ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಒತ್ತುವರಿ: ಸಚಿವ ಬೈರತಿ ಬಸವರಾಜ, ಗ್ರಾಮಸ್ಥರ ಮಾತಿನ ಚಕಮಕಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ: ಹಳೇ ಕುಂದುವಾಡ ಗ್ರಾಮದಲ್ಲಿ ಮುಖ್ಯ ರಸ್ತೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರನ್ನು ಭೇಟಿ ಮಾಡಿದರು. ಈ ವೇಳೆ ವಾಗ್ವಾದವೇ ನಡೆದಿದೆ.

ನಗರದ ಜಿಎಂಐಟಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಹಳೇಕುಂದವಾಡ ಗ್ರಾಮಸ್ಥರು, ಸರ್ಕಾರದ ದಾಖಲೆಯಂತೆ 80 ಅಡಿ ಹದ್ದುಬಸ್ತು ಮಾಡಿಕೊಡಿ ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮಸ್ಥರು ಜಿಲ್ಲೆಗೆ ಸಚಿವರು ಆಗೊಮ್ಮೆ ಈಗೊಮ್ಮೆ ಬರುತ್ತಾರೆ ಎಂಬ ಮಾತಿಗೆ ಸಚಿವರ ಸಿಟ್ಟಿಗೆ ಕಾರಣವಾಯಿತು. ಈ ವೇಳೆ ಗ್ರಾಮಸ್ಥರು ಮತ್ತು ಸಚಿವರ ನಡುವೆ ಮಾತಿನ ಚಕಮಕಿಯೂ ನಡೆಯಿತು‌.

ದಾವಣಗೆರೆ; ರಸ್ತೆಗೆ ಬೇಲಿ‌ ಹಾಕಿದ ಭೂಪ, ತಕ್ಕ ಪಾಠ ಕಲಿಸಿದ ಜನರುದಾವಣಗೆರೆ; ರಸ್ತೆಗೆ ಬೇಲಿ‌ ಹಾಕಿದ ಭೂಪ, ತಕ್ಕ ಪಾಠ ಕಲಿಸಿದ ಜನರು

ಜನರ ಒತ್ತಾಯದ ಬಳಿಕ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಒಂದು ವಾರದೊಳಗೆ ಆಗಿರುವ ಒತ್ತುವರಿ ತೆರವುಗೊಳಿಸಿ ಇಲ್ಲದಿದ್ದರೆ ಕುಂದವಾಡ ಕೆರೆ ಬಂದ್ ಮಾಡಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

Verbal War Between Minister Byrati Basavaraj and villagers over Road encroachment in Davanagere

ದಾವಣಗೆರೆ ನಗರ ವ್ಯಾಪ್ತಿಯ ಹಳೇ ಕುಂದುವಾಡ ಕೆರೆ ಮುಖ್ಯ ರಸ್ತೆಗೆ ಟ್ರ್ಯಾಕ್ಟರ್ ಶೋರೂಂನವರು ತಂತಿ ಬೇಲಿ ಹಾಕಿ ರಸ್ತೆಯನ್ನೆ ಬಂದ್ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಪರದಾಟ ಅನುಭವಿಸುತ್ತಿದ್ದರು. ಜೊತೆಗೆ ಸುತ್ತ ಇರುವ ಶಿವಗಂಗಾ ಕಲ್ಯಾಣ ಮಂಟಪದವರು, ಮಹಾಲಕ್ಷ್ಮೀ ಲೇ ಔಟ್‌ನವರು ಸೇರಿ ನಾಲ್ಕು ದಿಕ್ಕಿನಿಂದಲೂ 80 ಅಡಿಗೂ ಹೆಚ್ಚಿರುವ ಮುಖ್ಯ ರಸ್ತೆಯನ್ನ ನುಂಗಿ ಹಾಕಿದ್ದಾರೆ.

ಪಠ್ಯಪರಿಷ್ಕರಣೆ ಉದ್ದಟತನ ಹೀಗೆ ಬಿಟ್ಟರೆ ಕಷ್ಟ ಎದುರಿಸಲು ಸಿದ್ಧರಾಗಿ: ಸಿಎಂಗೆ ಕಾಗಿನೆಲೆ ಶ್ರೀ ಎಚ್ಚರಿಕೆ! ಪಠ್ಯಪರಿಷ್ಕರಣೆ ಉದ್ದಟತನ ಹೀಗೆ ಬಿಟ್ಟರೆ ಕಷ್ಟ ಎದುರಿಸಲು ಸಿದ್ಧರಾಗಿ: ಸಿಎಂಗೆ ಕಾಗಿನೆಲೆ ಶ್ರೀ ಎಚ್ಚರಿಕೆ!

ಸುಮಾರು ವರ್ಷಗಳಿಂದ ಇದೇ ಮಾರ್ಗ ಮುಖ್ಯ ರಸ್ತೆಯಾಗಿದ್ದು, ರಸ್ತೆ ಬಂದ ಆಗಿರುವ ಹಿನ್ನಲೆ ಊರಿನ ಮಹಿಳೆಯರು, ಗರ್ಭಿಣಿಯರು, ವಿದ್ಯಾರ್ಥಿಗಳು, ಕೂಲಿ ಕೆಲಸಗಾರರು ಸೇರಿ ಎಲ್ಲರು ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆ ಒತ್ತುವರಿ ಆಗಿರುವ ರಸ್ತೆ ಜಾಗವನ್ನು ಬಿಡಿಸಿಕೊಡಬೇಕು. ಜೊತೆಗೆ 80 ಅಡಿ ರಸ್ತೆಯನ್ನ ಅಭಿವೃದ್ದಿಪಡಿಸಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಸಚಿವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Verbal War Between Minister Byrati Basavaraj and villagers over Road encroachment in Davanagere

Recommended Video

ಭಾರತ ತಂಡಕ್ಕೆ ಸವಾಲ್ ಹಾಕಿದ ಬೆನ್ ಸ್ಟ್ರೋಕ್ !! | *Cricket | Oneindia Kannada

ಮಾಜಿ‌ ಮೇಯರ್ ಹೆಚ್. ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ಜಯಪ್ರಕಾಶ್ ಬಾಬು, ಹನುಮಂತಪ್ಪ, ಜೆ. ಮಾರುತಿ, ಜೆಸಿ ದೇವರಾಜ್, ಎನ್. ಟಿ. ನಾಗರಾಜ್, ಅಣ್ಣಪ್ಪ, ಕುಂದುವಾಡ ಮಂಜುನಾಥ್, ಮಧುನಾಗರಾಜ್, ಪ್ರಕಾಶ್, ಮಹೇಶಪ್ಪ ಮತ್ತು ಗ್ರಾಮಸ್ಥರು ಈ ವೇಳೆ ಇದ್ದರು.

English summary
Verbal war in Davanagere between district in-charge minister Byrati Basavaraj and villager over Road encroachment issues on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X