ದಾವಣಗೆರೆ ನಗರ ದೇವಿಗೆ ಗಣ್ಯರ ಸಮ್ಮುಖದಲ್ಲಿ ವಿಶೇಷ ಅಭಿಷೇಕ
ದಾವಣಗೆರೆ, ಮೇ 14: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಇಂದು ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ಮಾಡುವುದರ ಮೂಲಕ ಮಹಾಮಾರಿ ಕೊರೊನಾ ವೈರಸ್ ಸೋಂಕು ರೋಗವನ್ನು ತಡೆಗಟ್ಟುವಂತೆ ಸಂಕಲ್ಪ ಮಾಡಲಾಯಿತು.
Recommended Video
ಗ್ರೀನ್ ಝೋನ್ ನಲ್ಲಿರುವ ರಾಮನಗರದಲ್ಲಿ ಆತಂಕ! ಈ ಟೈಮ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಕಿತ್ತಾ! | Ramanagara
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಗಿದ್ದ ಲಾಕ್ ಡೌನ್ ಪರಿಣಾಮ ಕಳೆದ 50 ದಿನಗಳಿಂದ ಸಾರ್ವಜನಿಕವಾಗಿ ಪೂಜಾ- ಪುನಸ್ಕಾರಗಳನ್ನು ನಿರ್ಬಂಧಿಸಲಾಗಿದ್ದ ದುಗ್ಗಮ್ಮನ ದೇವಸ್ಥಾನದಲ್ಲಿ, ಇಂದು ಗಣ್ಯರ ಸಮ್ಮುಖದಲ್ಲಿ ವಿಶೇಷ ಅಭಿಷೇಕ ನಡೆಸಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಆದೇಶ ಮತ್ತು ದೇವಸ್ಥಾನದ ಧರ್ಮದರ್ಶಿಗಳ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಹಿರಿಯ

ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳ ನಿರ್ದೇಶನದ ಮೇರೆಗೆ ಈ ಪೂಜೆಯನ್ನು ನೆರವೇರಿಸಲಾಯಿತು.












Click it and Unblock the Notifications