ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ದಾವಣಗೆರೆ, ಕಳಪೆ ರಸ್ತೆ ವಿರುದ್ಧ ಗ್ರಾಮಸ್ಥರ ಆಕ್ರೋಶ

|
Google Oneindia Kannada News

ದಾವಣಗೆರೆ ಜುಲೈ 20: ಇತ್ತೀಚೆಗೆ ನಿರ್ಮಿಸಿದ್ದ ಡಾಂಬರು ರಸ್ತೆ ಮರದ ತೊಗಟೆಯಂತೆ ಕಿತ್ತು ಬರುತ್ತಿರುವ ಹಿನ್ನೆಲೆ ದಾವಣಗೆರೆ ಜಿಲ್ಲೆ ಜಗಳೂರಿನ ಯರಲಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಮಾಡಿ 15 ದಿನದ ನಂತರ ಡಾಂಬರು ಕೈಯಿಂದಲೇ ಕಿತ್ತು ಬರುತ್ತಿದೆ. ಈ ಕಳಪೆ ಕಾಮಗಾರಿಗೆ ಯರಲಕಟ್ಟೆ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಕಾಮಗಾರಿ ಮಾಡಿದ್ದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದ್ದಾರೆ.

ಕಳಪೆ ಕಾಮಗಾರಿ ಮೂಲಕ ಸಾಕಷ್ಟು ಭ್ರಷ್ಟಾಚಾರವೆಸಗಲು ಕಾರಣವಾದ ಗುತ್ತಿಗೆದಾರರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Yerlakatte Villagers Upset With Poor Road Work

ದಾವಣಗೆರೆ ಜಿಲ್ಲೆಯ ಜಗಳೂರಿನ ಯರಲಕಟ್ಟೆ ಗ್ರಾಮದಲ್ಲಿ ಅಂದಾಜು 1. 80 ಕೋಟಿ ರು. ವೆಚ್ಚದಲ್ಲಿ ಒಟ್ಟು 3 ಕಿ.ಮೀ. ಡಾಂಬರು ರಸ್ತೆ ನಿರ್ಮಿಸಲಾಗಿತ್ತು. ಇದೀಗ ಆ ರಸ್ತೆ ಕಾಮಗಾರಿ ಕಳೆಪೆ ಕಾಮಗಾರಿ ಎಂದು ಗೊತ್ತಾಗಿದೆ. ಈ ಕುರಿತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸರ್ಕಾಗಳು ಆದ್ಯತೆ ನೀಡುತ್ತಿರುವ ಹೊತ್ತಿನಲ್ಲಿ ಇಂತಹ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಹಳ್ಳಿಗಳಿಗೆ ಮೂಲಸೌಕರ್ಯ ಸಮಪರ್ಕವಾಗಿ ದೊರೆಯದಂತಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಾಂತರ ಹಣ ಸದ್ಬಳಕೆ ಆಗದೇ ಈ ರೀತಿ ಪೋಲಾಗುತ್ತಿದೆ. ಅಧಿಕಾರಿಗಳ ಸ್ವಾರ್ಥದಿಂದಾಗಿ ಕಳಪೆ ಕಾಮಗಾರಿ ನಡೆದಿದೆ ಎಂದು ಅವರು ದೂರಿದ್ದಾರೆ.

Recommended Video

ಅಗ್ನಿವೀರ್ ಪ್ರಾಜೆಕ್ಟ್ ನಿಂದಾಗಿ ಭಾರತ ರಕ್ಷಣಾ ಪಡೆಗೆ ಏನು ಲಾಭ | *Defence | OneIndia Kannada

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಬಿಬಿಎಂಪಿ ಕೋಟ್ಯಾಂತರ ರೂ. ವ್ಯಯಿಸಿ ಮಾಡಿದ್ದ ಡಾಂಬರು ರಸ್ತೆ ಸಹ ಇದೇ ರೀತಿ ಕಿತ್ತು ಸಾಕಷ್ಟು ಸುದ್ದಿಯಾಗಿತ್ತು. ಈ ಕಳಪೆ ಕಾಮಗಾರಿ ಕುರಿತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು.

English summary
After completing of road work Yerlakatte village Jagalur at Davangere district. Villegers upset on the poor quality of work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X