ಹುಡುಗನ ಮಾರು ವೇಷದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಹುಡುಗಿ ಸಿಕ್ಕಿಬಿದ್ದಳು
ದಾವಣಗೆರೆ, ಅಕ್ಟೋಬರ್ 12: ಹುಡುಗನ ವೇಷದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಹುಡುಗಿಯನ್ನು ದಾವಣಗೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಈ ಘಟನೆ ದಾವಣಗೆರೆಯ ಜಗಳೂರಿನಲ್ಲಿ ಈ ಘಟನೆ ನಡೆದಿದೆ. ಚಾಲಾಕಿ ಬಾಲಕಿ ಹುಡುಗನ ಮಾರು ವೇಷದಲ್ಲಿ ಬಂದು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಾಲಾಕಿ ಬಾಲಕಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಬಾಲಕಿ ಬೇಕರಿಯಲ್ಲಿ ಕಣ್ಣು ಮುಚ್ಚಿ ಕಣ್ತೆರುಯುವಷ್ಟರಲ್ಲಿ ಜೇಬಿನಿಂದ ಹಣ ತೆಗೆಯುತ್ತಿದ್ದಳು.
ಎರಡು ದಿನಗಳ ಹಿಂದೆ ಬಾಲಕನೊಬ್ಬನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಗುರುವಾರ ಬಾಲಕಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇವೆಲ್ಲವನ್ನೂ ನೋಡಿದ ಮೇಲೆ ಮರುದಿನ ಅವರನ್ನು ನಾವು ಗಮನಿಸುತ್ತಿದ್ದೆವು. ಕಳ್ಳತನಕ್ಕೆ ಹೊಂಚು ಹಾಕಿ, ತಪ್ಪಿಸಿಕೊಂಡು ಹೋಗುತ್ತಿದ್ದಾಗ ಹಿಡಿದುಕೊಂಡು ಬಂದೆ. ನಂತರ ಅದು ಹುಡುಗ ಅಲ್ಲ ಹುಡುಗಿ ಎಂದು ತಿಳಿಯಿತು ಎಂದರು.
ಹಾಸನ ಜಿಲ್ಲೆಯ ಅರಸೀಕೆರೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಬಾಲಕಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಗಳೂರಿನಲ್ಲಿ ಪ್ರಕರಣ ದಾಖಲಾಗದ ಹಿನ್ನೆಲೆ ಬಾಲಕಿಯನ್ನ ಅರಸೀಕೆರೆ ಠಾಣೆಗೆ ಒಪ್ಪಿಸಲಾಗಿದೆ.
ಒಂದು ವಾರದಿಂದ ಈ ರೀತಿ ಹುಡುನಂತೆ ಪ್ಯಾಂಟು, ಶರ್ಟ್, ಶೂ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದಳು ಇವಳ ಜತೆ ಒಂದು ಮೂರ್ನಾಲ್ಕು ಅಪ್ರಾಪ್ತರ ಗ್ಯಾಂಗ್ ಇದೆ. ಕೈಯಲ್ಲಿ ಕವರ್ ಹಿಡಿದುಕೊಂಡು ಜೇಬಿಗೆ ಕತ್ತರಿ ಹಾಕುತ್ತಿದ್ದಳು ಎಂದು ಜಗಳೂರು ಪಟ್ಟಣದ ಇಶಾನ್ ಬೇಕರಿ ಮಾಲೀಕ ತಿಳಿಸಿದ್ದಾರೆ.
ಮಕ್ಕಳು ಈ ವಯಸ್ಸಿನಲ್ಲಿಯೇ ಹೊಟ್ಟೆ ಪಾಡಿಗಗಿ ಇಂತಹ ದಂಧೆಗಿಳಿದರೆ ಮುಂದಿನ ದಿನಗಳಲ್ಲಿ ಸಮಾಜ ಶಾಂತಿಯುತವಾಗಿರಲು ಸಾಧ್ಯವಿಲ್ಲ, ಆದರೆ ಈ ಹಂತದಲ್ಲಿಯೇ ಮಕ್ಕಳಿಗೆ ತಿಳಿ ಹೇಳಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಸೂಚಿಸುವುದು ಸೂಕ್ತ.












Click it and Unblock the Notifications