ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ಲಕ್ಷ್ಮೀ ಪೂಜೆ ಜೊತೆಗೆ ಅಪ್ಪುಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಅಕ್ಟೋಬರ್ 26 : ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ವಿರಾಜಮಾನರಾದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನೆನಪು ಸದಾ ಹಸಿರಾಗಿದೆ. ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಅಲ್ಲಿ ನೆಚ್ಚಿನ ನಟ ಅಪ್ಪು ನೆನಪನ್ನು ಮರಳುವಂತೆ ಮಾಡುತ್ತಾರೆ. ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಅಪ್ಪು ಪುನೀತ್ ರಾಜ್‍ಕುಮಾರ್ ಅಗಲಿ ಒಂದು ವರ್ಷ ಆಗುತ್ತಿದ್ದರೂ ಅವರು ನೆನಪು ಅಚ್ಚಳಿಯದೇ ಹಾಗೇ ಉಳಿದಿದೆ.

ಪುನೀತ್ ರಾಜ್ ಕುಮಾರ್ ಕಳೆದ ವರ್ಷ ಅಕ್ಟೋಬರ್ 29ರಂದು ನಿಧನರಾಗಿದ್ದರು.ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ. ಇದರ ನಡುವೆ ಧಾರವಾಡದ ಅಪ್ಪು ಅಭಿಮಾನಿ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಗಳ ದೇವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೇ ಲಕ್ಷ್ಮೀ ದೇವಿಯೊಂದಿಗೆ ಅಪ್ಪು ಅವರ ಫೋಟೋಗೆ ಪೂಜೆ ಮಾಡುವ ಮೂಲಕ ತೋರಿಸಿ ಅಗಲಿದ ಅಪ್ಪುವಿಗೆ ಪ್ರೀತಿಯ ನಮನ ಸಲ್ಲಿಸಿದರು.

ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಹೋಗಲು ಇದು ಸರಿಯಾದ ಸಮಯ, ಆದ್ರೂ.. ಹುಷಾರ್! ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಹೋಗಲು ಇದು ಸರಿಯಾದ ಸಮಯ, ಆದ್ರೂ.. ಹುಷಾರ್!

ದೇಶಾದ್ಯಂತ ದೀಪಾವಳಿ ವಿಶೇಷ ಹಾಗೂ ದೊಡ್ಡ ಬೆಳಕಿನ ಹಬ್ಬ. ವಿಶೇಷವಾದ ರುಚಿಕರವಾದ ಅಡುಗೆಯನ್ನು ಮಾಡಿ ಮನೆ ಮಂದಿಯಲ್ಲ ಹೊಸ ಬಟ್ಟೆಗಳನ್ನು ಧರಿಸಿ ಮನೆ, ಆಪೀಸ್, ಅಂಗಡಿ ಮಳಿಗೆ ಹಾಗೂ ಶೋರೂಂಗಳಲ್ಲಿ ಲಕ್ಷ್ಮೀ ಪೂಜೆಯನ್ನು ನೇರವೇರಿಸುತ್ತಾರೆ. . ನಗರದ ಮಿಸ್ಕಿನ್ ಕಪೌಂಡ್ ನಲ್ಲಿರುವ ಹೇರ್ ಸ್ಟೂಡಿಯೋ ಮೆನ್ ಎಂಬ ಕಟಿಂಗ್ ಅಂಗಡಿಯಲ್ಲಿ ಈ ವರ್ಷ ದೀಪಾವಳಿಯನ್ನು ಪುನೀತ್ ರಾಜ್‍ಕುಮಾರ್‌ರ ಫೋಟೋವನ್ನು ಲಕ್ಷ್ಮೀ ಫೋಟೋ ಜೊತೆಗಿಟ್ಟು ಪೂಜೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು.

ಅಮರೇಶ ಹಡಪದ ಎಂಬುವವರ ಅಂಗಡಿಯಲ್ಲಿ ಪುನೀತ್ ಫೋಟೋವನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಮೊದಲಿಂದಲೂ ಪುನೀತ್ ಅಭಿಮಾನಿಯಾಗಿರುವ ಅಮರೇಶ. ಹಬ್ಬದ ದಿನ ಲಕ್ಷ್ಮಿ ಪೋಟೋ ಹಾಗೂ ಪುನೀತ್ ಪೋಟೋಗೆ ವಿಷೇಶ ಪೂಜೆ ಮಾಡಿದರು. ಪುನೀತ್ ಅಭಿನಯದ ಎಲ್ಲಾ ಹಾಡುಗಳನ್ನು ಹಚ್ಚಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.

A Fan Worships Puneeth Rajkumar with Goddess Lakshmi During the Deepavali Celebration

ಪುನೀತ್ ಬ್ಯಾನರ್ ಹಿಡಿದು ಬೆಟ್ಟ ಹತ್ತಿದ ಅಭಿಮಾನಿ

ಚಿಕ್ಕಮಗಳೂರು: ನಗರದ ಅರವಿಂದ ನಗರದ ಪುನೀತ್ ರಾಜ್ ಕುಮಾರ್ ಅಭಿಮಾನಿಯೋರ್ವ ದೇವಿರಮ್ಮನ ಬೆಟ್ಟ ಹತ್ತುವಾಗ ಎದೆ-ಬೆನ್ನಿನ ಮೇಲೆ ಅಪ್ಪು ಇರುವ ಟೀ ಶರ್ಟ್ ಧರಿಸಿ, ಭುಜದ ಮೇಲೆ ಅಪ್ಪುವನ ಬ್ಯಾನರ್ ಹಿಡಿದು ದೇವೀರಮ್ಮನ ಬೆಟ್ಟ ಹತ್ತಿ ಗಮನ ಸೆಳೆದಿದ್ದಾರೆ.

ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದಲ್ಲಿ ನೆಲೆಸಿರೋ ತಾಲೂಕಿನ ಬಿಂಡಿಗ ದೇವೀರಮ್ಮ ಜಾತ್ರೆ ಇತ್ತು. ಇದೇ ವೇಳೆ, ಅಪ್ಪು ರವಿ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರಿನಲ್ಲಿ ಕ್ಯಾಂಟೀನ್ ಇಟ್ಟುಕೊಂಡಿರುವ ರವಿ ಬೆಟ್ಟ ಹತ್ತುವಾ ಕನ್ನಡದ ಬಾವುಟದಲ್ಲೂ ಅಪ್ಪು ಫೋಟೋ. ಮತ್ತೊಂದು ಕೈನಲ್ಲಿ ಸೌದೆ ತುಂಡು. ಜೊತೆಗೆ, ಇದೇ 28ರಂದು ಬಿಡುಗಡೆಯಾಗುವ ಅಪ್ಪು ಅಭಿನಯದ ಗಂಧದ ಗುಡಿ ಚಿತ್ರದ ಕಟೌಂಟ್ ಕೂಡ ಇಟ್ಟುಕೊಂಡು ಬೆಟ್ಟ ಹತ್ತಿದ್ದಾರೆ.

ಬೆಟ್ಟದ ತುದಿಯಲ್ಲಿ ಅಪ್ಪುವಿನ ಗಂಧದಗುಡಿ ಚಿತ್ರ ಭರ್ಜರಿ ಪ್ರದರ್ಶನ ಕಾಣುವಂತೆ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ. ನಗರದ ಶ್ರೀಲೇಖಾ ಥಿಯೇಟರ್ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವನ ಸಾಗಿಸಿತ್ತಿರೋ ರವಿ ಇಷ್ಟು ವರ್ಷಗಳ ಕಾಲ ಕ್ಯಾಂಟೀನ್‍ಗೆ ತನ್ನ ಮಗಳ ಹೆಸರನ್ನ ಇಟ್ಟಿದ್ದರು. ಆದರೆ, ಕಳೆದೊಂದು ವರ್ಷದಿಂದ ಮಗಳ ಹೆಸರನ್ನ ತೆಗೆದು ಅಪ್ಪು ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ.

English summary
A Fan from Dharwad Worshiped Puneeth Rajkumar photo with Goddess Lakshmi during the Dipavali celebration,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X