ಮದುವೆಯಾದರೂ ಬೇರೆಯೊಬ್ಬನ ಮೇಲೆ ಪ್ರೀತಿ: ಕೆರೆಗೆ ಹಾರಿ ಪ್ರೇಯಸಿ, ಪ್ರಿಯಕರ ಸಾವು
ದಾವಣಗೆರೆ, ಆಗಸ್ಟ್, 18: ಬೆಂಗಳೂರಿನ ನಾಗರತ್ನ ಎನ್ನುವ ಮಹಿಳೆ ಗಂಡನನ್ನು ಬಿಟ್ಟು ಬೇರೆ ಯುವಕನ ಜೊತೆಗೆ ಪ್ರೇಮ ಸಲ್ಲಾಪವನ್ನು ಬೆಳೆಸಿಕೊಂಡಿದ್ದಳು. ಇದೀಗ ಮದುವೆಯಾದ ಮಹಿಳೆ ಹಾಗೂ ಆಕೆಯ ಪ್ರಿಯಕರ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದಲ್ಲಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಇವರ ಪ್ರೇಮಾಂಕುರದ ಕತೆ ಕೇಳಿದರೆ ಎಂಥವರೂ ದಂಗಾಗಿ ಬಿಡುತ್ತಾರೆ. ಮದುವೆ ಒಬ್ಬರ ಜೊತೆಗೆ, ಸಲ್ಲಾಪ ಮತ್ತೊಬ್ಬನ ಜೊತೆಗೆ ಎನ್ನವ ಅಸಲಿ ಕತೆ ಈಕೆಯದಾಗಿತ್ತು.
ಮನೆಯವರಿಗೆ ಗೊತ್ತಿಲ್ಲದೇ ಬೆಂಗಳೂರಿನಿಂದ ಚನ್ನಗಿರಿಯವರೆಗೂ ಬಂದಿದ್ದಾರೆ. ಅದು ಬೈಕ್‌ನಲ್ಲಿ ಇವರಿಬ್ಬರು ಬಂದಿದ್ದು, ಅಲ್ಲಿಯೇ ಪ್ರಾಣವನ್ನು ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸ್ ತನಿಖೆಯ ಪ್ರಕಾರ ಇವರಿಬ್ಬರು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಬಳಿಯ ಕೆರೆ ಏರಿ ಮೇಲೆ ಕುಳಿತುಕೊಂಡು ಎಂಜಾಯ್ ಮಾಡುವಾಗ ಅಲ್ಲಿನ ಗ್ರಾಮ್ಥರೊಬ್ಬರಿಗೆ ಇವರು ತಗ್ಲಾಕೊಂಡಿದ್ದಾರೆ. ತಕ್ಷಣ ಇವರು ಕೆರೆಗೆ ಹಾರಿ ಸತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನಾಗರತ್ನ ಪ್ರೀತಿಯ ಬಲೆಗೆ ಬಿದ್ದಿದ್ದು ಹೇಗೆ?
ಬೆಂಗಳೂರಿನ ನಾಗರತ್ನ, ಚರಣ್ ಎಂಬುವವರು ಸಾವಿಗೆ ಶರಣಾಗಿದ್ದಾರೆ. ನಾಗರತ್ನಳಿಗೆ ಈಗಾಗಲೇ ಮದುವೆಯೂ ಆಗಿತ್ತು. ಆದರೂ ಚರಣ್ ಮೇಲೆ ಆಕೆಗೆ ಪ್ರೇಮವಾಗಿ ಮತ್ತೆ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. 21 ವರ್ಷದ ನಾಗರತ್ನ ಎಂಬಾಕೆಯು ಆಧಾರ್ ಕಾರ್ಡ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಏಳು ತಿಂಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಲು ಬಂದ ಚರಣ್‌ಗೆ ಆಕೆಯ ಪರಿಚಯವಾಗಿದೆ. ಬಳಿಕ ಇಬ್ಬರು ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದಾರೆ.

ಬೆಂಗಳೂರಿನಿಂದ ಬಂದು ಚನ್ನಗಿರಿಯಲ್ಲಿ ಆತ್ಮಹತ್ಯೆ
ಟಿವಿಎಸ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಚರಣ್ ಮತ್ತು ನಾಗರತ್ನ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ಬಿಟ್ಟಿರಲು ಆಗದಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು. ನಿನ್ನೆ ಬೆಂಗಳೂರಿನಿಂದ ಚನ್ನಗಿರಿ ತಾಲೂಕಿನ ಬೆಂಕಿಕೆರೆಯವರೆಗೆ ಬೈಕ್‌ನಲ್ಲಿ ಬಂದಿದ್ದಾರೆ. ಕೆರೆಯ ನೀರಿನಲ್ಲಿ ಆಟವಾಡಿ, ಮೋಜು ಮಸ್ತಿ ಮಾಡಿದ್ದಾರೆ. ಇವರಿಬ್ಬರು ಕೆರೆಯ ದಂಡೆ ಮೇಲೆ ಕುಳಿತು ನೀರಿನಲ್ಲಿ ಆಟ ಆಡುತ್ತಿದ್ದನ್ನು ಶಿವಣ್ಣ ಎಂಬುವವರು ನೋಡಿದ್ದಾರೆ.
ನೀರಿಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ
ಕೆರೆಯ ದಂಡೆ ಮೇಲೆ ಸುಮಾರು ಹೊತ್ತು ಕಳೆದ ಬಳಿಕ ಇಬ್ಬರೂ ಕೈಗೆ ವೇಲ್ ಅನ್ನು ಬಿಗಿದುಕೊಂಡು ನೀರಿಗೆ ಜಿಗಿದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಪೀಣ್ಯದ ಕಾರ್ಖಾನೆಯೊಂದರಲ್ಲಿ ನಾಗರತ್ನಳ ಪತಿ ಕೆಲಸ ಮಾಡುತ್ತಿದ್ದರು. ನಾಗರತ್ನ ಹಾಗೂ ಚರಣ್ ಕಾಣೆಯಾದ ಬಗ್ಗೆ ಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರಿಬ್ಬರು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕಂಡುಬಂದಿದೆ. ಚನ್ನಗಿರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಕುಟುಂಬದವರಿಗೆ ತಮ್ಮ ಕಳ್ಳಾಟದ ಪ್ರೇಮಾಂಕುರ ವಿಷಯ ಗೊತ್ತಾದರೆ ಏನಾಗುತ್ತದೆಯೋ ಏನೋ ಎಂಬ ಭಯದಿಂದ ಬೆಂಗಳೂರಿನಿಂದ ಇಲ್ಲಿಗೆ ಬಂದು ಸಾವಿಗೆ ಶರಣಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications