• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿನ್ನೋರು ಇವರು ಅಯೋಗ್ಯರು, ಜನ ನಮ್ಮನ್ನು ಬೈತಾರೆ: ರಾಂಗ್ ಆದ ರೇಣುಕಾಚಾರ್ಯ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್‌ 16: ಜನ ನನಗೆ ಬೈಯ್ತಾರೆ, ಸಗಣಿ ತಿನ್ನೋರು ಇವರು. ಸುಮ್ಮನೆ ನಮ್ಮನ್ನು ಸೇರಿಸಿ ಹೇಳುತ್ತಾರೆ. ಕೆಳಗಿನಿಂದ ಮೇಲೆ ಹೋಗುತ್ತಂತೆ ಮಾಮೂಲಿ ಅಂತಾ ಎಂದು ಜನರಿಗೆ ಹೇಳುತ್ತಾರಂತೆ ಅಯೋಗ್ಯರು ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಕರೆ ಮಾಡಿ ತಾಂತ್ರಿಕ ಸಹಾಯಕರ ವಿರುದ್ಧ ದೂರಿನ ಸುರಿಮಳೆಗೈದಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ತಾಂತ್ರಿಕ ಸಹಾಯಕರುಗಳು ನಮ್ಮಿಂದ ಹಣ ಪಡೆಯುತ್ತಾರೆ ರೈತರು ಶಾಸಕ ಎಂ. ಪಿ. ರೇಣುಕಾಚಾರ್ಯರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಆಕ್ರೋಶಗೊಂಡಿರುವ ರೇಣುಕಾಚಾರ್ಯ ವಿವಿಧ ಇಲಾಖೆ ಅಧಿಕಾರಿಗಳ ಮುಂದೆಯೇ ತರಾಟೆಗೆ ತೆಗೆದುಕೊಂಡರು.

ಸಿಎಂ ಬದಲಾವಣೆ; ಎಂ. ಪಿ. ರೇಣುಕಾಚಾರ್ಯ ಹೇಳಿದ್ದೇನು?ಸಿಎಂ ಬದಲಾವಣೆ; ಎಂ. ಪಿ. ರೇಣುಕಾಚಾರ್ಯ ಹೇಳಿದ್ದೇನು?

Recommended Video

   Renukacharya ಅವರ ಡಾನ್ಸ್ ಹೇಗಿದೆ ನೋಡಿ | *Karnataka | OneIndia Kannada

   ಸಿಇಒಗೆ ಕರೆ ಮಾಡಿ ಎಲ್ಲಾ ತಿನ್ನೋದು ಇವರು, ನಮಗೆ ಕೆಟ್ಟ ಹೆಸರು. ನಾವು ರೈತರು ಹಾಗೂ ಅಡಿಕೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯೋಜನೆ ಮಾಡಿಸಲು ತುಂಬಾನೇ ಕಷ್ಟಪಟ್ಟಿದ್ದೇವೆ. ಆದರೆ ಇವರೆಲ್ಲಾ ಕಳ್ಳರು, ಲೂಟಿ ಮಾಡುತ್ತಿದ್ದಾರೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಆರು ಜನ ಇದ್ದು, ಎಲ್ಲರ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

   ನಮ್ಮ ಮಾನ, ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ದುಡ್ಡು ಕೊಟ್ಟರೆ ಮೂರು ವರ್ಷದ ಸಸಿಗೂ ಪರಿಹಾರ ನೀಡುತ್ತಾರೆ. ಕೊಟ್ಟಿಲ್ಲ ಅಂದರೆ ಆರು ತಿಂಗಳ ಸಸಿಗೆ ನೀಡೋದಿಲ್ವಂತೆ. ಎಲ್ಲರನ್ನೂ ಕೂಡಲೇ ಕೆಲಸದಿಂದ ತೆಗೆದು ಹಾಕಿ. ಸಂಬಂಧಪಟ್ಟ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೂ ಈ ವಿಚಾರ ಸಂಬಂಧ ಮಾತನಾಡುತ್ತೇನೆ. ಕೆಳಗಿನಿಂದ ಮೇಲಿನ ಅಧಿಕಾರಿಗಳಿಗೆ ಹೋಗುತ್ತೆ ಅಂತೀರಲ್ಲಾ, ಯಾರಿಗೆ ಕೊಡುತ್ತೀರಾ ಮಾಮೂಲು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

   MLA Renukacharya Lashes out against ZP officials for Seeking Money from Farmers

   ಕರಾಟೆ ಪಟುವಿಗೆ ಧನ ಸಹಾಯ
   ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೊನ್ನಾಳಿ ಕ್ಷೇತ್ರದ ಘಂಟಾಪುರ ಗ್ರಾಮದ ಎಂ.ವಿರೇಶ್ ಎಂಬ ಯುವಕ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಶಿವಮೊಗ್ಗದಲ್ಲಿ ಇದೇ ತಿಂಗಳು 20 ಮತ್ತು 21 ರಂದು ನಡೆಯಲಿರುವ ಮೂರನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ವೈಯಕ್ತಿಕವಾಗಿ ₹10,000/- ಧನಸಹಾಯ ಮಾಡಿ, ಶುಭ ಹಾರೈಸಿದೆ ಎಂದು ಟ್ವಿಟರ್‌ನಲ್ಲಿ ಸ್ವತಃ ರೇಣುಕಾಚಾರ್ಯ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.

   English summary
   Honnali MLA angry on Zilla Panchayat Technical Assistants for demand money for clear their work, and instruct to ceo sack the worker,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X