• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ಮತ್ತೆ ಆರು ಪಾಸಿಟಿವ್: ರೆಡ್ ಝೋನ್ ಪಕ್ಕಾ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಮೇ 1: ದಾವಣಗೆರೆಯಲ್ಲಿ ಮತ್ತೆ ಕೊರೊನಾ ವೈರಸ್ ಮಹಾಮಾರಿ ರೌದ್ರನರ್ತನ ಹೆಚ್ಚಾಗಿದೆ. ಇಂದು 6 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಈ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪಟ್ಟಿ ಹೆಚ್ಚಾಗುತ್ತಲೇ ಇದೆ. ನಿನ್ನೆಯಷ್ಟೇ ಇಬ್ಬರಿಗೆ ಸೋಂಕು ತಗುಲಿತ್ತು. ನಿನ್ನೆ ಸೋಂಕು ಪತ್ತೆಯಾದ ನರ್ಸ್ ನ 16 ವರ್ಷದ ಪುತ್ರನಿಗೆ ಸೋಂಕು ತಗುಲಿದೆ.

ಕೊರೊನಾ ಸೋಂಕು ತಗುಲಿದ್ದ ವೃದ್ಧನಿಂದ 1 ವರ್ಷದ ಮಗು ಸೇರಿ 5 ಮಂದಿಗೆ ಸೋಂಕು ಹರಡಿದೆ. ವೃದ್ಧನ 3 ಜನ ಸೊಸೆಯರು, ಪುತ್ರ ಹಾಗೂ ಮೊಮ್ಮಗನಿಗೆ ಸೋಂಕು ಹರಡಿದೆ.

ಕಳೆದ 2 ದಿನಗಳಿಂದ ಸೋಂಕು ಹರಡುತ್ತಿರುವುದು ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಗ್ರೀನ್ ಜೋನ್ ಲ್ಲಿದ್ದ ದಾವಣಗೆರೆ ಇದೀಗ ಕೆಂಪು ವಲಯಕ್ಕೆ ಹೋಗುವ ಸಾಧ್ಯತೆ ಇದೆ. ಕೊರೊನಾ ಸೋಂಕು ತಗುಲಿರುವವರ ಟ್ರಾವೆಲ್ ಇತಿಹಾಸಕ್ಕೆ ಜಿಲ್ಲಾಡಳಿತ ಮುಂದಾಗಿದೆ.

English summary
Coronavirus infection has been detected in 6 people in Davanagere today, creating anxiety among people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X