ಅಂಬೇವಾಡಿ-ಧಾರವಾಡ ಪ್ರಯಾಣಿಕ ರೈಲು ವೇಳಾಪಟ್ಟಿ

ಧಾರವಾಡ, ನವೆಂಬರ್ 03: ಅಂಬೇವಾಡಿ-ಧಾರವಾಡ ನಡುವಿನ ಪ್ರಯಾಣಿಕ ರೈಲು ಸಂಚಾರಕ್ಕೆ ಭಾನುವಾರ ಹಸಿರು ನಿಶಾನೆ ತೋರಿಸಲಾಗುತ್ತದೆ. ಕೆಲವು ದಿನಗಳ ಹಿಂದೆ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿತ್ತು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ರೈಲಿನ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ.

ಇದೇ ಸಂದರ್ಭದಲ್ಲಿ ಅಂಬೇವಾಡಿ-ಅಳ್ನಾವರ ಪ್ರಯಾಣಿಕರ ರೈಲು ಮಾರ್ಗದ ಉದ್ಘಾಟನೆಯನ್ನು ಮಾಡಲಾಗುತ್ತದೆ. ಅಳ್ನಾವರ-ಅಂಬೇವಾಡಿ ನಡುವಿನ 26 ಕಿ. ಮೀ. ಮಾರ್ಗದಲ್ಲಿ 1995ರಲ್ಲಿ ಗೇಜ್ ಪರಿವರ್ತನೆ ಬಳಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು.

Ambewadi Dharwad Passenger Train Service From November 3

ವೇಳಾಪಟ್ಟಿ: ಧಾರವಾಡದಿಂದ ಬೆಳಗ್ಗೆ 11.30ಕ್ಕೆ ಹೊರಡುವ ರೈಲು 1 ಗಂಟೆಗೆ ಅಂಬೇವಾಡಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ಅಂಬೇವಾಡಿಯಿಂದ ಹೊರಡುವ ರೈಲು 4.40 ಕ್ಕೆ ಧಾರವಾಡ ತಲುಪಲಿದೆ.

ನಿಲ್ದಾಣಗಳು : ಅಂಬೇವಾಡಿ-ಧಾರವಾಡ ರೈಲು ಕ್ಯಾರ್ ಕೊಪ್ಪ, ಮುಗುದ, ಕಂಬಾರಗಣವಿ ರೈಲು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ರೈಲ್ವೆ ಮಾರ್ಗವನ್ನು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಈ ರೈಲು ಎರಡು ಸಾಮಾನ್ಯ ದರ್ಜೆಯ ಬೋಗಿ, ಒಂದು ಸೆಕೆಂಡ್ ಕ್ಲಾಸ್ ಬೋಗಿ, ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಯನ್ನು ಹೊಂದಿರಲಿದೆ.

1995ರಲ್ಲಿ ಗೇಜ್ ಪರಿವರ್ತನೆಗಾಗಿ ಅಳ್ನಾವರ-ಅಂಬೇವಾಡಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಕಾಮಗಾರಿ ಪೂರ್ಣಗೊಂಡರೂ ರೈಲು ಸಂಚಾರ ಆರಂಭವಾಗಿರಲಿಲ್ಲ. ಕರ್ನಾಟಕ ಸರ್ಕಾರದ ಪರವಾಗಿ ರೈಲು ಸೇವೆ ಆರಂಭಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್. ವಿ. ದೇಶಪಾಂಡೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯನ್ನು ಭೇಟಿ ಮಾಡಿ ರೈಲು ಸೇವೆ ಆರಂಭಿಸುವ ಕುರಿತು ಮಾತುಕತೆ ನಡೆಸಿದ್ದರು. ಇಂದು ಸಂಚಾರ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+