನಲ್ಲಿದೆ. ನಾನು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ತಮ್ಮ ಬಳಿ ಸೂಕ್ತ ದಾಖಲೆಗಳಿವೆ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

English summary
Janapara Horata Vedike leader Vijayanand Doddavada said, Hubbli-Dharwad West constituency BJP MLA Arvind Bellad encroached government land near his residence at Dharwad. Arvind Bellad denied the allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X