• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತ್ಯಾಚಾರಿಗಳಿಗೆ ಘೋರಶಿಕ್ಷೆಯಾಗಬೇಕು : ನಟ ಯಶ್

ಸಮಾಜದಲ್ಲಿ ಅತ್ಯಾಚಾರದಂಥ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದು ದುರಂತ. ಇಂಥ ದುಷ್ಕೃತ್ಯ ಎಸಗುತ್ತಿರುವವರ ಅತ್ಯಾಚಾರಿಗಳಿಗೆ ಘೋರ ಶಿಕ್ಷೆ ವಿಧಿಸಬೇಕು. ಇದು ಎಲ್ಲರಿಗೂ ಪಾಠವಾಗಬೇಕು ಎಂದು ಎಂದು ನಟ ಯಶ್ ಆಗ್ರಹಿಸಿದ್ದಾರೆ.
By Mahesh
|
Google Oneindia Kannada News

ದಾವಣಗೆರೆ, ಫೆಬ್ರವರಿ 27: ಸಮಾಜದಲ್ಲಿ ಅತ್ಯಾಚಾರದಂಥ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದು ದುರಂತ. ಇಂಥ ದುಷ್ಕೃತ್ಯ ಎಸಗುತ್ತಿರುವವರ ಅತ್ಯಾಚಾರಿಗಳಿಗೆ ಘೋರ ಶಿಕ್ಷೆ ವಿಧಿಸಬೇಕು. ಇದು ಎಲ್ಲರಿಗೂ ಪಾಠವಾಗಬೇಕು ಎಂದು ನಟ ರಾಕಿಂಗ್ ಸ್ಟಾರ್ ಯಶ್ ಆಗ್ರಹಿಸಿದ್ದಾರೆ.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಯಶ್ ಮಾತನಾಡಿದರು. ದಕ್ಷಿಣ ಭಾರತದ ಬಹುಭಾಷಾ ನಟಿ ಮೇಲೆ ನಡೆದಿರುವ ಹಲ್ಲೆಯನ್ನು ಯಶ್, ತೀವ್ರವಾಗಿ ಖಂಡಿಸಿದರು. ಸಮಾಜದಲ್ಲಿ ಇಂತಹ ಘಟನೆಗಳು ನಡೆದಿರುವುದು ಅತ್ಯಂತ ಖಂಡನೀಯ. ಇನ್ನೊಮ್ಮೆ ಇಂಥ ದುರ್ಘಟನೆ ನಡೆಯದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ. ಇಂಥ ನೀಚ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಸಮಾಜದ ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ಕೊಡುವಂತಾಗಬೇಕು. ಆಗ ಮಾತ್ರ ಇಂಥ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು.

ಸನ್ಮಾನ : ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಬರ ಅಧ್ಯಯನ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದಾರೆ.

ಈ ಪ್ರವಾಸ ಸಂದರ್ಭದಲ್ಲಿ ದಾವಣಗೆರೆಗೆ ಆಗಮಿಸಿದ್ದ ಯಶ್ ಅವರನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಮನೆಯಲಿ ಸನ್ಮಾನಿಸಿದರು. ಶಿವರಾತ್ರಿ ಮುಗಿಸಿಕೊಂಡು ಕೊಪ್ಪಳ, ಕಲಬುರಗಿ ಕಡೆಗೆ ಯಶ್ ಪ್ರಯಾಣ ಬೆಳಸಿದರು.

English summary
Rapist should get capital punishment said actor Yash in Davanagere. Yash is on tour to study drought situation in North Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X