ಹರಿಹರ: ಬೆಲೆ ಗಗನಕ್ಕೆ ಮುಟ್ಟಿದ ವೇಳೆಯೇ ರಾತ್ರೋರಾತ್ರಿ 2 ಕ್ವಿಂಟಲ್ ಬೆಳ್ಳುಳ್ಳಿ ಎಗರಿಸಿದ ಖದೀಮರು, ಮೌಲ್ಯ ಎಷ್ಟು?
ದಾವಣಗೆರೆ, ಫೆಬ್ರವರಿ, 28: ಇದೀಗ ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ದಿನಬಳಕ್ಕೆ ವಸ್ತಗಳ ದರಗಳು ಗಗನಕ್ಕೆ ಮುಟ್ಟಿವೆ. ಇನ್ನು ಕೆ.ಜಿ. ಬೆಳ್ಳುಳ್ಳಿ ದರ ಕೆಲವು ದಿನಗಳ ಹಿಂದೆಯಷ್ಟೇ 500-600 ರೂಪಾಯಿವರೆಗೂ ತಲುಪಿತ್ತು. ಇದೀಗ ತುಸು ಇಳಿಕೆಯಾಗಿದೆ. ಆದರೂ ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದ್ರೆ ಈ ಬೆಲೆ ದುಪ್ಪಟ್ಟಾಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಇಂತಹ ಸಮಯದಲ್ಲಿ ಬೆಳೆ ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾಕೆ ಅಂತೀರಾ ಇಲ್ಲಿದೆ ಮಾಹಿತಿ.
ಬರಗಾಲದಲ್ಲೂ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಎರೆ ಹೊಸಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರ 80,000 ರೂಪಾಯಿ ಮಲ್ಯದ ಬೆಳ್ಳುಳ್ಳಿಯನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ಸಂಭವುಸಿದ್ದು, ಬೆಳೆಗಳನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ.

ಮೊದಲೆಲ್ಲ ಅಡಿಕೆ, ತೆಂಗಿನಕಾಯಿಯನ್ನು ಕಳ್ಳತನ ಮಾಡುತ್ತಿದ್ದರು. ಇದೀಗ ದರ ಏರಿಕೆ ಹಿನ್ನೆಲೆ ಬೆಳ್ಳುಳ್ಳಿಯನ್ನು ದುಷ್ಕರ್ಮಿಗಳು ಕಳ್ಳತನ ಮಾಡಲು ಆರಂಭಿಸಿದ್ದಾರೆ. ಹೊಸಳ್ಳಿ ಗ್ರಾಮದ ಚಂದ್ರಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಗುತ್ತಿಗೆ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳ್ಳುಳ್ಳಿ ಬೆಳೆಯನ್ನು ಬೆಳೆದಿದ್ದರು. ಯಾರೋ ದುಷ್ಕರ್ಮಿಗಳು ರಾತ್ರೋರಾತ್ರಿ 80,000 ರೂಪಾಯಿ ಮೌಲ್ಯದ 2 ಕ್ವಿಂಟಲ್ ತೂಕದ ಬೆಳ್ಳುಳ್ಳಿಯನ್ನು ಎಗರಿಸಿದ್ದಾರೆ. ಇನ್ನು ಈ ಘಟನೆ ಗ್ರಾಮದಲ್ಲಿ ಜಾತ್ರೆಯ ಸಮಯದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications