ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ರಸ್ತೆಗೆ ಬೇಲಿ‌ ಹಾಕಿದ ಭೂಪ, ತಕ್ಕ ಪಾಠ ಕಲಿಸಿದ ಜನರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 28: ಅದು ತಲೆತಲಾಂತರದಿಂದ ಇದ್ದ ಮುಖ್ಯ ರಸ್ತೆ.‌ ಆದರೆ ಪಕ್ಕದಲ್ಲಿದ್ದ ಸೈಟ್ ಮಾಲೀಕ ಈ ರಸ್ತೆ ಜಾಗ ನಂದು ಎಂದು ರಾತ್ರೋ ರಾತ್ರಿ ಕಲ್ಲಿನ ಬೇಲಿ ಹಾಕಿದ್ದ. ಇದರಿಂದಾಗಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಪರದಾಡುವಂತಾಗಿತ್ತು. ಇದರಿಂದ ಬೇಸತ್ತ ಸ್ಥಳೀಯರು ಕಲ್ಲಿನ ಕಂಬ ಪುಡಿ ಪುಡಿ ಮಾಡಿದ ಘಟನೆ ದಾವಣಗೆರೆಯ ಹಳೇ ಕುಂದವಾಡ ಗ್ರಾಮದಲ್ಲಿ ನಡೆದಿದೆ.

ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಶೋರೂಂ ಮಾಲೀಕ ರಸ್ತೆ ನಂದು ಎಂದು ರಾತ್ರೋರಾತ್ರಿ ಕಲ್ಲಿನ ಕಂಬ ನೆಟ್ಟು ಬಿಟ್ಟಿದ್ದ. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು, ಜನರು ರಸ್ತೆ ದಾಟಲು ಪರದಾಟ ಅನುಭವಿಸಿದರು.

ದಾವಣಗೆರೆ ಗ್ರಾಮೀಣ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್‌ ಶಾಕ್ ನೀಡಿದ ಬೆಸ್ಕಾಂ...! ದಾವಣಗೆರೆ ಗ್ರಾಮೀಣ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್‌ ಶಾಕ್ ನೀಡಿದ ಬೆಸ್ಕಾಂ...!

ಪರಿಸ್ಥಿತಿ ನೋಡಿ ನೋಡಿ ಸಾಕಾಗಿ ಜನರ ತಾಳ್ಮೆ ಕಟ್ಟಿಯೂ ಒಡೆಯಿತು. ಇದರಿಂದಾಗಿ ರೊಚ್ಚಿಗೆದ್ದಿದ್ದ ನೂರಾರು ಜನರು ಬೆಳಗ್ಗೆ ಆಗಮಿಸಿ ಕಲ್ಲಿನ ಕಂಬ, ತಂತಿ ಬೇಲಿ ಕಿತ್ತೊಗೆದು ರೋಷವೇಷ ಪ್ರದರ್ಶಿಸಿದರು.

Old Kundavada Villagers Removed Illegal Encroachment Of Road By Man

ಸ್ಥಳಕ್ಕೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಹಬದಿಗೆ ತಂದರು. ನಗರದ ಹಳೇ ಕುಂದುವಾಡಕ್ಕೆ ಹೋಗುವ ಮುಖ್ಯರಸ್ತೆಯು ಮಳೆ ಬಂದರೆ ನೀರಿನಿಂದ ಜಲಾವೃತಗೊಳ್ಳುತಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ಶುರು ಮಾಡಿತ್ತು. ಆಗ ಅಕ್ಕಪಕ್ಕದ ಸೈಟ್‌ನವರು ರಸ್ತೆಯೇ ನಂದು ಎಂದು ಕಿತಾಪತಿ ತೆಗೆದಿದ್ದರು.

ಚಳಿ ಬಿಡಿಸಿದ ಜನರು; ಜಾಗ ಸಿಗುತ್ತದೆ ಎಂದರೆ ನುಂಗುಬಾಕರು ರಸ್ತೆಯನ್ನು ಬಿಡುವುದಿಲ್ಲ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಟ್ರ್ಯಾಕ್ಟರ್ ಶೋರೂಂ ಮಾಲೀಕ ನನ್ನ ಸೈಟ್ ನಲ್ಲಿ ರಸ್ತೆಯೂ ಸೇರಿದೆ ಎಂದು ಕಲ್ಲಿನ ಬೇಲಿ ನೆಟ್ಟಿದ್ದ. ಅಷ್ಟೆ ಅಲ್ದೇ ಪಕ್ಕದಲ್ಲಿರುವ ಶಿವಗಂಗಾ ಕಲ್ಯಾಣ ಮಂಟಪದವರು, ಮಹಾಲಕ್ಷ್ಮಿ ಲೇ ಔಟ್ ಸೇರಿ ನಾಲ್ಕು ದಿಕ್ಕಿನಿಂದಲೂ 80 ಅಡಿ ಇರುವ ರಸ್ತೆಯನ್ನು ಅರ್ಧಕರ್ಧ ನುಂಗುಬಾಕರು ಗುಳುಂ ಮಾಡಿ ಬಿಟ್ಟಿದ್ದಾರೆ.

ದಾವಣಗೆರೆ; ಕಾನನಕಟ್ಟೆಯಲ್ಲಿ ನಿಗೂಢ ಜ್ವರ, ಜನರಲ್ಲಿ ಆತಂಕದಾವಣಗೆರೆ; ಕಾನನಕಟ್ಟೆಯಲ್ಲಿ ನಿಗೂಢ ಜ್ವರ, ಜನರಲ್ಲಿ ಆತಂಕ

Old Kundavada Villagers Removed Illegal Encroachment Of Road By Man

ರೊಚ್ಚಿಗೆದ್ದ ಗ್ರಾಮಸ್ಥರು ಕಲ್ಲು ಕಂಬ ಪುಡಿ ಪುಡಿ ಮಾಡಿ, ಒತ್ತುವರಿದಾರನಿಗೆ ಚಳಿ ಬಿಡಿಸಿದರು. ಅಲ್ಲದೇ ರಸ್ತೆ ಬಂದ್ ಆಗಿದ್ದರೂ ಕ್ರಮ ಕೈಗೊಳ್ಳದೇ ನಿದ್ರೆಯಲ್ಲಿದ್ದ ಪಾಲಿಕೆಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಿದರು.

ಗ್ರಾಮಸ್ಥರು ಸ್ವತಃ ರಸ್ತೆ ತೆರವುಗೊಳಿಸಿದರು; ಇನ್ನೂ ಸೈಟ್ ಮಾಲೀಕ ಈ ಜಾಗ ನಂದು ರಸ್ತೆಯನ್ನು ಮಧ್ಯದಿಂದ ಮಾಡಿ ಎಂದು ವಾದ ಮಾಡಿದರೇ, ಆ ಜಾಗ ಒತ್ತುವರಿ ಮಾಡಲಾಗಿದೆ, ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಹೇಳಿದ್ದಾರೆ. ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಗ್ರಾಮಸ್ಥರ ಸಮ್ಮುಖದಲ್ಲೇ ಕೆಲಸ ಆರಂಭಿಸಿದ್ದಾರೆ.

ಅದೇನೆ ಇರಲಿ, ಜಾಗ ಹದ್ದುಬಸ್ತು ಆದ ಮೇಲೆ ಜಾಗ ಯಾರದ್ದು ಎಂದು ತಿಳಿಯುತ್ತೇ, ಅದಕ್ಕೂ ಮುಂಚೆ ರಸ್ತೆಯೇ ನಂದು ಎಂದು ಮೊಂಡತನ ಪ್ರದರ್ಶನ ಮಾಡಿ ರಸ್ತೆಗೆ ಬೇಲಿ ಹಾಕಿ ಜನರಿಗೆ ತೊಂದರೆ ಕೊಟ್ಟಿದ್ದು ಸರಿಯಲ್ಲ. ಇದರಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಸ್ವತಃ ರಸ್ತೆ ತೆರವುಗೊಳಿಸಿಕೊಂಡು ಸಂಚಾರ ಮಾಡಿ ಸಂಭ್ರಮ ಪಟ್ಟಿದ್ದು ಒಗ್ಗಟ್ಟಿಗೆ ಬಲವಿದೆ ಎಂದು ತೋರಿಸಿಕೊಟ್ಟಿದೆ.

English summary
Davanagere Old Kundavada villagers removed illegal encroachment of road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X