ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರೀನ್ ಝೋನ್‌ಗೆ ಬಂದಿದ್ದ ದಾವಣಗೆರೆಯಲ್ಲಿ ಈಗ ಸೀಲ್ ಡೌನ್ ಆದೇಶ

|
Google Oneindia Kannada News

ದಾವಣಗೆರೆ, ಮೇ 1: ಮೂರು ಕೊರೊನಾ ಪಾಸಿಟಿವ್‌ ಕೇಸ್‌ಗಳು, ನೆಗೆಟಿವ್ ಆದ ಹಿನ್ನೆಲೆ ದಾವಣಗೆರೆಯನ್ನು ಗ್ರೀನ್ ಝೋನ್‌ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ದಾವಣಗೆರೆ ನಗರದಲ್ಲಿ ಈಗ ಮತ್ತೆ ಸೀಲ್ ಡೌನ್ ಆದೇಶವನ್ನು ನೀಡಲಾಗಿದೆ.

ದಾವಣಗೆರೆ ನಗರದಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದ ಜಾಲಿ ನಗರ, ಭಾಷಾ ನಗರ ಸೀಲ್ ಡೌನ್ ಆಗಲಿವೆ. ಜನರ ಅನಗತ್ಯವಾಗಿ ಓಡಾಡುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಎರಡು ನಗರದಲ್ಲಿ 21 ಕಡೆ ಸಿಸಿ ಕ್ಯಾಮರಾ ಅಳವಡಿಕೆಯಾಗಿದೆ.

ತಮಿಳುನಾಡಿನಲ್ಲಿ ಇಂದು ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ ತಮಿಳುನಾಡಿನಲ್ಲಿ ಇಂದು ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ

ಭಾಷಾ ನಗರಕ್ಕೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ ಹಾಗೂ ಜಾಲಿ ನಗರಕ್ಕೆ ದೂಡಾ ಆಯುಕ್ತ ಕುಮಾರಸ್ವಾಮಿ ಉಸ್ತುವಾರಿವಹಿಸಿಕೊಂಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ ದಾಖಲಾಗುವ ದೃಶ್ಯಗಳು ಉಸ್ತುವಾರಿಗಳ ಮೊಬೈಲ್‌ಗೆ ಸಿಗಲಿದೆ.

Two Areas In Davanagere Seal Down

ಅನಗತ್ಯವಾಗಿ ಸುತ್ತಾಡುವರ ವಾಹನ ಸಂಖ್ಯೆ ಸಿಸಿ ಕ್ಯಾಮರಾದಲ್ಲಿ ದಾಖಲು ಆಗಲಿದೆ. ದಿನದ 24 ಗಂಟೆಗಳ ಕಾಲ ಸಿಸಿ ಕ್ಯಾಮರಾ ಕಾರ್ಯನಿರ್ವಹಣೆಯಾಗಲಿದೆ. ಸೀಲ್ ಡೌನ್ ನಗರದಲ್ಲಿ ಜಿಲ್ಲಾಡಳಿತದಿಂದ ಕಟ್ಟೆಚ್ಚೆರ ವಹಿಸಿದೆ.

ಹಸಿರು ವಲಯಕ್ಕೆ ಬಂದ ದಾವಣಗೆರೆಯಲ್ಲಿ ಬುಧವಾರ ಸ್ಟಾಫ್ ನರ್ಸ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿತ್ತು. ಗುರುವಾರ ಆರವತ್ತೊಂಬತ್ತು ವರ್ಷದ ವ್ಯಕ್ತಿಗೆ ಕೊರೊನಾ ಪತ್ತೆಯಾಯಿತು. ಇದರಿಂದ ದಾವಣಗೆರೆಯಲ್ಲಿ ಮತ್ತೆ ಆತಂಕ ಶುರುವಾಗಿದೆ.

English summary
Coronavirus cases increasing, two areas in Davanagere seal down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X