ಮರಳಿನಲ್ಲಿ ವರ್ಣರಂಜಿತ ಸ್ವಾಮಿ ವಿವೇಕಾನಂದ ಕಲಾಕೃತಿ ರಚಿಸಿದ ಕಲಾವಿದ ಮಂಜುನಾಥ ಹಿರೇಮಠ

ಧಾರವಾಡ, ಜನವರಿ 23: ವಿಶ್ವ ಸಂತ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ಅರಳಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದೊಡ್ಡನಾಯಕನಕೊಪ್ಪದಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿ ಅದಕ್ಕೆ ಬಣ್ಣ ಕೂಡ ಲೇಪನ ಮಾಡಿದ್ದಾರೆ.

ದೊಡ್ಡನಾಯಕನಕೊಪ್ಪದ ಜನ ಈ ಮರಳು ಕಲಾಕೃತಿಗೆ ಮನಸೋತಿದ್ದು, ತಂಡೋಪಾದಿಯಲ್ಲಿ ಬಂದು ಮರಳಿನಲ್ಲಿ ಮಾಡಿದ ಸ್ವಾಮಿ ವಿವೇಕಾನಂದರ ಕಲಾಕೃತಿ ನಮನ ಸಲ್ಲಿಸಿದ್ದಾರೆ. ಸದ್ಯ ಮರಳಿನಲ್ಲಿ ಅರಳಿ ನಿಂತ ಸ್ವಾಮಿ ವಿವೇಕಾನಂದರ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದ್ದು, ದೊಡ್ಡನಾಯಕನಕೊಪ್ಪದ ಸುತ್ತಮುತ್ತಲಿನ ಜನರು ಈ ಕಲಾಕೃತಿಯನ್ನು ನೋಡಲು ಆಗಮಿಸುತ್ತಿದ್ದಾರೆ.

Artist Creates Swami Vivekananda Artifact In Sand

ವಿಶ್ವ ಸಂತ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹೋಟೆಲ್ ಒಡೆಯರ ಸಂಘದ ವತಿಯಿಂದ ಅವರ ಕುಟುಂಬಸ್ಥರಿಗಾಗಿ ವಿವಿಧ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಹೋಟೆಲ್ ಒಡೆಯರ ಸಂಘದ ಕುಟುಂಬದ ಸದಸ್ಯರಿಗಾಗಿಯೇ ಆಯೋಜನೆಗೊಂಡಿದ್ದ ಈ ಕ್ರೀಡಾಕೂಟದಲ್ಲಿ 100 ಮೀಟರ್ ಓಟ, ರಿಂಗ್ ಎಸೆತ, ಗುಂಡು ಎಸೆತ ಸೇರಿದಂತೆ ಇತ್ಯಾದಿ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಈ ಕ್ರೀಡಾಕೂಟದಲ್ಲಿ ಹೋಟೆಲ್ ಒಡೆಯರ ಸಂಘದ ಸದಸ್ಯರು ಉತ್ಸಾಹದಿಂದಲೇ ಪಾಲ್ಗೊಂಡು ಎಲ್ಲರ ಗಮನಸೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+