ಹರಿಹರ: ಖದೀಮರ ಬಂಧಿಸಿ 16.52 ಲಕ್ಷ ರೂಪಾಯಿ ಮೌಲ್ಯದ 30 ಬೈಕ್‍ಗಳ ವಶ
ದಾವಣಗೆರೆ, ಅಕ್ಟೋಬರ್ 28: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಖದೀಮರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಸಹ ಪೊಲೀಸರು ಮಾಡುತ್ತಿದ್ದಾರೆ. ಇದೀಗ ಇಬ್ಬರು ಬೈಕ್ ಕಳ್ಳರನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿ 16.52 ಲಕ್ಷ ರೂಪಾಯಿ ಮೌಲ್ಯದ 30 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರಿನ ಪ್ರತಾಪ್ ಹಾಗೂ ಬಳ್ಳಾರಿ ಜಿಲ್ಲೆಯ ಬೋಜರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳು ಹರಿಹರದ ಇಂದಿರಾನಗರ, ವಿದ್ಯಾನಗರ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿದ್ದರು.

ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ ಮಾಲೀಕರಿಗೆ ಬೈಕ್‍ಗಳನ್ನು ಮರಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಎಸ್‍ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫ್ಲಿಪ್ ಕಾರ್ಟ್ ವಸ್ತುಗಳ ಕಳ್ಳತನ: ಬಿಗ್ ಬಿಲಿಯನ್ ಡೇ ಬಂತೆಂದರೆ ಸಾಕು ಆಫರ್ ಬೆಲೆಯಲ್ಲಿ ವಸ್ತುಗಳನ್ನು ಶಾಪಿಂಗ್ ಮಾಡಲು ಬಹುತೇಕ ಮಂದಿ ಆನ್‌ಲೈನ್‌ನತ್ತ ಮುಖ ಮಾಡುತ್ತಾರೆ. ಹಾಗೆಯೇ ಇತ್ತೀಚೆಗಷ್ಟೇ ಅಮೇರಿಕಾ ಮೂಲದ ದೈತ್ಯ ಕಂಪನಿ ಫ್ಲಿಪ್ ಕಾರ್ಟ್ ಕೂಡ ಭರ್ಜರಿ ಆಫರ್ ಘೋಷಿಸಿತ್ತು. ಈ ವೇಳೆಯೇ 1,00,00,000 ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ಅಮೇರಿಕಾ ಮೂಲದ ದೈತ್ಯ ಕಂಪನಿ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಘೋಷಿಸಿದ ವೆಳೆಯೇ ಕೋಟಿ.. ಕೋಟಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದೆ. ಫ್ಲಿಪ್ ಕಾರ್ಟ್ ಕಂಪನಿಯ ಬಿಗ್ ಬಿಲಿಯನ್ ಡೇ ಮಾರಾಟದ ವೇಳೆಯೇ ಸಾರಿಗೆ ಟ್ರಕ್‌ನಿಂದ 1.21 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನ ಆಗಿವೆ. ಈ ಕುರಿತು ಪಂಜಾಬ್ ಪೊಲೀಸರು ಚಾಲಕ ಮತ್ತು ಆತನ ಸಹಾಯಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಫ್ಲಿಪ್ ಕಾರ್ಟ್ ಸರಕುಗಳನ್ನು ತಲುಪಿಸುವ ಜವಾಬ್ದಾರಿ ಹೊತ್ತಿರುವ ಸಾರಿಗೆ ಸಂಸ್ಥೆ ಕ್ಯಾಮಿಯಾನ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಟ್ರಕ್‌ನಿಂದ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಹರಿಯಾಣ ನಿವಾಸಿ ಮತ್ತು ಕಂಪನಿಯ ಫೀಲ್ಡ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ಪ್ರೀತಮ್ ಶರ್ಮಾ ದೂರಿನ ಪ್ರಕಾರ, ಸೆಪ್ಟೆಂಬರ್ 27ರಂದು ಮುಂಬೈನ ಭಿವಾಂಡಿಯಿಂದ 11,677 ಸರಕುಗಳನ್ನು ತುಂಬಿ ಖನ್ನಾದ ಮೋಹನ್ಪುರದಲ್ಲಿರುವ ಫ್ಲಿಪ್‌ಕಾರ್ಟ್ ಗೋದಾಮಿಗೆ ಕಳುಹಿಸಲಾಯಿತು.
ರಾಜಸ್ಥಾನದ ಭರತ್ಪುರದ ಕಕ್ರಾಲಾ ಗ್ರಾಮದ ನಿವಾಸಿ ನಾಸಿರ್ ತನ್ನ ಸಹಾಯಕ ಚೆಟ್ ಅವರೊಂದಿಗೆ ವಾಹನವನ್ನು ಚಾಲನೆ ಮಾಡುತ್ತಿದ್ದರು. ಟ್ರಕ್ ಖನ್ನಾ ಗೋದಾಮನ್ನು ತಲುಪಿದಾಗ, ನಾಸಿರ್ ಕೆಳಗಿಳಿದರು. ಆದರೆ ಚೆಟ್ ಆವರಣದಿಂದ ಹೊರಡುವ ಮೊದಲು ವೇರ್ಹೌಸ್ ಕೌಂಟರ್‌ನಲ್ಲಿ ವಾಹನವನ್ನು ನಿಲ್ಲಿಸಿದರು. ಬಳಿಕ ಕಂಪನಿಯ ಸಿಬ್ಬಂದಿ ಸದಸ್ಯ ಅಮರ್ದೀಪ್ ಸಿಂಗ್ ಶರ್ಮಾ ಅವರಿಗೆ ಕರೆ ಮಾಡಿ ರವಾನೆಯನ್ನು ಸ್ಕ್ಯಾನ್ ಮಾಡಿದಾಗ 234 ವಸ್ತುಗಳು ಕಾಣೆ ಆಗಿರುವುದು ಕಂಡುಬಂದಿದೆ.
221 ಐಫೋನ್‌ಗಳು, ಇತರ ಐದು ಮೊಬೈಲ್ ಫೋನ್‌ಳು, ಬಟ್ಟೆಗಳು, ಐಲೈನರ್‌ಗಳು, ಹೆಡ್‌ಫೋನ್‌ಗಳು, ಮಾಯಿಶ್ಚರೈಸರ್ಗಳು, ಸುಗಂಧ ದ್ರವ್ಯಗಳು ಮತ್ತು ಸಾಬೂನುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.












Click it and Unblock the Notifications