ವಿಡಿಯೋ: ಸರಸಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ಗೆ ಯದ್ವಾತದ್ವಾ ಏಟು!
Recommended Video

ಸರಸಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ಗೆ ಯದ್ವಾತದ್ವಾ ಏಟು! | Oneindia Kannada
ದಾವಣಗೆರೆ, ಅಕ್ಟೋಬರ್ 16: ಬ್ಯಾಂಕ್ ವ್ಯವಹಾರಕ್ಕೆಂದು ಬಂರುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಬ್ಯಾಂಕ್ ಮ್ಯಾನೇಜರ್ ನನ್ನು ಮಹಿಳೆ ಯದ್ವಾತದ್ವಾ ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬ್ಯಾಂಕಿಗೆ ಸಾಲ ಕೇಳಿಕೊಂಡು ಬಂದಿದ್ದ ಮಹಿಳೆಯ ಬಳಿ, 'ಸಾಲ ಬೇಕು ಎಂದರೆ ನನ್ನೊಂದಿಗೆ ಸರಸಕ್ಕೆ ಬರಬೇಕು' ಎಂದಿದ್ದ ಬ್ಯಾಂಕ್ ಮ್ಯಾನೇಜರ್. ಅಷ್ಟೇ ಅಲ್ಲ, ತನ್ನ ಮನೆಗೂ ಮಹಿಳೆಯನ್ನು ಆಮಂತ್ರಿಸಿದ್ದ.

ಮ್ಯಾನೇಜರ್ ನ ಆಮಂತ್ರಣದ ಮೇರೆಗೆ ಆತನ ಮನೆಗೆ ತೆರಳಿದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಮ್ಯಾನೇಜರ್ ನನ್ನು ಆತನದೇ ಮನೆಯಿಂದ ಆಚೆಯ ಬೀದಿಗೆ ಎಳೆದು ತಂದು, ಮಹಿಳೆ ಯದ್ವಾತದ್ವಾ ಥಳಿಸಿದ್ದಾರೆ.
ದೊಣ್ಣೆ, ಚಪ್ಪಲಿಗಳಿಂದ ಅವರು ಥಳಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ದೂರು ದಾಖಲಿಸಿಕೊಂಡ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.












Click it and Unblock the Notifications