ಹೊನ್ನಾಳಿ ಕ್ಷೇತ್ರದಲ್ಲಿ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ ಶಾಸಕ ಎಂಪಿಆರ್

ದಾವಣಗೆರೆ, ಜುಲೈ 17: ಬೆಂಗಳೂರಿನಿಂದ‌ ಹೊನ್ನಾಳಿ ತಾಲ್ಲೂಕಿನ ಸೋಮನಮಲ್ಲಾಪುರ ಗ್ರಾಮಕ್ಕೆ ಬಂದ ಇಬ್ಬರು ಯುವಕರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಗ್ರಾಮಸ್ಥರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು.

Recommended Video

      Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

      ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೋಮನಮಲ್ಲಾಪುರ ಹಾಗೂ ಎಚ್.ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಇಂದು ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರು ಸೀಲ್ ಡೌನ್ ನಲ್ಲಿನ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

      ಹೊನ್ನಾಳಿ ತಾಲೂಕಿನ ಸೋಮನಮಲ್ಲಾಪುರ ಹಾಗೂ ಎಚ್.ಗೋಪಗೊಂಡನಹಳ್ಳಿ ಗ್ರಾಮಕ್ಕೆ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಇರುವ ಬೆಂಗಳೂರಿನಿಂದ ಬಂದ ಇಬ್ಬರು ಯುವಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು.

      MLA Renukacharya Who Warned About Coronavirus Infection In Honnali

      ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿ ಜನರಿಗೆ ಮಾಸ್ಕ್ ನೀಡಿ ಕೊರೊನಾ ಬಗ್ಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಿದರು.

      ಎಚ್.ಗೋಪಗೊಂಡನಹಳ್ಳಿ ಗ್ರಾಮದ ಸೀಲ್ ಡೌನ್ ನಲ್ಲಿದ್ದ 16 ಕುಟುಂಬಗಳಿಗೆ ಹಾಗೂ ಸೋಮನಮಲ್ಲಾಪುರ ಗ್ರಾಮದ ಒಂದು ಕುಟುಂಬಕ್ಕೆ ಆಹಾರದ ಕಿಟ್ ನೀಡಿದರು.

      MLA Renukacharya Who Warned About Coronavirus Infection In Honnali

      ಗ್ರಾಮದ ಪ್ರತಿಯೊಂದು ಮನೆಗೂ ಮೂರರಿಂದ ನಾಲ್ಕು ಕಿಟ್ ನೀಡಿ ವೃದ್ಧೆಗೆ ಮಾಸ್ಕ್ ಹಾಕುವ ಮೂಲಕ ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ವಿನಾಕಾರಣ ಜನರು ಮನೆಯಿಂದ ಹೊರ ಬಾರದು, ಹಳ್ಳಿ ಹಳ್ಳಿಗೂ ಕೊರೊನಾ ಹೆಜ್ಜೆ ಇಡುತ್ತಿದ್ದು, ಗ್ರಾಮಸ್ಥರು ಜಾಗರೂಕತೆಯಿಂದ ಇರುವಂತೆ ಮನವಿ ಮಾಡಿದರು. ಗ್ರಾಮದ ಪ್ರತಿಯೊಂದು‌ ಮನೆಗೂ ಭೇಟಿ ನೀಡಿ ಕೊರೊನಾ ಸೋಂಕಿನ ಬಗ್ಗೆ ತಿಳಿ ಹೇಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+