ಉತ್ತರಪ್ರದೇಶಕ್ಕೆ ಹೋಗಲು ಸಜ್ಜಾಗಿದ್ದ ವ್ಯಾಪಾರಿಗಳನ್ನು ತಡೆದ ಪೊಲೀಸರು
ದಾವಣಗೆರೆ, ಮೇ 16: ಉತ್ತರಪ್ರದೇಶದಿಂದ ವ್ಯಾಪಾರಕ್ಕಾಗಿ ನಗರಕ್ಕೆ ಬಂದ ಪಾನಿಪೂರಿ ವ್ಯಾಪಾರಿಗಳು ತವರು ರಾಜ್ಯಕ್ಕೆ ಈರುಳ್ಳಿ ಲಾರಿಯಲ್ಲಿ ಹೋಗುವುದಕ್ಕೆ ಸಜ್ಜಾಗಿದ್ದ ವೇಳೆ ಪೊಲೀಸರು ಶಿವಪ್ಪಯ್ಯ ಸರ್ಕಲ್‌ನಲ್ಲಿ ತಡೆಹಿಡಿದಿದ್ದಾರೆ.
Recommended Video
ಸೇವಾಸಿಂಧುನಲ್ಲಿ ಅರ್ಜಿ ಸಲ್ಲಿಸಿದ್ದರೂ ಇವರಿಗೆ ಅನುಮತಿ ಸಿಕ್ಕಿರಲಿಲ್ಲ. ಇಲ್ಲಿನ ಶಿವಪ್ಪಯ್ಯ ವೃತ್ತದ ಬಳಿಯ ಖಾಲಿ ಜಾಗದಲ್ಲಿ ಉತ್ತರಪ್ರದೇಶದ ಪ್ರಯಾಗಕ್ಕೆ ಹೋಗುತ್ತಿದ್ದ 70ಕ್ಕೂ ಹೆಚ್ಚು ವ್ಯಾಪಾರಿಗಳನ್ನು ಇಂದು ಪೊಲೀಸರು ತಡೆದಿದ್ದಾರೆ. ನಗರದಲ್ಲಿ ಪಾನಿಪೂರಿ ಹಾಗೂ ಟೀ ಮಾರಾಟ ಮಾಡುವ ಸುಮಾರು 120ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ವೇಳೆ ಉತ್ತರ ಪ್ರದೇಶದಿಂದ ಈರುಳ್ಳಿ ಲಾರಿಯೊಂದು ದಾವಣಗೆರೆಗೆ ಬಂದಿರುವುದು ಗೊತ್ತಾಗಿದೆ.
ಆ ಚಾಲಕನ ಜೊತೆ ಇಲ್ಲಿನ ಪಾನಿಪೂರಿ ಮಾರಾಟ ಮಾಡುವ ವ್ಯಕ್ತಿ ವ್ಯವಹಾರ ಕುದುರಿಸಿದ್ದಾನೆ. ಒಬ್ಬರಿಗೆ ₹2 ಸಾವಿರ ನೀಡಿದರೆ ನಾಲ್ಕರಿಂದ 5 ಮಂದಿಯನ್ನು ಕರೆದೊಯ್ಯುತ್ತೇನೆ ಎಂದು ಚಾಲಕ ಹೇಳಿದ್ದಾನೆ. ಒಬ್ಬರಿಂದ ಮತ್ತೊಬ್ಬರಿಗೆ ವಿಷಯ ತಿಳಿದು 70ಕ್ಕೂ ಹೆಚ್ಚು ಮಂದಿ ತೆರಳಲು ಅನುವಾದ ವಿಷಯ ತಿಳೀದು ಪೊಲೀಸರು ತಡೆದಿದ್ದಾರೆ.

ಊಟ ತಿಂಡಿ ಇಲ್ಲ: ಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಗಿತಗೊಂಡಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಇದರಿಂದಾಗಿ ಊಟ ತಿಂಡಿಗೂ ಪರದಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. 'ನನ್ನ ಮಗನಿಗೆ ಹೃದಯ ಸಮಸ್ಯೆ ಇದ್ದು, ಆತನಿಗೆ ಚಿಕಿತ್ಸೆಗೆ ಕೊಡಿಸಲು ಹಣವಿಲ್ಲದಂತಾಗಿದೆ. ನಮಗೆ ತುಂಬಾ ಸಮಸ್ಯೆ ಇದೆ. ನಾವು ಊರಿಗೆ ಹೋಗಲೇಬೇಕಾಗಿದೆ' ಎಂದು ಹೇಳಿದ್ದಾರೆ ವ್ಯಾಪಾರಿ ಅಜಯ್ ಕುಮಾರ್. 'ಸೇವಾಸಿಂಧುವಿನಲ್ಲಿ ಪಾನಿಪೂರಿ ಮಾರಾಟಗಾರರು ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕಿದೆ' ಎಂದು ಪೇದೆಯೊಬ್ಬರು ತಿಳಿಸಿದ್ದಾರೆ.












Click it and Unblock the Notifications