ಹುಬ್ಬಳ್ಳಿ: ಪ್ರಥಮ ಸ್ಥಾನ ಹಂಚಿಕೊಂಡ ಇಬ್ಬರು ಸಾಧಕಿಯರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮೇ 27: ಹುಬ್ಬಳ್ಳಿಯ ನಗರದ ಚೌಗುಲಾ ಶಿಕ್ಷಣ ಸಂಸ್ಥೆಯ ನೇಹಾ ಎಸ್. ಹುಬ್ಬಳ್ಳಿ ಹಾಗೂ ಪ್ರೇರಣಾ ಕಾಲೇಜಿನ ಕೃಪಾ ಜೈನ್ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

ವಿದ್ಯಾನಿಕೇತನ ಕಾಲೇಜಿನ ನೇಹಾ ವಿಜ್ಞಾನ ವಿಭಾಗದಲ್ಲಿ ಶೇ. 97.80 ರಷ್ಟು ಅಂಕ ಪಡೆದರೆ, ಕೆಎಲ್ಇ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿನಿ ಕೃಪಾ ಜೈನ್ ವಿಜ್ಞಾನ ವಿಭಾಗದಲ್ಲಿ ಶೇ.97.80 ಅಂಕ ಪಡೆದುಕೊಂಡಿದ್ದಾರೆ.[ವಾಣಿಜ್ಯ ವಿಭಾಗದ ಸಾಧಕಿಗೆ ಐಎಎಸ್ ಅಧಿಕಾರಿ ಆಗುವ ಆಸೆ]

 2nd PUC results: Hubballi Students Achievements

ನೇಹಾ ಪರಿಚಯ: ನಗರದ ವಿದ್ಯಾನಗರ ಶಿರೂರ ಪಾರ್ಕನ ನಿವಾಸಿ ಉದ್ಯಮಿ ಸುರೇಂದ್ರ ಹಾಗೂ ಸವಿತಾ ಹುಬ್ಬಳ್ಳಿ ದಂಪತಿಯ ಪುತ್ರಿ ನೇಹಾ. ಈ ಕುರಿತು ಸಂತಸ ಹಂಚಿಕೊಂಡಿರುವ ನೇಹಾ, ನನ್ನ ಕಠಿಣ ಶ್ರಮಕ್ಕೆ ಫಲ ದಕ್ಕಿದೆ. ಟ್ಯೂಷನ್ ಗೆ ಹೋಗದೇ ಮನೆಯಲ್ಲಿಯೇ ಪ್ರತಿನಿತ್ಯ 5ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ ಎನ್ನುತ್ತಾರೆ. ನಾನು ಮುಂದೆ ವೈದ್ಯಳಾಗಬೇಕೆಂದುಕೊಂಡಿದ್ದೇನೆ ಎಂದು ತನ್ನ ಮುಂದಿನ ಗುರಿಯನ್ನು ನೇಹಾ ಹೇಳುತ್ತಾರೆ.[ಕಲಾ ಪ್ರವೀಣೆ ಬಳ್ಳಾರಿಯ ಅನಿತಾಗೆ ಐಎಎಸ್ ಮಾಡುವ ಕನಸು]

 2nd PUC results: Hubballi Students Achievements

ಕೃಪಾ ಪರಿಚಯ: ಸ್ಥಳೀಯ ರಾಜನಗರದ ನಿವಾಸಿಯಾಗಿರುವ ವ್ಯಾಪಾರಸ್ಥ ಅಭಯ ಜೈನ್ ಹಾಗೂ ಇಂದಿರಾ ಜೈನ್ ದಂಪತಿಯ ಪುತ್ರಿ ಕೃಪಾ, 'ನನಗೆ ಕಾಲೇಜಿನಲ್ಲಿ ಉತ್ತಮ ಕೋಚಿಂಗ್ ನೀಡುತ್ತಿದ್ದರು. ಇದು ನನಗೆ ತುಂಬಾ ಸಹಕಾರಿಯಾಗಿದೆ' ಎನ್ನುತ್ತಾರೆ ನಿತ್ಯ 5 ರಿಂದ 6 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಟಿವಿ ನೋಡುತ್ತಿದ್ದೆ. ಗಿಟಾರ್, ಬ್ಯಾಡ್ಮಿಂಟನ್, ಸಂಗೀತದ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೇನೆ. ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುವ ಆಸಕ್ತಿ ಇದ್ದು ಐಎಎಎಸ್ ನನ್ನ ಕನಸು ಎಂದು ಹೇಳಿದರು.

 2nd PUC results: Hubballi Students Achievements

ವಿದ್ಯಾರ್ಥಿಗಳ ಸಾಧನೆಯನ್ನು ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ, ನಿರ್ದೇಶಕ ಶಂಕರಣ್ಣ ಮುನವಳ್ಳಿ ಮತ್ತು ಕೆಎಲ್ಇ ವಿಶ್ವವಿದ್ಯಾಲಯ ಕುಲಪತಿ ಅಶೋಕ ಶೆಟ್ಟರ್ ಶ್ಲಾಘಿಸಿದ್ದಾರೆ.

hubballi

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi : Neha S Hubballi from chowgula school and Krapa Jain from Prerana Collage both are got first place in 2nd PUC results. Both students are secured 97.80 percent.
Please Wait while comments are loading...