Power Cut: ಈ ಪ್ರದೇಶಗಳಲ್ಲಿ ಇಂದು ಕರೆಂಟ್‌ ಕಟ್‌: ಎಲ್ಲೆಲ್ಲಿ ತಿಳಿಯಿರಿ

Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇಂದು ಜೂನ್‌ 14ರಂದು ದಾವಣಗೆರೆ ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಗರದ ಪಿ.ಜೆ.ಫೀಡರ್‌ನಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆ ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Power Cut in Davanagere s These Areas on june 14 Know details

ಎಲ್ಲೆಲ್ಲಿ ವಿದ್ಯುತ್ ವ್ಯುತ್ಯಯ?: ಹೊಸ ಪೊಲೀಸ್‍ ಕ್ವಾಟ್ರಸ್, ಅರುಣ ಚಿತ್ರಮಂದಿರ, ವಿಶ್ವಾಸ ಅಪಾರ್ಟಮೆಂಟ್, ಎಂ.ವಿ ಪಾರ್ಕ್, ರಾಮ್ & ಕೊ ಸರ್ಕಲ್, ಪಿ.ಜೆ. ಬಡಾವಣೆ, ಎಂ.ಸಿ.ಸಿ.ಎ ಬ್ಲಾಕ್ 1, 2ನೇ, 3ನೇ ಮೇನ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ವಿದ್ಯುತ್ ಸಮಸ್ಯೆ ತಡೆಯಲು ಕಾಮಗಾರಿ: ಚಿಕ್ಕಮಗಳೂರಿನಲ್ಲಿ ಮಳೆಗಾಲದ ಸಿದ್ಧತೆಗಾಗಿ ಮೆಸ್ಕಾಂ ವಿದ್ಯುತ್ ಕಾಮಗಾರಿಗಳನ್ನು ಕೈಗೊಂಡಿದ್ದು, ಆಲ್ದೂರು ಉಪವಿಭಾಗದ ಹಲವು ಗ್ರಾಮಗಳಲ್ಲಿ ಜೂನ್ 7ರಿಂದ ಜೂನ್ 14ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿತ್ತು. ಇದೀಹ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಸ್ವಲ್ಪ ತಗ್ಗಿರುವ ಹಿನ್ನೆಲೆ ಮುಂಗಾಲಿನಲ್ಲಿ ವಿದ್ಯುತ್ ಸಮಸ್ಯೆಗಳನ್ನು ನಿಯಂತ್ರಿಸಲು ಈ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.

ಆಲ್ದೂರು ಉಪವಿಭಾಗದ ಕಂಚಿನಕಲ್ಲು ದುರ್ಗದ ಹೊಸ ಫೀಡರ್ ಕಾಮಗಾರಿಯಿಂದ ಜೂನ್ 10ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಸಾರಗೋಡು, ಗುಡ್ಡದೂರು, ಆಲ್ದೂರು ಟೌನ್, ಗುಲ್ಲನ್‌ಪೇಟೆ, ಹಾದಿ, ಕೆರೆಮಕ್ಕಿ, ಶಂಕರಫಾಲ್ಸ್ ಫೀಡರ್‌ನಿಂದ ವಿದ್ಯುತ್ ಪಡೆಯುವ ಗ್ರಾಮಗಳಾದ ಹುಯಿಗೆರೆ, ಆಲ್ದೂರು, ಕೆಳಗೂರು, ಸತ್ತಿಹಳ್ಳಿ, ಬಸ್ಕಲ್, ದೊಡ್ಡಮಾಗರವಳ್ಳಿ, ಕೂದುವಳ್ಳಿ, ಆಣೂರು, ಬೈಗೂರು, ಬಸರವಳ್ಳಿ, ದೇವದಾನ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿತ್ತು.

ಅಲ್ಲದೆ, ಆಲ್ದೂರು ಉಪವಿಭಾಗದ ಸಾರಗೋಡು ಶಾಖೆಯ ಮಾಗುಂಡಿ ಫೀಡರ್ ಲಿಂಕ್‌ಲೈನ್‌ಗೆ ಹುಯಿಗೆರೆ ಗ್ರಾಮ ಪಂಚಾಯಿತಿಗೆ ಪ್ರತ್ಯೇಕ ಮಾರ್ಗ ಎಳೆಯುವ ಕಾಮಗಾರಿ ಹಿನ್ನೆಲೆ ಜೂನ್ 7ರಿಂದ 14ರ ವರೆಗೆ ಬನ್ನೂರು, ಜಕ್ಕಣಕ್ಕಿ, ಕಾರ್ಕಿ, ಮಾಗುಂಡಿ, ಹಮ್ಮಿ, ಮಹಲ್‌ಗೋಡು, ಅಂಡವಾಣಿ, ಕರಗಣೆ, ಸಣ್ಣಮನೆ, ಮಾವಿನಕಟ್ಟೆ ಗ್ರಾಮಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿತ್ತು.

ಮೆಸ್ಕಾಂನ ಆಲ್ದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದರು. ಮಳೆಗಾಲದಲ್ಲಿ ವಿದ್ಯುತ್ ಸರಬರಾಜಿನ ಸ್ಥಿರತೆಯನ್ನು ಖಾತ್ರಿಪಡಿಸಲು ಈ ಕಾಮಗಾರಿಗಳು ಅಗತ್ಯ ಆಗಿವೆ ಅಂತಲೂ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+