"ಬಿಜೆಪಿ ನಾಯಕರ ಮನೆ ಮೇಲೆ ಏಕೆ ದಾಳಿ ಮಾಡಿಲ್ಲ?"; ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಸೆಪ್ಟೆಂಬರ್ 4: "ಬಿಜೆಪಿ ಇಡಿ ಮತ್ತು ಐಟಿಯನ್ನು ಇಟ್ಟುಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ" ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದರು.
ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ: 15 ಜನರ ಮೇಲೆ ಎಫ್ ಐಆರ್
ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು "ಇಡಿ ಮತ್ತು ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನವರ ಮನೆ ಮೇಲೆ ಮಾತ್ರ ದಾಳಿ ಮಾಡುತ್ತಿದ್ದಾರೆ. ಈ ಸೇಡಿನ ರಾಜಕಾರಣದಿಂದ ರಾಜ್ಯಾದ್ಯಂತ ಗಲಾಟೆ ಆಗುತ್ತಿದೆ. ಬಿಜೆಪಿ ಈ ದ್ವೇಷದ ರಾಜಕಾರಣ ಬಿಡಬೇಕು. ಗುಜರಾತಿನ ಶಾಸಕರನ್ನು ಡಿಕೆಶಿ ಕರೆತಂದಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇಡಿ ಮತ್ತು ಐಟಿ ಅಧಿಕಾರಿಗಳು ಬಿಜೆಪಿ ನಾಯಕರ ಮನೆ ಮೇಲೆ ಏಕೆ ದಾಳಿ ಮಾಡಿಲ್ಲ" ಎಂದು ಪ್ರಶ್ನಿಸಿದರು.
ಹಾಗಿದ್ದರೆ ಇಷ್ಟುದಿನ ಡಿಕೆ ಶಿವಕುಮಾರ್ ಮಾಧ್ಯಮದ ಮುಂದೆ ಹೇಳಿದ್ದೆಲ್ಲಾ ಸುಳ್ಳಾ?
"ಇಡಿ, ಐಟಿ, ಸಿಬಿಐನಂತಹ ಸರ್ಕಾರಿ ಕಚೇರಿಗಳನ್ನು ಬಿಜೆಪಿಯವರು ದುರ್ಬಳಕೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನವರ ಮನೆ ಮೇಲೆ ಐಟಿ ದಾಳಿ ನಡೆಸಿದರು, ರೇವಣ್ಣನ ಸಂಬಂಧಿಕರ ಮನೆ ಮೇಲೆ ಕೂಡ ದಾಳಿ ನಡೆಸಿದರು. ಇದು ಸೇಡಿನ ರಾಜಕಾರಣವಲ್ಲದೇ ಮತ್ತೇನು?" ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.