ದಾವಣಗೆರೆ: ಶಾಸಕರ ಮನೆ ಮೇಲಿನ ದಾಳಿಗೆ ಸಂಸದ ಸಿದ್ದೇಶ್ವರ್ ಖಂಡನೆ
ದಾವಣಗೆರೆ, ಆಗಸ್ಟ್ 13: ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ದುರಾದೃಷ್ಟಕರ, ಶಾಸಕರ ಮನೆ ಮೇಲೆಯೇ ದಾಳಿ ನಡೆಸಿರುವುದು ಮನುಷ್ಯತ್ವವೇ ಅಲ್ಲ. ಯಾರೇ ಎಷ್ಟೇ ದೊಡ್ಡವರಾಗಿರಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ತಿಳಿಸಿದರು.
Recommended Video
ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿಂದು ಸಂಸದ ಜಿ.ಎಂ. ಸಿದ್ದೇಶ್ವರ್ ತರಳಬಾಳು ವೃತ್ತ, ಆರೂಢ ದಾಸೋಹಿ ಮಾಗನೂರು ಬಸಪ್ಪ ರಸ್ತೆ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಬಹಳ ದಿನಗಳಿಂದ ತರಳಬಾಳು ವೃತ್ತ, ಮಾಗನೂರು ಬಸಪ್ಪ ರಸ್ತೆ ಹೆಸರಿಡಲು ತೀರ್ಮಾನಿಸಲಾಗಿತ್ತು. ಏಳು ವರ್ಷದ ಮಹಾನಗರ ಪಾಲಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅನುಮತಿಯೂ ದೊರೆತಿತ್ತು. ಕಾರಣಾಂತರದಿಂದ ಅನಾವರಣ ಆಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಿರಿಗೆರೆಯ ಶಿವಕುಮಾರ ಹಾಗೂ ಡಾ.ಶಿವಮೂರ್ತಿ ಸ್ವಾಮೀಜಿಯವರ ಹೆಸರಿಟ್ಟಿರುವುದು ದಾವಣಗೆರೆಯ ಜನತೆಗೆ ಸಂತೋಷ ತಂದಿದೆ ಎಂದರು. ಶಾಸಕ ಎಸ್.ಎ ರವೀಂದ್ರನಾಥ್, ಮೇಯರ್ ಬಿ.ಜಿ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಶಿವಯೋಗಿ ಸ್ವಾಮಿ ಇತರರು ಇದ್ದರು.












Click it and Unblock the Notifications