ಲಾಕ್ಡೌನ್ ದಿನವೇ ಬರ್ತ್ ಡೇ ಪಾರ್ಟಿ ಆಯೋಜಿಸಿದ ದಾವಣಗೆರೆ ಮೇಯರ್

ದಾವಣಗೆರೆ, ಜುಲೈ 5: ಲಾಕ್ಡೌನ್ ನಡುವೆಯೂ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಅವರು ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.

ದಾವಣಗೆರೆಯ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಇಂದು ಲಾಕ್ ಡೌನ್ ನಡುವೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಲಾಕ್ ಡೌನ್ ನಡುವೆಯೂ ಪಾಲಿಕೆ ಆವರಣಕ್ಕೆ ಬಂದಿರುವ ಮೇಯರ್ ಅಜಯ್ ಕುಮಾರ್ ಅಭಿಮಾನಿಗಳು ಹಾಗೂ ಪಾಲಿಕೆ ಸದಸ್ಯರು ಗುಂಪು ಗುಂಪಾಗಿ ಬಂದು ಮೇಯರ್ ಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಸಂಡೇ ಲಾಕ್ಡೌನ್ ವೇಳೆ ಹುಟ್ಟುಹಬ್ಬ ಬೇಕಿತ್ತಾ? ಎಂದು ವಿಡಿಯೋ ಮಾಡಿ ಪ್ರಶ್ನಿಸಿದವರಿಗೇ ವ್ಯಂಗ್ಯವಾಗಿ ಉತ್ತರ ನೀಡಿರುವ ಮೇಯರ್, ಇನ್ನೂ ಹೈಲೈಟ್ ಮಾಡಲಿ ಬಿಡಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

Mayor Of Davanagere Organized The Birthday Party On Lockdown Day

ಸುದ್ದಿಗಾರರೊಂದಿಗೆ ಮಾತನಾಡಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಲಾಕ್ಡೌನ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್ ವಿರುದ್ಧ ತಕ್ಷಣವೇ ಎಫ್‍ಐಆರ್ ದಾಖಲು ಮಾಡಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+