ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಕ್ಕೆ ಟ್ರಿಪ್‌ ಪ್ಲಾನ್‌: ದಾವಣಗೆರೆಯ ಈ 5 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್‌ 16: ಇನ್ನು ಕೆಲ ದಿನ ಕಳೆದರೆ ಹೊಸ ವರ್ಷ. 2022ಕ್ಕೆ ವಿದಾಯ ಹೇಳಿ 2023 ಬರಮಾಡಿಕೊಳ್ಳಲು ಎಲ್ಲರೂ ಕುತೂಹಲರಾಗಿದ್ದಾರೆ.

ಹೊಸ ವರ್ಷಾಚರಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ಕೆಲವರು ಅದ್ಧೂರಿಯಾಗಿಸಲು ಕಾತರರಿಂದ ಕಾಯುತ್ತಿದ್ದಾರೆ. ಕೊರೊನಾ, ಒಮಿಕ್ರಾನ್ ನಿಂದ ಕಳೆದ ಎರಡ್ಮೂರು ವರ್ಷ ಕಳೆಗುಂದಿದ್ದ ಹೊಸ ವರ್ಷಾಚರಣೆ ಈ ಬಾರಿ ರಂಗೇರುವುದು ಖಚಿತ.

ಮತ್ತೆ ಕೆಲವರು ಹೊಸ ವರ್ಷಕ್ಕೆ ಮುನ್ನ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಿರುತ್ತಾರೆ. ಅಂಥ ಪ್ರವಾಸ ಪ್ರಿಯರು, ಚಾರಣ ಹೋಗುವವರು ದಾವಣಗೆರೆಯ ಐದು ಪ್ರವಾಸಿ ತಾಣಗಳು ಹೇಳಿ ಮಾಡಿಸಿದಂತಿವೆ.

ಸೂಳೆಕೆರೆಯಲ್ಲಿ ಬೋಟಿಂಗ್ ಮಜಾ

ಸೂಳೆಕೆರೆಯಲ್ಲಿ ಬೋಟಿಂಗ್ ಮಜಾ

ಏಷ್ಯಾ ಖಂಡದಲ್ಲಿ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿ ಪಡೆದಿರುವ ಸೂಳೆಕೆರೆ ಚನ್ನಗಿರಿ ತಾಲೂಕಿನಲ್ಲಿದೆ. ದಾವಣಗೆರೆಯಿಂದ 45 ಕಿಲೋಮೀಟರ್ ದೂರದಲ್ಲಿರುವ ಶಾಂತಿಸಾಗರಕ್ಕೆ ಚನ್ನಗಿರಿಯಿಂದಲೂ ಹೋಗಬಹುದು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಕೆರೆಯು ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಶಾಂತಿಸಾಗರಕ್ಕೆ ಬಂದು ಎತ್ತ ಕಣ್ಣಾಯಿಸಿದರೂ ನಿಮಗೆ ಕಾಣಸಿಗುವುದು ನೀರೋ ನೀರು. ಈ ಬಾರಿ ಭಾರೀ ಮಳೆಯಾಗಿರುವ ಕಾರಣ ಸೂಳೆಕೆರೆ ಮೈದುಂಬಿದೆ. ಸೂರ್ಯಾಸ್ತ, ಸೂರ್ಯಾಸ್ತಮಾನದ ವೇಳೆ ನೀರಿನ ಮೇಲೆ ಸೃಷ್ಟಿಸುವ ಸೊಬಗು ನೋಡಲು ಚೆಂದ.

ಸೂಳೆಕೆರೆಯಿಂದ ಸ್ವಲ್ಪ ಮುಂದೆ ಅಂದರೆ ಸುಮಾರು 1 ಕಿಲೋಮೀಟರ್ ಹೋದರೆ ಬೋಟಿಂಗ್ ಕೂಡ ಇದೆ. ಎಲ್ಲಾ ರೀತಿಯಲ್ಲಿಯೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಗಾರ್ಡ್ ಗಳೂ ಸಹ ಇರುತ್ತಾರೆ. ವಿಸ್ತಾರವಾದ ನೀರಿನೊಳಗೆ ಬೋಟಿಂಗ್ ಮಾಡುವ ಮೂಲಕ ಸಂತೋಷ ಪಡಬಹುದು. ವರ್ಷಾಚರಣೆಗೂ ಮುನ್ನ ಹಾಗೂ ನ್ಯೂ ಇಯರ್ ವೇಳೆ ಎಂಜಾಯ್ ಮಾಡಲು ಹೇಳಿ ಮಾಡಿಸಿದ ತಾಣವಾಗಿದೆ.

ಗಾಜಿನ ಮನೆಗೆ ಬರುವುದು ಹೇಗೆ...?

ಗಾಜಿನ ಮನೆಗೆ ಬರುವುದು ಹೇಗೆ...?

ಇನ್ನು ದಾವಣಗೆರೆಯಲ್ಲಿ ಮೈದೆಳೆದಿರುವ ಗಾಜಿನ ಮನೆ ಅಥವಾ ಗ್ಲಾಸ್ ಹೌಸ್ ನೋಡಲು ಬರಬಹುದು. ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಈ ಗಾಜಿನ ಮನೆ ಇರುವುದು ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ. ಇಲ್ಲಿಗೆ ಬಂದರೆ ಹೊಸ ಲೋಕವೇ ಸೃಷ್ಟಿಯಾಗಿರುತ್ತದೆ. ವಿದೇಶಿ ಗಿಡಗಳು, ಗಾಜಿನ ಮನೆ ಆಕಾರವನ್ನು ನೋಡಿ ಸಂತೋಷಪಡಬಹುದು.

ದಾವಣಗೆರೆಯಿಂದ ಕೇವಲ ಏಳೆಂಟು ಕಿಲೋಮೀಟರ್ ದೂರ ಕ್ರಮಿಸಿದರೆ ಗಾಜಿನ ಮನೆ ಸಿಗುತ್ತದೆ. ಶಾಮನೂರು ಸೇತುವೆ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗಬಹುದು. ಇನ್ನುಹರಿಹರ ತಾಲೂಕಿನಿಂದ ಬರುವವರಿಗೆ ಸುಲಭ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹರಿಹರದಿಂದ ಕೇವಲ 8 ಕಿಲೋಮೀಟರ್ ವರೆಗೆ ಕ್ರಮಿಸಿದರೆ ಗಾಜಿನ ಮನೆ ಸಿಗುತ್ತದೆ. ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿನ ಸೊಬಗು ನೋಡಿ ಖುಷಿಪಡಬಹುದು.

ದುರ್ಗಾಂಬಿಕೆ ದೇವಸ್ಥಾನಕ್ಕೆ ದಾರಿ ಯಾವುದು..?

ದುರ್ಗಾಂಬಿಕೆ ದೇವಸ್ಥಾನಕ್ಕೆ ದಾರಿ ಯಾವುದು..?

ದಾವಣಗೆರೆ ನಗರದ ಶಕ್ತಿ ದೇವತೆ ದುರ್ಗಾಂಬಿಕೆ ತಾಯಿ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ದೇವತೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದೇಗುಲದಲ್ಲಿ ತಾಯಿಯ ದರುಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿಗೆ ಬಂದುಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ.

ಮಾಜಿ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಯಾರೇ ಬಂದರೂ ಈ ದೇವಿಯ ದರುಶನ ಪಡೆಯುತ್ತಾರೆ. ವಿಶೇಷ ಪೂಜೆಸಲ್ಲಿಸುತ್ತಾರೆ. ದುರ್ಗಾಂಬಿಕೆ ದೇವಸ್ಥಾನದ ಸುತ್ತಮುತ್ತಲೂ ದೇಗುಲಗಳಿದ್ದು, ಇಲ್ಲಿ ದೇವರ ದರ್ಶನ ಪಡೆದು ಪುನೀತರಾಗಬಹುದು.

ದಾವಣಗೆರೆಗೆ ಬಂದರೆ ಹೊಸ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಮಹಾನಗರ ಪಾಲಿಕೆಯ ಎದುರುಗಡೆ ಇರುವ ಕೆಳ ಸೇತುವೆ ಮೂಲಕ ಬಂದರೆ ಮಂಡಿಪೇಟೆ ಸಿಗುತ್ತದೆ. ಅಲ್ಲಿಂದ ಶಿವಪ್ಪನಾಯಕ ವೃತ್ತದವರೆಗೆ ಬಂದರೆ ಅಲ್ಲಿಂದ ಸ್ವಲ್ಪ ದೂರದಲ್ಲಿರುವುದೇ ದುರ್ಗಾಂಬಿಕಾ ದೇವಸ್ಥಾನ. ಈ ದೇವಸ್ಥಾನಕ್ಕೆ ಬರಲು ಸುಲಭ ಮಾರ್ಗ.

ದೇವರಬೆಳಕೆರೆ ಡ್ಯಾಂಗೆ ಬರುವ ಮಾರ್ಗವೇನು..?

ದೇವರಬೆಳಕೆರೆ ಡ್ಯಾಂಗೆ ಬರುವ ಮಾರ್ಗವೇನು..?

ಮಳೆ ನಿಂತರು ದೇವರ ಬೆಳಕೆರೆ ಡ್ಯಾಂನಿಂದ ಹೊರ ಬರುತ್ತಿರುವ ನೀರು ಈಗಲೂ ಹರಿಯುತ್ತಿದೆ. ಹಾಗಾಗಿ, ಇಲ್ಲಿಗೆ ಬರಬಹುದು. ದಾವಣಗೆರೆಯಿಂದ 12 ಕಿಲೋಮೀಟರ್ ದೂರದಲ್ಲಿರುವ ಡ್ಯಾಂನಿಂದ ಹೊರಬರುವ ನೀರಿನ ದೃಶ್ಯ ಎಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಈಗಲೂ ಕಾಲೇಜು ವಿದ್ಯಾರ್ಥಿಗಳು, ದಾವಣಗೆರೆ ನಗರ, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರು ಈಗಲೂ ಬರುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಹೊಸ ವರ್ಷಾಚರಣೆ ಸಂಭ್ರಮದಲ್ಲಿರುವವರು ದಾವಣಗೆರೆಗೆ ಬಂದರೆ ದೇವರ ಬೆಳಕೆರೆ ಡ್ಯಾಂ ನೋಡಿ ಖುಷಿಪಡಬಹುದು. ದೇವರ ಬೆಳಕೆರೆ ಡ್ಯಾಂಗೆ ದಾವಣಗೆರೆ ಹಾಗೂ ಮಲೇಬೆನ್ನೂರು ಮಾರ್ಗವಾಗಿ ಬರಬಹುದು

ಸಂತೆಬೆನ್ನೂರಿನ ಪುಷ್ಕರಣಿಯ ವಿಶೇಷತೆ ಏನು..?

ಸಂತೆಬೆನ್ನೂರಿನ ಪುಷ್ಕರಣಿಯ ವಿಶೇಷತೆ ಏನು..?

ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಐತಿಹಾಸಿಕ ಸುಂದರ ಪುಷ್ಕರಣಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಚನ್ನಗಿರಿಯಿಂದ 23 ಕಿಲೋಮೀಟರ್ ಹಾಗೂ ದಾವಣಗೆರೆಯಿಂದ 36 ಕಿಲೋಮೀಟರ್ ದೂರದಲ್ಲಿದೆ. ಶಾಸನ ಐತಿಹಾಸಿಕ ಸ್ಥಳ.

ಬಸವ ಪಟ್ಟಣದ ಒಡೆಯರು ಸಂತೆಬೆನ್ನೂರು ಗ್ರಾಮ ಗ್ರಾಮವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದರು. ಇದಕ್ಕೆ ಸಾಕಷ್ಟು ದಾಖಲಾತಿಗಳು ಇಲ್ಲಿವೆ. 16 ನೇ ಶತಮಾನದ ಮಧ್ಯ ಭಾಗದಲ್ಲಿ ವಿಜಯನಗರ ಅರಸರ ಅಧೀನರಾಗಿದ್ದ ಪಾಳೇಗಾರರು ಆ ಮೇಲೆ ಸ್ವತಂತ್ರವಾಗಿ ಈ ಪಾಳೆಯ ಪಟ್ಟಿಗಳನ್ನು ಆಳ್ವಿಕೆ ಮಾಡಿದ್ದಾರೆ. ಕ್ರಿ. ಶ. 1783ರಲ್ಲಿ ಭಾರತದ ಸರ್ವೆಯರ್ ಜನರಲ್ ಬರೆಸಿದ ಸಂತೆಬೆನ್ನೂರು ಸೀಮೆ ಇದು.

ಇನ್ನು ಸಂತೆಬೆನ್ನೂರಿನ ಸುಂದರ ಪುಷ್ಕರಣಿ ನೋಡಲು ಚೆಂದವೋ ಚೆಂದ. 238 ಅಡಿ ಉದ್ದ, 245 ಅಡಿ ಅಗಲವಿದ್ದು, 30 ಅಡಿ ಆಳವಾಗಿದೆ. ಇದಕ್ಕೆ ಸ್ಥಳೀಯರು ಹೊಂಡ ಎಂಬುದಾಗಿಯೂ ಕರೆಯುತ್ತಾರೆ. ಈ ಹೊಂಡದ ಸುತ್ತ 3 ಅಡಿ ಅಗಲದ ಪೌಳಿಗೋಡೆ ಇದೆ. ನಾಲ್ಕು ದಿಕ್ಕಿನಿಂದಲೂ ಹೊಂಡಕ್ಕೆ ಇಳಿಯಲು ಪಾವಟಿಗೆಗಳಿವೆ. ಈ ಕೊಳ ಕಟ್ಟಿದಾಗ ಹೊಂಡ ಸುತ್ತ ಅಷ್ಟದಿಕ್ಕುಗಳಲ್ಲಿಯೂ ಅಷ್ಟಮಂಟಪಗಳಿದ್ದು, ಈಗ ಆರು ಮಂಟಪಗಳು ಮಾತ್ರ ಉಳಿದಿವೆ. ಮುಖ್ಯ ಪ್ರವೇಶ ದ್ವಾರದಿಂದ ಕೊಳಕ್ಕೆ ಇಳಿಯಲು 52 ಗೊಡ್ಡ ದೊಡ್ಡ ಪಾವಟಿಗಳಿವೆ. ಉಳಿದ ಮೂರು ಭಾಗದಲ್ಲಿ 44 ಮೆಟ್ಟಿಲುಗಳಿವೆ. ಕಲ್ಯಾಣಿಯ ತಳಭಾಗದ ಉದ್ದ 150 ಅಡಿ, ಅಗಲ 160 ಅಡಿ ಇದ್ದು, ಮೊದಲು ಈ ಹೊಂಡದಿಂದಲೇ ಕುಡಿಯಲು ನೀರು ಬಳಸುತ್ತಿದ್ದರು.

ಈ ಮಂಟಪಗಳ ಮಧ್ಯೆ ಭವ್ಯ ಹಾಗೂ ನಯನ ಮನೋಹರವಾದ ವಸಂತಮಂಟಪವಿದೆ. ಇದಕ್ಕೆ ಸ್ಥಳೀಯರು ಕಾರಂಜಿ ಮಂಟಪ ಎಂದು ಸಹ ಕರೆಯುತ್ತಾರೆ. ಇದು ಸಹ ಪ್ರವಾಸಿಗರ ಕಣ್ಮನ ಸೆಳೆಯುವ ಐತಿಹಾಸಿಕ ತಾಣವಾಗಿದೆ.

English summary
Best tourist places in Davanagere district to celebrate New Year 2023. Here see complete details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X