ಜನೌಷಧ ಕೇಂದ್ರದ ಔಷಧ ತೆಗೆದುಕೊಂಡರೆ ರೋಗಿಗಳೇ ಜವಾಬ್ದಾರರು, ವೈದ್ಯರಲ್ಲ!
ಧಾರವಾಡ, ಜುಲೈ 13 : ಬಡ ರೋಗಿಗಳಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ಆರಂಭಿಸಿದ ಜನೌಷಧ ಕೇಂದ್ರಗಳು ಕೆಲವು ಖಾಸಗಿ ವೈದ್ಯರುಗಳ ಹಾಗೂ ಖಾಸಗಿ ಮೆಡಿಕಲ್ ಶಾಪ್ ಮಾಲೀಕರ ಹೊಟ್ಟೆ ಉರಿಗೆ ಕಾರಣವಾಗಿರುವುದು ಸುಳ್ಳಲ್ಲ.
ಧಾರವಾಡದ ವೈದ್ಯೆಯೊಬ್ಬರು ಜನೌಷಧ ಕೇಂದ್ರದಲ್ಲಿ ಔಷಧಿ ತೆಗೆದುಕೊಂಡು ಖಾಯಿಲೆ ವಾಸಿಯಾಗಲಿಲ್ಲವೆಂದರೆ ವೈದ್ಯರು ಜವಾಬ್ದಾರರಲ್ಲ ಎಂದು ಸೂಚನೆಯನ್ನು ತಮ್ಮ ಕ್ಲಿನಿಕ್‌ನಲ್ಲಿ ಅಂಟಿಸಿದ್ದಾರೆ. ದುರಹಂಕಾರಿ ವೈದ್ಯೆಯ ಈ ಸೂಚನೆ ಈಗ ಚರ್ಚೆಗೆ ಕಾರಣವಾಗಿದೆ.
ಧಾರವಾಡದ ಮಧುಮೇಹ ತಜ್ಞೆ ಡಾ. ಸಂಧ್ಯಾ ಎಸ್. ಕುಲಕರ್ಣಿ ಎಂಬುವರು ತಮ್ಮ ಕ್ಲಿನಿಕ್‌ನಲ್ಲಿ ಈ ರೀತಿಯ ಸೂಚನೆಯನ್ನು ಅಂಟಿಸಿದ್ದು, ಜನೌಷಧ ಕೇಂದ್ರದಿಂದ ತೆಗೆದುಕೊಳ್ಳುವ ಔಷಧಗಳಿಗೆ ರೋಗಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

ಸಂಧ್ಯಾ ಅವರ ಈ ಸೂಚನೆಯ ಚಿತ್ರ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ತಮ್ಮ ಲಾಭಕ್ಕೆ ಕಡಿವಾಣ ಬಿದ್ದಿದ್ದಕ್ಕೆ ವೈದ್ಯರು ಹೊಟ್ಟೆ ಉರಿಗೆ ಹಾಕಿರುವ ಎಚ್ಚರಿಕೆ ಎಂದು ಹಲವರೆಂದರೆ. ಜನೌಷಧ ಕೇಂದ್ರದ ಔಷಧಗಳ ಗುಣಮಟ್ಟದ ಬಗ್ಗೆಯೂ ಕೆಲವರು ಮಾತನಾಡುತ್ತಿದ್ದಾರೆ.












Click it and Unblock the Notifications