ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಮಠಕ್ಕೆ ಕಾಲಿಡಲ್ಲ ಎಂದು ಶಪಥ ಮಾಡಿಲ್ಲ, ಹಿರಿತನ ಪರಿಗಣಿಸದಿದ್ದಕ್ಕೆ ನೋವಿದೆ: ಮಹಾಂತರುದ್ರ ಸ್ವಾಮೀಜಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 17: ನನಗೆ ವಹಿಸಿದ್ದ ಮುರುಘಾ ಮಠದ ಒಂದೂವರೆ ತಿಂಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಶರಣ ಸಂಸ್ಕೃತಿ ಉತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಸೇರಿದಂತೆ ಉತ್ತಮ ಕೆಲಸ ಮಾಡುವ ಪ್ರಯತ್ನ ಮಾಡಿದೆ. ಮಠದ ಉತ್ತರಾಧಿಕಾರಿಯನ್ನಾಗಿ ಮುಂದುವರಿಸುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ, ಆಗಲಿಲ್ಲ. ಎಲ್ಲದಕ್ಕೂ ಭಾಗ್ಯ ಇರಬೇಕಲ್ವಾ, ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡದಿರುವುದಕ್ಕೆ ನನಗೆ ಅಸಮಾಧಾನ ಇದೆ ಎಂದು ಹೇಳುವುದಿಲ್ಲ. ಎಲ್ಲರಿಗೂ ಗೊತ್ತಾಗುವ ವಿಚಾರ ಅಲ್ಲವೇ? ಎಂದು ಮಹಾಂತರುದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಮುರುಘಾ ಮಠಕ್ಕೆ ಪ್ರಭಾರ ಅಧ್ಯಕ್ಷರ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ದಾವಣಗೆರೆ ತಾಲೂಕಿನ ಹೆಬ್ಬಾಳಾ ಮುರುಘಾ ಶಾಖಾ ಮಠದ ಹಿರಿಯ ಸ್ವಾಮೀಜಿ ಮಹಾಂತ ರುದ್ರ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶಿವಮೂರ್ತಿ ಸ್ವಾಮೀಜಿ ಬಂಧನದ ಬಳಿಕ ಮಠದ ಪ್ರಭಾರ ಉಸ್ತುವಾರಿಗಳಾಗಿದ್ದ ಶ್ರೀಗಳು ತಮ್ಮ ನೇಮಕಮಾಡದಿದ್ದಕ್ಕೆ ಸಾತ್ವಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ; ಅಧಿಕೃತ ಪ್ರಕಟಣೆಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ; ಅಧಿಕೃತ ಪ್ರಕಟಣೆ

ಮುರುಘಾ ಮಠದ ಪರಂಪರೆ ಬಹಳ ದೊಡ್ಡದು. ಕೋಟ್ಯಂತರ ಭಕ್ತರನ್ನು ಹೊಂದಿದೆ. ಈ ಮಠಕ್ಕೆ ಉತ್ತರಾಧಿಕಾರಿಯಾಗುವಂತೆ ನನಗೆ 32 ವರ್ಷಗಳ ಹಿಂದೆಯೇ ಆಗಿನ ಗುರುಗಳಾದ ಮಲ್ಲಿಕಾರ್ಜುನ ಜಗದ್ಗುರುಗಳು ಹೇಳಿದ್ದರು. ನನ್ನ ಮೇಲೆ ತುಂಬಾನೇ ಪ್ರೀತಿ ಅವರಿಗಿತ್ತು. ಜಯದೇವ ಜಗದ್ಗುರುಗಳ ಮಠಕ್ಕೆ ಪೀಠಾಧಿಪತಿಯಾಗು ಎಂಬ ಮಾತು ಹೇಳಿದ್ದರು. ಅದಕ್ಕೆ ನಾನು ನಯವಾಗಿಯೇ ತಿರಸ್ಕರಿಸಿದ್ದೆ. ಪಾಂಡಿತ್ಯ, ಸಂಸ್ಕೃತ ಸೇರಿದಂತೆ ಎಲ್ಲಾ ರೀತಿಯ ಅತ್ಯುತ್ತಮ ಜ್ಞಾನವುಳ್ಳವರನ್ನು ನೇಮಕ ಮಾಡುವಂತೆ ಹೇಳಿದ್ದೆ. ಆದರೆ ಈ ಬಾರಿ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಈಡೇರಲಿಲ್ಲ. ಎಲ್ಲದಕ್ಕೂ ಭಾಗ್ಯ ಇರಬೇಕು ಎಂದು ಹೇಳಿದರು.

ಮುರುಘಾ ಶರಣರೇ ಬಸವಪ್ರಭು ಸ್ವಾಮೀಜಿ ನೇಮಿಸಿದ್ದಾರೆ

ಮುರುಘಾ ಶರಣರೇ ಬಸವಪ್ರಭು ಸ್ವಾಮೀಜಿ ನೇಮಿಸಿದ್ದಾರೆ

ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಗೆ ಭಾಗ್ಯ ಇತ್ತು. ಹಾಗಾಗಿ, ಮಠದ ಉತ್ತರಾಧಿಕಾರಿಯಾಗಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಸ್ವತಃ ಮುರುಘಾಮಠದ ಡಾ. ಶಿವಮೂರ್ತಿ ಶರಣರು ನನ್ನನ್ನು ಚಿತ್ರದುರ್ಗದ ಮುರುಘಾ ಮಠಕ್ಕೆ ಕರೆಯಿಸಿಕೊಂಡಿದ್ದರು. ಮಠದ ವ್ಯವಸ್ಥಾಪಕರಾಗಿದ್ದ ಪರಮಶಿವಯ್ಯ ರಾತ್ರಿ 8 ಗಂಟೆಗೆ ಕರೆ ಮಾಡಿ ಬರುವಂತೆ ಆಹ್ವಾನ ನೀಡಿದ್ದರು.

ಅಂದು ಮುರುಘಾ ಶ್ರೀಗಳ ಜೊತೆ ಎಸ್ಪಿ, ಡಿಸಿ, ಸಮಾಜದ ಮುಖಂಡರು ಸಮಾಲೋಚನೆ ನಡೆಸುತ್ತಿದ್ದರು. ಶ್ರೀಗಳ ಮೇಲೆ ಒತ್ತಡ ಹಾಕುತ್ತಿದ್ದರು. ಆಗ ಶಿವಮೂರ್ತಿ ಶರಣರು ನಾನು ಶರಣಾಗತಿಯಾಗಬೇಕು. ಆದ ಕಾರಣ ನೀವೇ ಮಠದ ಜವಾಬ್ದಾರಿಯನ್ನು ನಾನು ವಾಪಸ್ ಬರುವವರೆಗೆ ನೋಡಿಕೊಳ್ಳಿ ಎಂದು ಮೌಖಿಕವಾಗಿ ಹೇಳಿದ್ದರು. ಹಾಗಾಗಿ ನಾನೂ ಒಪ್ಪಿಕೊಂಡಿದ್ದೆ. ಆದರೆಈಗ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸುವಂತೆ ಶ್ರೀಗಳೇ ಹೇಳಿದ್ದಾರೆ ಎಂದು ತಿಳಿಸಲಾಗಿದೆ. ಪತ್ರವನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ, ನಾನು ಹೆಬ್ಬಾಳ ಮಠಕ್ಕೆ ವಾಪಸ್ ಬಂದಿದ್ದೇನೆ ಎಂದು ಮಾಹಿತಿ ನೀಡಿದರು.

ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಮುರುಘಾ ಸ್ವಾಮಿ, ಸರ್ಕಾರಕ್ಕೆ ನೋಟಿಸ್ ಜಾರಿಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಮುರುಘಾ ಸ್ವಾಮಿ, ಸರ್ಕಾರಕ್ಕೆ ನೋಟಿಸ್ ಜಾರಿ

ಮಠಕ್ಕೆ ಕಾಲಿಡುವುದಿಲ್ಲ ಎಂದು ಅಪಪ್ರಚಾರ

ಮಠಕ್ಕೆ ಕಾಲಿಡುವುದಿಲ್ಲ ಎಂದು ಅಪಪ್ರಚಾರ

ಮುರುಘಾಮಠದ ಪೀಠಾಧಿಪತಿ ಸ್ಥಾನ ಕೈತಪ್ಪಿದ ಕಾರಣ ಚಿತ್ರದುರ್ಗದ ಮುರುಘಾ ಮಠಕ್ಕೆ ಹೋಗುವುದಿಲ್ಲ ಎಂಬ ಯಾವುದೇ ಶಪಥ ಮಾಡಿಲ್ಲ. ಇದೆಲ್ಲಾ ಶುದ್ಧ ಸುಳ್ಳು. ಮುರುಘಾ ಮಠದ ಮುರುಗೇಶ ದೇವರ ಪೂಜೆ, ಪುನಸ್ಕಾರ ಮಾಡುತ್ತೇನೆ. ಅನ್ನ ಉಂಡಿದ್ದೇನೆ. ಹೊಟ್ಟೆ ಹಸಿವಾದಾಗ ಪ್ರಸಾದ ಸೇವಿಸಿದ್ದೇನೆ. 18ನೇ ವರ್ಷದಿಂದಲೂ ಮುರುಗೇಶನ ಆರಾಧನೆ ಮಾಡಿಕೊಂಡು ಬಂದಿದ್ದೇನೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಮುರುಘಾ ಮಠದಿಂದ ಆಹ್ವಾನ ಬಂದರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಆಹ್ವಾನ ಬರದಿದ್ದರೆ ಹೋಗಲ್ಲ ಎಂದಷ್ಟೇ ಹೇಳಿದ್ದೇನೆ. ಆದರೆ ಕೆಲವರು ಮಠಕ್ಕೆ ಕಾಲಿಡುವುದಿಲ್ಲ ಎಂಬ ಅಪಪ್ರಚಾರ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಮುರುಗೇಶನ ಮರೆಯಲು ಅಸಾಧ್ಯ

ಮುರುಗೇಶನ ಮರೆಯಲು ಅಸಾಧ್ಯ

ನನ್ನ ಹಿರಿತನ ಪರಿಗಣಿಸಲಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಆಗಲಿಲ್ಲ. ಸುಮಾರು 46 ವರ್ಷಗಳಿಂದಲೂ ಸ್ವಾಮೀಜಿ ಆಗಿದ್ದೇನೆ. 1976ರಲ್ಲಿ ಹಾಸನ ಜಿಲ್ಲೆಯ ಅರಕಲಗೋಡು ಚಿಲುಮೆ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನನ್ನನ್ನು ನೇಮಕ ಮಾಡಲಾಗಿತ್ತು. ಮಲ್ಲಿಕಾರ್ಜುನ ಗುರುಗಳು ಈ ಘೋಷಣೆ ಮಾಡಿದ್ದರು. ಆಗ ದಸರಾ ಉತ್ಸವ ಕೂಡ ನಡೆಸಿದ್ದೆವು. ಆನಂತರ 1980ರಲ್ಲಿ ದಾವಣಗೆರೆ ತಾಲೂಕಿನ ಹೆಬ್ಬಾಳದ ಮುರುಘಾ ಶಾಖಾ ಮಠದಸ್ವಾಮೀಜಿಯಾಗಿ ನೇಕಮವಾದೆ. ಅಂದಿನಿಂದಲೂ ಗೋಶಾಲೆ, ರೈತರ ಬದುಕು ಹಸನಾಗಿಸುವುದು, ಧಾರ್ಮಿಕ ಕಾರ್ಯಕ್ರಮಗಳು, ಪೂಜೆ ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದೇನೆ.

ಹೈನುಗಾರಿಕೆ ಮೂಲಕ ಒಂದು ಸಾವಿರ ಜನರಿಗೆ ಗಿಣ್ಣ ನೀಡುವ ಕಾರ್ಯಕ್ರಮ ಏರ್ಪಡಿಸಿದ್ದೇನೆ. ಚಿತ್ರದುರ್ಗದ ಮುರುಘಾ ಮಠಕ್ಕೆ ತರಕಾರಿ ಸೇರಿದಂತೆ ನಮ್ಮ ಕೈಯಲ್ಲಾದಷ್ಟು ದಾಸೋಹ ಸೇವೆ ಮಾಡಿದ್ದೇವೆ. ಮುರುಗೇಶನ ಮರೆಯಲು ಅಸಾಧ್ಯ. ಎಲ್ಲವೂ ಆತನಿಂದಲೇ ಆಗಿರುವುದು. ನಾನು ಮರೆತರೆ ದೇವರು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಮುರುಘಾ ಶರಣರ ಜೊತೆ ಭಿನ್ನಮತ ಇಲ್ಲ

ಮುರುಘಾ ಶರಣರ ಜೊತೆ ಭಿನ್ನಮತ ಇಲ್ಲ

ಬಸವಪ್ರಭು ಸ್ವಾಮೀಜಿ ನೇಮಕ ಮಾಡಿರುವುದಕ್ಕೆ ನನ್ನ ವಿರೋಧ ಇಲ್ಲ, ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಮುರುಘಾ ಶರಣರ ಜೊತೆಯೂ ಭಿನ್ನಮತ ಇಲ್ಲ. ಅವರು ನಮ್ಮ ಗುರುಗಳು. ಈಗ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಬದ್ದನಿದ್ದೇನೆ. ಎಲ್ಲಾ ರೀತಿಯ ಬೆಂಬಲ, ಸಹಕಾರ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನ ಬಂದರೆ ಖಂಡಿತವಾಗಿಯೂ ಹೋಗುತ್ತೇನೆ. ಚಿತ್ರದುರ್ಗದ ಮುರುಘಾಮಠದಲ್ಲಿನ ಮುರುಗೇಶನಿಗೆ ಪೂಜೆ ಸಲ್ಲಿಸಿ ಬರುವುದನ್ನು ನಿಲ್ಲಿಸುವುದಿಲ್ಲ. ಹೋಗಬೇಕು ಎನಿಸಿದರೆ ಹೋಗಿಯೇ ಹೋಗುತ್ತೇನೆ. ಎಲ್ಲರಿಗೂ ಅಧಿಕಾರ ಒಲಿಯುವುದಿಲ್ಲ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕೆಳಗಿಳಿಯುವಾಗ ಅನೇಕರು ಅವರ ಬೆಂಬಲಿಗರು ಇದ್ದರು. ಆದರೆ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಒಲಿಯಿತು. ಯಾರಿಗೆ ಭಾಗ್ಯ ಇರುತ್ತದೆಯೋ ಅವರಿಗೆ ಸಿಗುತ್ತದೆ ಎಂದು ತಮಗೆ ಪೀಠಾಧಿಪತಿ ಪಟ್ಟ ಸಿಗದಿದ್ದಕ್ಕೆ ಉದಾಹರಣೆ ಸಮೇತ ಅಸಮಾಧಾನ ಹೊರ ಹಾಕಿದರು.

ಲಿಂಗಾಯತ ಸಮಾಜದ ಮುಖಂಡರು ಈಗಲೂ ನನ್ನ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಈಗಲೂ ಸಹ ಅಷ್ಟೇ ಅಭಿಮಾನ ತೋರುತ್ತಾರೆ. ಮುರುಘಾ ಶ್ರೀ ಶಿವಮೂರ್ತಿ ಶರಣರ ಮನಸ್ಸಿನಲ್ಲಿ ಏನಿತ್ತೋ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ನಾನು ಹೇಳಲು ಆಗದು. ಈಗ ನೇಮಕ ಮಾಡಿರುವುದರ ಬಗ್ಗೆಯೂ ನನ್ನದು ಅಷ್ಟೇ ಅಭಿಪ್ರಾಯ. ಒಟ್ಟಿನಲ್ಲಿ ಯಾರೇ ಆಗಲಿ, ಉತ್ತಮ ಕೆಲಸ ಮಾಡುವಂತಾಗಲಿ ಎಂಬುದಷ್ಟೇ ನಮ್ಮ ಆಶಯ ಎಂದು ತಿಳಿಸಿದರು.

English summary
Dhavanagere Murugha mutt seer Mahanta Rudraswamy was disappointed that he was not selected as the president of Murugha Mutt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X